ಬ್ಯಾಗ್ ಕದಿಯಲು ಬಂದ ಕಳ್ಳರು ತಲೆ ಮೇಲೆ ಕೈ ಹಿಡಿದು ಕೂರುವಂತೆ ಮಾಡಿದ ಹುಡುಗಿ|ಈಕೆಯ ಈ ಖತರ್ನಾಕ್ ಐಡಿಯಾದ ವಿಡಿಯೋ ವೈರಲ್|ಕೊನೆಗೆ ಅನಿಸೋ ಪ್ರಶ್ನೆ ಮಾತ್ರ ಕಳ್ಳರು ಯಾರೆಂದು!!?

ಸಾಮಾನ್ಯವಾಗಿ ಕಳ್ಳತನ ಮಾಡಲು ಹೊಂಚು ಹಾಕುವ ಕಳ್ಳರು ವಿಭಿನ್ನವಾಗಿ ಉಪಾಯಗಳನ್ನು ಮಾಡಿ ತಮ್ಮ ಕೆಲಸ ಸಾಧಿಸಿಕೊಳ್ಳುತ್ತಾರೆ. ಇಂತಹ ಅದೆಷ್ಟೋ ಘಟನೆ ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ಕಳ್ಳರಿಗಿಂತ ನನಿಗೇನು ಕಮ್ಮಿ ಎಂಬಂತೆ ಹುಡುಗಿ ಒಬ್ಬಳು ಸಖತ್ ಐಡಿಯಾ ಮಾಡಿ ಕಳ್ಳರಿಗೆ ಚಲ್ಲೆ ಹಣ್ಣು ತಿನಿಸಿದ ಫನ್ನಿ ವಿಡಿಯೋ ವೈರಲ್ ಆಗಿದೆ.

ಒಮ್ಮೆಗೆ ಯಾರೇ ಆಗಲಿ ಕಳ್ಳರು ನಮ್ಮಲ್ಲಿರುವ ವಸ್ತುಗಳನ್ನು ಕದಿಯಲು ಬಂದರೆ ನಾವು ನಿಂತಲ್ಲೇ ಸ್ತಬ್ದರಾಗುತ್ತೇವೆ. ಆದ್ರೆ ಈ ಹುಡುಗಿಗೆ ನಿಜವಾಗಿಯೂ ಚಪ್ಪಾಳೆ ನೀಡಲೇ ಬೇಕು. ಅಷ್ಟಕ್ಕೂ ಈ ವೈರಲ್ ಆಗಿರುವ ವಿಡಿಯೋದಲ್ಲಿ ಅಂಥದ್ದೇನಿದೆ?ನೀವೇ ನೋಡಿ..

ಎರಡು ದಿನಗಳ ಹಿಂದೆ ‘nation.video’ ಎಂಬ ಪುಟದಿಂದ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವೊಂದನ್ನು ಅಪ್‌ಲೋಡ್ ಮಾಡಲಾಗಿದೆ. ಇದು ಈಗ 28,000ಕ್ಕೂ ಹೆಚ್ಚು ಲೈಕ್‌ಗಳೊಂದಿಗೆ ವೈರಲ್ ಆಗಿದೆ. ಮಾಸ್ಕ್ ಮತ್ತು ಹೆಲ್ಮೆಟ್ ಧರಿಸಿದ ಇಬ್ಬರು ಕಳ್ಳರು ಸ್ಕೂಟರ್‌ನಲ್ಲಿ ಬಂದು ಆ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯ ಬಳಿ ಸ್ಕೂಟರ್ ನಿಲ್ಲಿಸುತ್ತಾರೆ. ಆ ವ್ಯಕ್ತಿಯ ಕೈಯಿಂದ ಮೊಬೈಲ್ ಕಸಿದುಕೊಳ್ಳಲು ಪ್ರಯತ್ನಿಸುವಷ್ಟರಲ್ಲಿ ಆ ಮೊಬೈಲ್​ಗೆ ಫೋನ್ ಬರುತ್ತದೆ. ಹೀಗಾಗಿ, ಆ ವ್ಯಕ್ತಿ ಫೋನ್​ನಲ್ಲಿ ಮತನಾಡುತ್ತಾ ಹೊರಟೇ ಹೋಗುತ್ತಾನೆ. ಇದರಿಂದ ಕಳ್ಳರಿಗೆ ಮೊಬೈಲ್ ಕದಿಯಲು ಆಗುವುದಿಲ್ಲ.

ಅಷ್ಟರಲ್ಲೇ ಅದೇ ಮಾರ್ಗದಲ್ಲಿ ಯುವತಿಯೊಬ್ಬಳು ಮೊಬೈಲ್ ನೋಡುತ್ತಾ, ಹೆಗಲಿಗೆ ಬ್ಯಾಗ್ ಹಾಕಿಕೊಂಡು ಬರುತ್ತಿರುತ್ತಾಳೆ. ಆಕೆಯ ಬ್ಯಾಗ್ ಕದಿಯಬೇಕೆಂದು ಪ್ಲಾನ್ ಮಾಡುವ ಕಳ್ಳರು ಸ್ಕೂಟರ್ ನಿಲ್ಲಿಸಿ ಆಕೆ ಮುಂದೆ ಹೋಗಲು ಕಾಯುತ್ತಾರೆ. ಆಕೆ ಸ್ಕೂಟರ್ ದಾಟಿ ಹೋಗುತ್ತಿದ್ದಂತೆ ಕಳ್ಳರಲ್ಲಿ ಒಬ್ಬ ಆ ಹುಡುಗಿಯ ಬ್ಯಾಗ್ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಆದರೆ, ಆ ಯುವತಿ ಬ್ಯಾಗ್ ಬಿಡದೆ ಕಳ್ಳನೊಂದಿಗೆ ಜಗಳವಾಡುತ್ತಾಳೆ. ಇದರಿಂದ ಆ ಕಳ್ಳನ ಸಹಾಯಕ್ಕೆ ಬಂದ ಇನ್ನೊಬ್ಬ ಕಳ್ಳನೂ ಸೇರಿ ಆಕೆಯಿಂದ ಬ್ಯಾಗ್ ಕಸಿದುಕೊಳ್ಳುತ್ತಾರೆ.ಆಗ ಆ ಹುಡುಗಿ ಮಾಡಿದ್ದೇನು ಗೊತ್ತೇ!?

ಬ್ಯಾಗ್ ಕಸಿದುಕೊಳ್ಳಲು ಹೋಗಿ ರಸ್ತೆ ಮೇಲೆ ಬಿದ್ದ ಕಳ್ಳರು ಮೇಲೇಳುವಷ್ಟರಲ್ಲಿ ಆ ಯುವತಿ ಆ ಕಳ್ಳರು ತಂದಿದ್ದ ಸ್ಕೂಟರ್ ಓಡಿಸಿಕೊಂಡು ಅಲ್ಲಿಂದ ಪರಾರಿಯಾಗುತ್ತಾಳೆ.ಬ್ಯಾಗ್ ಕದಿಯಲು ಹೋದ ಕಳ್ಳರ ಸ್ಕೂಟರ್ ಅನ್ನೇ ಕದ್ದ ಯುವತಿಯ ಕೆಲಸವನ್ನು ನೋಡಿ ನೆಟ್ಟಿಗರು ನಕ್ಕು ನಕ್ಕು ಸುಸ್ತಾಗಿದ್ದಾರೆ. ಇದರಲ್ಲಿ ನಿಜವಾದ ಕಳ್ಳರು ಯಾರು? ಆ ಯುವಕರಾ ಅಥವಾ ಆ ಯುವತಿಯಾ? ಎಂದು ಹಲವರು ಕಮೆಂಟ್ ಮಾಡಿದ್ದಾರೆ.ಅಂತೂ ಆಕೆಯ ಖತರ್ನಾಕ್ ಐಡಿಯ ಮಾತ್ರ ಮೆಚ್ಚುವಂತದ್ದೇ..

https://www.instagram.com/reel/CaRi_dtqc9k/?utm_medium=copy_link

Leave A Reply

Your email address will not be published.