ಶಾಲಾ ನಿಯಮ ಉಲ್ಲಂಘಸಿ ಮೊಬೈಲ್ ಬಳಸುತ್ತಿದ್ದ ವಿದ್ಯಾರ್ಥಿಗಳ ಫೋನ್ ಗಳನ್ನು ಬೆಂಕಿಗೆ ಎಸೆದ ಶಿಕ್ಷಕರು!! | ಟೀಚರ್ಸ್ ಗಳು ಮೊಬೈಲ್ ಸುಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್
ಶಾಲಾ-ಕಾಲೇಜುಗಳಲ್ಲಿ ಶಿಸ್ತನ್ನು ಪಾಲಿಸುವುದು ವಿದ್ಯಾರ್ಥಿಗಳ ಕರ್ತವ್ಯವಾಗಿದೆ. ಆದರೆ ಇತ್ತೀಚೆಗೆ ವಿದ್ಯಾರ್ಥಿಗಳು ಶಾಲಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಂತೆಯೇ ಇಲ್ಲಿ ಶಾಲಾ ನಿಯಮವನ್ನು ಉಲ್ಲಂಘಿಸಿ ಸ್ಮಾರ್ಟ್ ಫೋನ್ ಬಳಸುತ್ತಿದ್ದ ವಿದ್ಯಾರ್ಥಿಗಳ ಫೋನ್‍ಗಳನ್ನು ಶಿಕ್ಷಕರು ಬೆಂಕಿಗೆ ಎಸೆದು ಸುಟ್ಟಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೆಲವೊಂದು ವಿಚಾರಗಳು ಕೈ ಮೀರಿದರೆ ಶಿಕ್ಷಕರು ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಮತ್ತೆ ಆ
ಆದರೆ ಈ ಶಾಲೆಯ ತರಗತಿಯಲ್ಲಿ ಮೊಬೈಲ್ ಫೋನ್ ಬಳಸುತ್ತಿದ್ದ ವಿದ್ಯಾರ್ಥಿಗಳಿಗೆ ಶಿಕ್ಷಕರು ವಿಭಿನ್ನ ರೀತಿಯಲ್ಲಿ ಶಿಕ್ಷೆ ನೀಡಿದ್ದಾರೆ. ಹೌದು, ಇಂಡೋನೇಷ್ಯಾದಲ್ಲಿ ಶಾಲಾ ಶಿಕ್ಷಕರ ಗುಂಪೊಂದು ವಿದ್ಯಾರ್ಥಿಗಳಿಂದ ವಶಪಡಿಸಿಕೊಂಡ ಸ್ಮಾರ್ಟ್ ಫೋನ್‍ಗಳನ್ನು ಬೆಂಕಿಗೆ ಎಸೆದಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಮನವಿ ಮಾಡುತ್ತಾ ಅಳುತ್ತಿದ್ದರೂ, ಅದನ್ನು ನಿರ್ಲಕ್ಷಿಸಿ ಶಿಕ್ಷಕರು ಮೊಬೈಲ್‍ಗಳನ್ನು ಬೆಂಕಿಗೆ ಹಾಕುವುದನ್ನು ಮುಂದುವರೆಸುತ್ತಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.