ಮಗ ಸೋಷಿಯಲ್ ಮೀಡಿಯಾದಿಂದ ದೂರವಿರಲು ತಾಯಿ ಮಾಡಿದಳು ಐಡಿಯಾ| ತಾಯಿ ಹೇಳಿದ್ದಂತೆ ಬರೋಬ್ಬರಿ 6 ವರ್ಷ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ಮಗ!
ಈಗಿನ ಕಾಲಘಟ್ಟದ ಮಕ್ಕಳಿಗೆ ಅದರಲ್ಲೂ ಹದಿಹರೆಯದವರನ್ನು ಸಾಮಾಜಿಕ ಜಾಕತಾಣದಿಂದ ದೂರ ಮಾಡುವುದು ಸವಾಲಿನ ಕೆಲಸ. ಮೊಬೈಲ್, ಟಿವಿ, ಇಂಟರ್ನೆಟ್ ಇಲ್ಲದೇ ಮಕ್ಕಳು ಸಮಯ ಕಳೆಯುವುದಕ್ಕೆ ಬೇರೆಯದನ್ನು ಅವಲಂಬಿಸುವುದೇ ಇಲ್ಲ. ಅಂಥದರಲ್ಲಿ ಈ ಎಲ್ಲಾ ದುಶ್ಚಟಗಳಿಂದ ದೂರ ಇರಲು ಇಲ್ಲೊಬ್ಬ ತಾಯಿ ತನ್ನ ಮಗನಿಗೆ ನೀನು 6 ವರ್ಷ ಸೋಷಿಯಲ್ ಮೀಡಿಯಾ ಬಳಸದಿದ್ದರೆ ನಿನಗೆ ಹಣ ನೀಡುವುದಾಗಿ ಷರತ್ತು ಹಾಕಿದ್ದಾಳೆ.
ಈ ಘಟನೆ ನಡೆದಿರೋದು ಅಮೆರಿಕಾದ ಮಿನ್ನೆಸ್ಟೋದಲ್ಲಿ. ತಾಯಿ ಲೊರ್ನಾ ಗೋಲ್ಡ್ ಸ್ಟ್ರಾಂಡ್ ಕ್ಲೆಫ್ಸಾಸ್ ತನ್ನ ಮಗ ಸಿವರ್ಟ್ ಕ್ಲೆಫ್ಸಾಸ್ ಗೆ ಸೋಶಿಯಲ್ ಮೀಡಿಯಾ ಬಳಸಬಾರದಾಗಿ ಹೇಳಿದ್ದಳು. 6 ವರ್ಷಗಳ ಹಿಂದೆ ಅಂದರೆ ಸಿವರ್ಟ್ ಕ್ಲೆಫ್ಸಾಸ್ ಗೆ 12 ವರ್ಷವಿದ್ದಾಗ ಅಂದರೆ 2016 ರಲ್ಲಿ ಈ ಷರತ್ತು ವಿಧಿಸಲಾಗಿತ್ತು. ಅಮ್ಮನ ಮಾತಿನಂತೆ ನಡೆದುಕೊಂಡ ಸಿವರ್ಟ್ ಯಾವುದೇ ಸೋಶಿಯಲ್ ಮೀಡಿಯಾ ಬಳಸದೇ 6 ವರ್ಷ ಕಳೆದಿದ್ದಾನೆ.
ಈ ಹಿನ್ನೆಲೆಯಲ್ಲಿ ತಾಯಿ ಆತನ18ನೇ ಹುಟ್ಟಿದ ಹಬ್ಬದಂದು ಆತನಿಗೆ ನೀಡಿದ ಭರವಸೆಯಂತೆ 1800 ಡಾಲರ್ ಅಂದರೆ ಭಾರತದ ಮೌಲ್ಯ 1.36 ಲಕ್ಷ ರೂಪಾಯಿಯ ಚೆಕ್ ನ್ನು ನೀಡಿದ್ದಾಳೆ.
ತಾಯಿ ಲೊರ್ನಾ ತನ್ನ ಮಗನಿಗೆ 18 ವರ್ಷ ತುಂಬುತ್ತಿದ್ದಂತೆ, ತಮ್ಮ ಫೇಸ್ಬುಕ್ ಖಾತೆಯಲ್ಲಿ ತಮ್ಮಪುತ್ರ ಈಗ ಹಲವು ಸೋಶಿಯಲ್ ಸೈಟ್ ಗಳಲ್ಲಿ ತನ್ನ ಖಾತೆ ತೆರೆಯಬಹುದು ಎಂದು ಬರೆದಿದ್ದಾರೆ.
6 ವರ್ಷಗಳ ಹಿಂದೆ ನಾನು ನನ್ನ 12 ವರ್ಷದ ಮಗನಿಗೆ 18 ವರ್ಷ ತುಂಬುವವರೆಗೆ ಸೋಶಿಯಲ್ ಮೀಡಿಯಾ ಬಳಸದಿದ್ದರೆ 1800 ಡಾಲರ್ ನೀಡುವ ಭರವಸೆ ನೀಡಿದ್ದಾರೆ.
ತಾಯಿ ಲೊರ್ನಾಗೆ ಈ ಐಡಿಯಾ ಬರಲು ರೇಡಿಯೋದಲ್ಲಿ ಬಂದ ಒಂದು ಪ್ರೊಗ್ರಾಮ್ ಅಂತೆ. ರೇಡಿಯೋ ಪ್ರೋಗ್ರಾಮ್ ನಲ್ಲಿ ಬಂದ ಸವಾಲಿನ ಆಟದಿಂದ ಪ್ರೇರಿತರಾಗಿ 18 ಫಾರ್ 18 ಚಾಲೆಂಜ್ ಎಂಬ ಯೋಜನೆ ಹಾಕಿ ಈ ರೀತಿ ನಡೆದುಕೊಂಡಿದ್ದಾರೆ. ಅವರು ಅಂದುಕೊಂಡಂತೆ ತಾಯಿಯ ಈ ಶ್ರಮ ಯಶಸ್ವಿಯಾಗಿದೆ.
ಅಷ್ಟಕ್ಕೂ ಈ ತಾಯಿ ತನ್ನ ಮಗನನ್ನು ಈ ಸೋಷಿಯಲ್ ಮೀಡಿಯಾದಿಂದ ದೂರ ಇಡಲು ಬಹುಮುಖ್ಯ ಕಾರಣ, ಆಕೆಯ ದೊಡ್ಡ ಪುತ್ರಿ. ತಾರುಣ್ಯದಲ್ಲಿ ಸಾಮಾಜಿಕ ಜಾಲತಣದ ಅಡಿಕ್ಟ್ ಆಗಿದ್ದ ಮಗಳು ಬಹಳ ಕಷ್ಟ ಪಟ್ಟಿದ್ದಳು. ಇದನ್ನು ಗಮನಿಸಿ ತಾಯಿ ತಮ್ಮ ಪುತ್ರನಿಗೆ ಈ ರೀತಿ ಆಗುವುದು ಬೇಡ ಎಂದು ಈ ಐಡಿಯಾ ಮಾಡಿದ್ದಾರೆ.