ಸಾಲದ ಸುಳಿಯಲ್ಲಿದ್ದವನಿಗೆ ಒಲಿದ ಲಕ್ಷ್ಮೀ ಕೃಪಕಟಾಕ್ಷ| ಅದೃಷ್ಟದಾಟ ಎಂದರೆ ಇದೇ!!!

ಅದೃಷ್ಟ ಯಾರ ಹಣೆಯಲ್ಲಿರುತ್ತದೆಯೋ ಅವರಿಗೆ ಮಾತ್ರ ಎಲ್ಲನೂ ದೊರೆಯುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಈಗ ಅಂಥದ್ದೇ ಒಂದು ಘಟನೆ ಕೇರಳದ ವ್ಯಕ್ತಿಯೊಬ್ಬರ ಬಾಳಲ್ಲಿ ನಡೆದಿದೆ.

 

ಕೇರಳದ ಕಲ್ಲಿಸೇರಿ ಮೂಲದ ಪಿ ರಾಜೇಶ್ ಕುಮಾರ್ ಎಂಬುವರಿಗೆ ಬುಧವಾರ 75 ಲಕ್ಷ ರೂ.ಹಣ ಲಾಟರಿ ಹೊಡೆದಿದೆ. ಕಲ್ಲಿಸೇರಿ ಜಂಕ್ಷನ್ ನಲ್ಲಿ ಲಾಟರಿ ಟಿಕೆಟ್ ಮಾರಾಟ ಮಾಡುವ ಥಂಪಿ ಹೆಸರಿನ ಲಾಟರಿ ಏಜೆಂಟ್ ಬಳಿ ರಾಜೇಶ್ ಅವರು ಈ ಅದೃಷ್ಟದ ಟಿಕೆಟ್ ಖರೀದಿ ಮಾಡಿದ್ದರು. ಇದರ ನಂತರ ಕಲ್ಲಿಸೇರು ಮೂಲದ ವ್ಯಕ್ತಿಯೊಬ್ಬರಿಗೆ ಬಂಪರ್ ಲಾಟರಿ ಸಿಕ್ಕಿದೆಂದು ಸುದ್ದಿ ಹರಡಿತು. ಆದರೆ ಈ ಲಕ್ಕಿ ವಿನ್ನರ್ ಯಾರೆಂಬುದು ಯಾರಿಗೂ ತಿಳಿದಿರಲಿಲ್ಲ. ಬುಧವಾರ ನ್ಯೂಸ್ ಪೇಪರ್ ನೋಡಿದಾಗ ಆ ಲಕ್ಕಿ ವಿನ್ನರ್ ನಾನೇ ಎಂದು ರಾಜೇಶ್ ಗೆ ಗೊತ್ತಾಗಿದೆ.

ರಾಜೇಶ್ ಅವರು ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಕಲೆಕ್ಷನ್ ಏಜೆಂಟ್ ಆಗಿದ್ದಾರೆ.
ಸ್ವಂತ ಮನೆಯಿಲ್ಲದ ಕಾರಣ 8.5 ಲಕ್ಷ ರೂಪಾಯಿಯನ್ನು ರಾಜೇಶ್ ಸಾಲ ಮಾಡಿದ್ದರು. ಇದೀಗ ಈ ಅದೃಷ್ಟದ ಹಣದಿಂದ ತಮ್ಮ ಸಾಲ ತೀರಿಸಿ ಮನೆ ನಿರ್ಮಾಣ ಮಾಡಿ ನೆಮ್ಮದಿಯ ಜೀವನ ಸಾಗಿಸಬಹುದಾಗಿದೆ. ಆದರೂ ಯಾವುದೇ ಕಾರಣಕ್ಕೂ ಕೆಲಸ ಬಿಡುವುದಿಲ್ಲ ಎಂದು ರಾಜೇಶ್ ಹೇಳಿದ್ದಾರೆ. ರಾಜೇಶ್ ಪತ್ನಿ ಸಿ ಪಿ ಅನಿತಾ, ಶಿವಾನಿ ಮತ್ತು ಶಿವಾನಂದ ಎಂಬ ಮಕ್ಕಳಿದ್ದಾರೆ. ಸಾಲದಲ್ಲಿದ್ದ ಈ ಕುಟುಂಬ ಈಗ ನೆಮ್ಮದಿಯ ನಿಟ್ಟಿಸಿರು ಬಿಡುತ್ತದೆ.

Leave A Reply

Your email address will not be published.