ನಿಜವಾಯಿತೇ ಕೋಡಿಮಠದ ಸ್ವಾಮೀಜಿಯ ಭವಿಷ್ಯ ??| ವಿಶ್ವದ ಭೂಪಟದಲ್ಲಿ ಮಾಯವಾಗಲಿರುವ ರಾಷ್ಟ್ರ ಉಕ್ರೇನ್ ದೇಶವೇ!!

Share the Article

ನುಡಿದಂತೆ ನಡೆಯುವ ಕೋಡಿ ಮಠದ ಸ್ವಾಮೀಜಿಯ ಮಾತು ಮತ್ತೊಮ್ಮೆ ನಿಜವಾಗಿದೆ.ದೇಶವೊಂದು ವಿಶ್ವದ ಭೂಪಟದಿಂದ ಮಾಯವಾಗಲಿದೆ ಎಂದು ಭವಿಷ್ಯ ಹೇಳಿದ್ದು, ಈ ಮಾತು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಕ್ಕೆ ಸಂಬಂಧಿಸಿದೆ.

ಈ ವರ್ಷದ ಆರಂಭದಲ್ಲಿ ಶ್ರೀಗಳು, ಚಿಕ್ಕಬಳ್ಳಾಪುರದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಈ ಮಾತುಗಳನ್ನು ಆಡಿದ್ದರು.ಶ್ರೀಗಳು ದೇಶವೊಂದು ವಿಶ್ವದ ಭೂಪಟದಿಂದ ಮಾಯವಾಗಲಿದೆ ಎಂದು ಭವಿಷ್ಯ ಹೇಳಿದ್ದರು.ಶ್ರೀಗಳ ಮಾತುಗಳನ್ನು ತಾಲಿಬಾನಿಗಳು ಅಫ್ಘಾನಿಸ್ತಾನ ವಶಕ್ಕೆ ಪಡೆದುಕೊಂಡಾಗ ಲಿಂಕ್ ಮಾಡಲಾಗಿತ್ತು.ಆದರೆ ನಿಜವಾಗಿಯೂ ಶ್ರೀಗಳು ಹೇಳಿದ್ದು ಉಕ್ರೇನ್ ಬಗ್ಗೆಯೇ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹೌದು. ಇವರ ಮಾತು ನಿಜವೆಂಬಂತೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಈಗಾಗಲೇ ಹಲವು ಜೀವಗಳನ್ನು ಪಡೆದುಕೊಂಡಿದ್ದು, ದೇಶವೇ ಅಳಿವಿನಂಚಿನಲ್ಲಿದೆ. ಇದು ಕೇವಲ ಉಕ್ರೇನ್ ನಲ್ಲಿರುವ ಮಿಲಿಟರಿ ಮೇಲಿನ ಕಾರ್ಯಾಚರಣೆ ಎಂದು ರಷ್ಯಾ ಹೇಳುತ್ತಿದ್ದರೂ, ವಸತಿ ಪ್ರದೇಶಗಳ ಮೇಲೆಯೂ ದಾಳಿ ನಡೆಯುತ್ತಿದ್ದು ಜನ ಸಾಗರವೇ ಗೊಂದಲದಲ್ಲಿ ಸಿಲುಕಿದೆ.

ಅಲ್ಲದೆ ಈ ವರ್ಷ ಜಗತ್ತಿಗೆ ಗಾಳಿ ಗಂಡಾಂತರ ಕಾದಿದೆ ಎಂದು ಭವಿಷ್ಯ ನುಡಿದಿದ್ದಾರೆ.ಅದರಂತೆ ದೇಶದ ರಾಜಧಾನಿ ದೆಹಲಿ ಸೇರಿದಂತೆ ಜಗತ್ತಿನ ಹಲವು ನಗರಗಳು ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿವೆ.

Leave A Reply