ವರದಕ್ಷಿಣೆ ಕಿರುಕುಳ ಆರೋಪ| ಗೃಹಿಣಿ ಅನುಮಾನಾಸ್ಪದ ಸಾವು

Share the Article

ಚಿಕ್ಕಬಳ್ಳಾಪುರ : ಜಗಳ‌‌‌ ನಡೆದ ಕಾರಣ ಮನೆಯಲ್ಲಿ ಮಹಿಳೆಯೋರ್ವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆಯೊಂದು ನಡೆದಿದೆ.

ಚಿಕ್ಕಬಳ್ಳಾಪುರದ ಪ್ರಶಾಂತ್ ನಗರದ ಗಂಡನ ಮನೆಯಲ್ಲಿ ನವ್ಯಾ ಎಸ್ ಆರ್ ( 23) ಮೃತಪಟ್ಟಿರುವ ಗೃಹಿಣಿ. ವರದಕ್ಷಿಣೆ ಕಿರುಕುಳ ನೀಡಿ ನೇಣು ಹಾಕಿರೋದಾಗಿ ಆರೋಪ ಮಾಡಲಾಗಿದೆ.

ನವ್ಯಾ ಪತಿ ಚೇತನ್ ಕುಮಾರ್ ಮೃತಳ‌ ಸಂಬಂಧಿಗಳು ಯದ್ವಾತದ್ವಾ ಥಳಿಸಿದ್ದಾರೆ. ಮಹಿಳೆಯರ ಕೈಯಿಂದ ಚೇತನ್ ಕುಮಾರ್ ನನ್ನು ಬಿಡಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಮಗಳ‌ ಸಾವಿನ ಸುದ್ದಿ ಕೇಳಿ ತಂದೆ ತೀವ್ರ ಅಸ್ವಸ್ಥರಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Leave A Reply