ಗ್ರಾಹಕರನ್ನು ಸೆಳೆಯಲು ಆಹಾರದಲ್ಲಿ ಗಾಂಜಾ ಬೆರೆಸಿ ಕೊಡುತ್ತಿದ್ದ ರೆಸ್ಟೋರೆಂಟ್ | ಇಲ್ಲಿ ಆಹಾರ ಸೇವಿಸಿದ ಮಂದಿಗೆ ನಶೆಯಲ್ಲಿ ತೇಲುತ್ತಿರುವ ಅನುಭವ| ಮಹಿಳೆಯೊಬ್ಬರಿಂದ ಪೊಲೀಸರಿಗೆ ದೂರು

ಇಂದು ಎಲ್ಲೆಲ್ಲೂ ಪೈಪೋಟಿ ನಡೆಯುವುದೇ ಹೆಚ್ಚು. ರೆಸ್ಟೋರೆಂಟ್, ಬಿಸಿನೆಸ್ ಫೀಲ್ಡ್ ಎಲ್ಲಾ ಕಡೆ ಇದು ಅತ್ಯಗತ್ಯವಾಗಿ ಪರಿಣಮಿಸಿದೆ.

ರೆಸ್ಟೋರೆಂಟ್ ನಲ್ಲಿ ಕೂಡಾ ವಿವಿಧ ಬಗೆಯ ತಿಂಡಿಗೆ ಹೆಚ್ಚು ರುಚಿ ಕೊಡಲು ಶೆಫ್ ನವರು ಅದಕ್ಕೆ ತಮ್ಮದೇ ಆದ ಮಸಾಲಾ ಪದಾರ್ಥಗಳನ್ನು ಸೇರಿಸಿ ರುಚಿ ರುಚಿಯಾಗಿ ಅಡುಗೆ ಮಾಡಿ ಗ್ರಾಹಕರನ್ನು ಸೆಳೆಯೋ ಪ್ರಯತ್ನ ಮಾಡುತ್ತದೆ. ಆದರೆ ಲಾಸ್ ವೇಗಾಸ್ ನ ರೆಸ್ಟೋರೆಂಟ್ ವೊಂದು ತನ್ನ ಆಹಾರಗಳಲ್ಲಿ ಗಾಂಜಾ ಬೆರೆಸುವ ಮೂಲಕ ನಶೆ ಭರಿತ ರುಚಿಯೊಂದನ್ನು ‌ನೀಡುತ್ತದೆ ಎಂಬ ಆರೋಪಕ್ಕೆ ಗುರಿಯಾಗಿದೆ.

ದಿ ಸೀಕ್ರೇಟ್ ಆಫ್ ಸಿಯಾಮ್ ಎಂಬ ಹೆಸರಿನ ಈ ಥಾಯ್‌ ರೆಸ್ಟೋರೆಂಟ್ ವಿರುದ್ಧ ಅನೇಕ ಜನರು ದೂರುಗಳನ್ನು ನೀಡಿದ್ದಾರೆ. ಈ ರೆಸ್ಟೋರೆಂಟ್ ನಲ್ಲಿ ಆಹಾರ ಸೇವಿಸಿದ ನಂತರ ನಶೆಯಲ್ಲಿ ತೇಲುತ್ತಿರುವ ಅನುಭವ ಆಗುತ್ತಿದೆಯಂತೆ ಅನೇಕರಿಗೆ. ವಿಶೇಷ ಮಸಾಲೆ ಹಾಕಿ ಕೆಲವೊಂದು ಆಹಾರ ಮಾಡಿ ಅದನ್ನು ಗ್ರಾಹಕರ ಮುಂದಿಡಲಾಗುತ್ತಿತ್ತು. ಈ ಆಹಾರ ಸೇವಿಸಿದ ಅನೇಕ ಮಂದಿ ಅಮಲಿನಲ್ಲಿ ತೇಲಿದ ಅನುಭವ ಕೊಡುತ್ತಿತ್ತು. ಹಾಗಾಗಿ ಈ ರೆಸ್ಟೋರೆಂಟ್ ನ ವ್ಯಾಪಾರ ಕೂಡಾ ಹೆಚ್ಚಾಗಿತ್ತು.

ಆದರೆ ಇತ್ತೀಚೆಗೆ ಈ ರೆಸ್ಟೋರೆಂಟ್ ನಲ್ಲಿ ಆಹಾರ ಸೇವಿಸಿದ ಮಹಿಳೆಯೊಬ್ಬರು ತೀವ್ರ ಅಸ್ವಸ್ಥಗೊಳಗಾಗಿದ್ದಾರೆ. ಸಮಂತಾ ಡಯಾಸ್ ಎಂಬ ಮಹಿಳೆಯು ಸೂಪ್ ಸೇವಿಸಿದ್ದು , ತನಗೆ ಏನು ಆಗುತ್ತಿದೆ ಎಂದು ಹೇಳಲು ಸಾಧ್ಯವಾಗುತ್ತಿರಲಿಲ್ಲ. ಕೂಡಲೇ ಪತಿ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಆ ನಂತರ ಪತಿಗೆ ತಿಳಿದಿದೆ ಆಕೆ ಅಮಲಿನಲ್ಲಿ ತೇಲುತ್ತಿದ್ದಾಳೆಂದು.

ಅನಂತರ ಇದರಿಂದ ಅನುಮಾನಗೊಂಡ ಸಮಂತಾ ದಿ ಸೀಕ್ರೇಟ್ ಆಫ್ ಸಿಯಾಮ್ ರೆಸ್ಟೋರೆಂಟ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹುಡುಕಾಡಿದ್ದಾರೆ. ತನಗಾದ ಅನುಭವಗಳ ಬಗ್ಗೆ ಬರೆದಿದ್ದಾರೆ. ಆಗ ಅನೇಕ ಮಂದಿ ಕೂಡಾ ಇದೇ ರೀತಿಯ ಅನುಭವ ಆಗುತ್ತಿರುವುದಾಗಿ ಬರೆದಿದ್ದಾರೆ. ಅಲ್ಲದೇ ಈ ರೆಸ್ಟೋರೆಂಟ್ ನಲ್ಲಿ ಆಹಾರದಲ್ಲಿ ಡ್ರಗ್ಸ್ ಬೆರೆಸಲಾಗುತ್ತಿದೆ ಎಂದು ಹಲವರು ಆರೋಪಿಸಿರುವುದನ್ನು ಕಂಡು ಅಚ್ಚರಿಗೊಂಡಿದ್ದರು. ಹೀಗಾಗಿ ಇದೀಗ ಸಮಂತಾ ಡಯಾಸ್ ದಿ ಸೀಕ್ರೇಟ್ ಆಫ್ ಸಿಯಾಮ್ ವಿರುದ್ಧ ದೂರು ನೀಡಿದ್ದಾರೆ.

ಪ್ರಾಥಮಿಕ ತನಿಖೆಯ ವೇಳೆ ದಿ ಸೀಕ್ರೇಟ್ ಆಫ್ ಸಿಯಾಮ್ ರೆಸ್ಟೋರೆಂಟ್ ನ್ನು ಮುಚ್ಚಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಲಾಸ್ ವೇಗಾಸ್ ಪೊಲೀಸರು ತಿಳಿಸಿದ್ದಾರೆ. ಒಂದು ವೇಳೆ ಈ ಆರೋಪ ನಿಜವಾಗಿದ್ದಲ್ಲಿ ರೆಸ್ಟೋರೆಂಟ್ ಪರವಾನಗಿಯನ್ನು ರದ್ದುಗೊಳಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.