ಅರೆರೆ! ಡ್ರೋನ್ ಮೂಲಕ ಬಂತು ಮದುವೆ ಹಾರ| ತಾಳ್ಮೆ ಕಳೆದುಕೊಂಡ ವರ ಮಾಡಿದ್ದಾದರೂ ಏನು? ಮದುವೆಗೆ ಬಂದಿದ್ದ ಜನರೆಲ್ಲಾ ತಬ್ಬಿಬ್ಬಾಗಿದ್ದು ಏಕೆ ?

Share the Article

ತಮ್ಮ‌ ಬದುಕಿನ ಪ್ರಮುಖ ಘಟ್ಟವಾದ ವಿವಾಹದ ಕ್ಷಣವನ್ನು ತುಂಬಾ ಜನರು ಸ್ಮರಣೀಯವಾಗಿಸಲು ಸಾಕಷ್ಟು ಪ್ರಯತ್ನ ಪಡುತ್ತಾರೆ. ಹಲವಾರು ಸರ್ಪೈಸ್ ಮೂಲಕ ಕೆಲವೊಂದು ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಕೆಲವೊಮ್ಮೆ ಇವೆಲ್ಲಾ ಆವಾಂತರಕ್ಕೀಡಾಗುವುದು ಇದೆ.

ಇಲ್ಲೊಬ್ಬ ವರ ಸಿಟ್ಟು ಮಾಡಿಕೊಂಡು ವಿವಾಹದ ಹಾರ ಇದ್ದ ಡ್ರೋನ್ ನನ್ನು ನೆಲಕ್ಕೆ ಎಸೆದ ಆಘಾತಕಾರಿ ವೀಡಿಯೋವೊಂದು ವೈರಲ್ ಆಗಿದೆ.

ವಧು ವರರು ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಕ್ಷಣದ ಸಂದರ್ಭ ಇದು. ಮಂಟಪದಲ್ಲಿ ವಧು ವರರು ಮತ್ತು ಸಂಬಂಧಿಕರು ಇರುವ ದೃಶ್ಯ ಮೊದಲಿಗೆ ಕಾಣ ಸಿಗುತ್ತದೆ. ನಂತರ ಡ್ರೋನ್ ವಿವಾಹದ ಹಾರವನ್ನು ತರುತ್ತದೆ. ಈ ಸಂದರ್ಭದಲ್ಲಿ ಹಾರ ವಧು ವರರ ಕೈಗೆ ಸಿಗದಂತೆ ಒಂದೆರಡು ಬಾರಿ ಡ್ರೋನ್ ನನ್ನು ಮೇಲೆ ಕೆಳಗೆ ಮಾಡಲಾಗುತ್ತದೆ. ಆದರೆ ಅದೇನಾಯಿತೋ ಗೊತ್ತಿಲ್ಲ‌. ವರನಿಗೆ ಇದು ಇಷ್ಟ ಆಗಲಿಲ್ಲ. ತೀರಾ ತಾಳ್ಮೆ ಕಳೆದುಕೊಂಡ ವರ ಹಾರ ಕೈಗೆ ಸಿಗುತ್ತಿದ್ದಂತೆಯೇ ಹಾರದೊಂದಿಗೆ ಡ್ರೋನನ್ನು ಕೂಡಾ ಎಳೆದು ಕೆಳಕ್ಕೆ ಹಾಕಿದ್ದಾನೆ. ಪರಿಣಾಮ ಡ್ರೋನ್ ಪುಡಿ ಪುಡಿ. ಇದನ್ನೆಲ್ಲಾ ಕಂಡು ಅಲ್ಲಿದ್ದವರು ಆವಾಕ್ಕಾಗುತ್ತಾರೆ. ಆದರೂ ಈ ಸಂದರ್ಭದಲ್ಲಿ ವರ ಹಾರ ಎಳೆದು ವಧುವಿನ ಕೈಯಲ್ಲಿ ಕೊಟ್ಟು ತಾನೂ ಒಂದನ್ನು ಹಿಡಿದುಕೊಂಡಿದ್ದ. ನಂತರ ಸ್ವಲ್ಪ ಹೊತ್ತಾದ ನಂತರ ಇಬ್ಬರೂ ಹಾರ ಬದಲಾಯಿಸಿಕೊಳ್ಳುತ್ತಾರೆ.

Leave A Reply