ಮೀನುಗಾರರಿಗೆ ಬಸ್ಕಿ ಹೊಡೆಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿ!

Share the Article

ಕಾರವಾರ : ಸಮೀಪದ ಅಂಜುದೀವ್ ದ್ವೀಪದ ಬಳಿ ಆಳ ಸಮುದ್ರದಲ್ಲಿ ಬೋಟ್ ಮೂಲಕ ಮೀನುಗಾರಿಕೆ ನಡೆಸುತ್ತಿದ್ದ ಐವರು ಮೀನುಗಾರರಿಗೆ ಕೋಸ್ಟ್ ಗಾರ್ಡ್ ಸಿಬ್ಬಂದಿ 250 ಬಸ್ಕಿ ಹೊಡಿಸಿದ್ದಾರೆ.

ಸುಮಾರು 14 ಮೀಟರ್ ಆಳ ಸಮುದ್ರದಲ್ಲಿ ಧನಲಕ್ಷ್ಮೀ ಹೆಸರಿನ ಬೋಟ್ ನಲ್ಲಿದ್ದ ಮೀನುಗಾರರನ್ನು ತಡೆದ ಕೋಸ್ಟ್ ಗಾರ್ಡ್ ಸಿಬ್ಬಂದಿ, ” ದ್ವೀಪದ ಸಮೀಪ ಮೀನುಗಾರಿಕೆ ನಡೆಸಬಾರದು” ಎಂದು ಎಚ್ಚರಿಸಿ ಬಸ್ಕಿ ಹೊಡೆಯುವ ಶಿಕ್ಷೆ ವಿಧಿಸಿದ್ದಾರೆ.
ಬಸ್ಕಿ ಹೊಡೆಸಿದ ಪರಿಣಾಮವಾಗಿಯೇನೋ ಮೀನುಗಾರರು ಎರಡು ದಿನ ಮೀನುಗಾರಿಕೆಗೆ ಹೋಗಲಾರದಷ್ಟು ನೋವಿಗೆ ಒಳಗಾಗಿದ್ದಾರೆ.

Leave A Reply