ಮದುವೆ ಬಂಧನಕ್ಕೊಳಗಾದ ಮೂಕ ವಧು – ವರ|

ಮದುವೆ ಎನ್ನುವುದು ಒಂದು ಸುಂದರ ಕ್ಷಣ. ಹಲವಾರು ಆಸೆಗಳೊಂದಿಗೆ ನಾವು ಹೊಸ ಹೆಜ್ಜೆ ಇಡುವ ಸಮಯ. ಇಂಥದ್ದೇ ಒಂದು ಘಳಿಗೆಯಲ್ಲಿ ಕಾಲಿಟ್ಟವರೇ ಈ ಮೂಕ ವಧು ವರರ ವಿವಾಹ. ಅಂದ ಹಾಗೆ ಇವರಿಬ್ಬರದ್ದು ಲವ್ ಕಮ್ ಅವೇಂಜ್ಡ್‌ ಮ್ಯಾರೇಜ್.

 

ವಿಜಯಪುರ ನಗರದ ಜ್ಞಾನಯೋಗಾಶ್ರಮ ಹತ್ತಿರವಿರುವ ಅಕ್ಕಿ ಕಾಲನಿಯಲ್ಲಿ ಇವರಿಬ್ಬರ ವಿವಾಹ ಬಹಳ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ನೆರವೇರಿದೆ.

ವಿಜಯಪುರ ನಗರದ ಅಕ್ಕಿ ಕಾಲನಿಯ ನಿವಾಸಿ ಸುಜಾತಾ ಹಾಗೂ ಶಿವಾನಂದ ರೇಷ್ಮೆ ದಂಪತಿ ಪುತ್ರಿ ಸ್ವಪ್ನಾ ( ವೀಣಾ) ಮತ್ತು ಹುಬ್ಬಳ್ಳಿಯ ಪ್ರಭಾವತಿ ಹಾಗೂ ಚಂದ್ರಶೇಖರ ಶಿವಪ್ಪಯ್ಯನಮಠದ ಪುತ್ರ ವಿನಾಯಕ ಇಬ್ಬರೂ ಮೂಕರಾಗಿದ್ದು, ಎರಡೂ ಕುಟುಂಬಸ್ಥರ ಸಮ್ಮುಖದಲ್ಲಿ ವಿಜೃಂಭಣೆಯಿಂದ ದಾಂಪತ್ಯ ಜೀವನಕ್ಕೆ ಸೋಮವಾರ ಕಾಲಿಟ್ಟಿದ್ದಾರೆ.

ಮೈಸೂರಿನ ಶ್ರವಣದೋಷವುಳ್ಳ ಮಕ್ಕಳ ತರಬೇತಿ ಕೇಂದ್ರದಲ್ಲಿ ವಿಶೇಷ ಶಿಕ್ಷಣ ಪಡೆಯುವಾಗ ಸ್ವಪ್ನಾ‌ಹಾಗೂ ವಿನಾಯಕ ಇಬ್ಬರ ನಡುವೆ ಲವ್ ಪ್ರಾರಂಭವಾಗಬೇಕಿತ್ತು. ಈಗ ಇಬ್ಬರು ಹಿರಿಯರ ಸಮ್ಮುಖದಲ್ಲಿ ಸತಿಪತಿಗಳಾಗಿ ಭಡ್ತಿ ಪಡೆದಿದ್ದಾರೆ.

Leave A Reply

Your email address will not be published.