ಹಬ್ಬಕ್ಕೆ ಏನಾದರೂ ಕೊಡುತ್ತಾರೆಂದು ಕಾಯುತ್ತಿದ್ದ ಮನೆಕೆಲಸದ ಮಂದಿಗೆ ಈತ ಕೊಟ್ಟಿದ್ದು ಬರೋಬ್ಬರಿ 3.95 ಕೋಟಿ ರೂ!!!

Share the Article

ಎಲ್ಲಾ ಉದ್ಯೋಗಿಗಳಿಗೆ ತಾವು ಮಾಡಿದ ಕೆಲಸಕ್ಕೆ ಬೆನ್ನುತಟ್ಟಿ ಹುರಿದುಂಬಿಸುವುದು ಅತ್ಯಗತ್ಯ. ಅಥವಾ ಒಂದು ಪ್ರಶಂಸಾ ಪತ್ರ, ಕಂಪನಿ ಕಡೆಯಿಂದ ಬೋನಸ್, ಕಂಪನಿ ಕಡೆಯಿಅಮದ ಗೌರವ ಧನ ಇದೆಲ್ಲಾ ಮೋಟಿವೇಟ್ ಮಾಡುತ್ತದೆ.

ಆದರೆ ನಮ್ಮ‌ ಮನೆಯಲ್ಲಿ ಕೆಲಸ ಮಾಡುವವರಿಗೆ ಅವರಿಗೆ ನಾವು ಇದನ್ನೆಲ್ಲಾ ಕೊಡುವುದಿಲ್ಲ. ಒಂದು ಕ್ಷಣ ಯೋಚಿಸಿ ಅವರಿಗೆಲ್ಲ ಹಬ್ಬಕ್ಕೆ ಒಂದು 500 ರೂಪಾಯಿ, ಅಥವಾ ಖರ್ಚಿಗೆ ದುಡ್ಡು ಏನಾದರೂ ಕೊಡುತ್ತಾರೆಯೇ ಎಂದು ಎದುರು ನೋಡುತ್ತಿರುತ್ತಾರೆಮ ಆದರೆ ಇಲ್ಲೊಂದು ಮನೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಸಿಕ್ಕಿದ್ದು ಬೆಲೆಬಾಳುವ ಷೇರುಗಳು!

ಹೌದು. ನೀವು ಕೇಳುತ್ತಿರುವುದು ನಿಜ. ಐಡಿಎಫ್ ಸಿ ಖಾಸಗಿ ಬ್ಯಾಂಕ್ ಎಂಡಿ ಹಾಗೂ ಸಿಇಒ ವಿ ವೈದ್ಯನಾಥನ್ ಅವರು ತಮ್ಮ ಬಳಿಯಿದ್ದ ಕಂಪನಿಯ 9 ಲಕ್ಷ ಷೇರುಗಳನ್ನು ಮನೆ ಕೆಲಸದಾತ, ಡ್ರೈವರ್, ಫಿಟ್ನೆಸ್ ತರಬೇತುದಾರ ಸೇರಿದಂತೆ ನಿತ್ಯ ತಮಗೆ ನೆರವಾಗುವವರಿಗೆ ಐದು ಭಾಗಗಳಾಗಿ ಹಂಚಿದ್ದಾರಂತೆ. ಇದರ ಒಟ್ಟಾರೆ ಮೌಲ್ಯ 3.95 ಕೋಟಿ.ರೂಪಾಯಿ.

2021 ರ ಸೆಪ್ಟೆಂಬರ್ ನಲ್ಲಿ ವೈದ್ಯನಾಥನ್ ಅವರು 30 ಲಕ್ಷ ರೂ ಮೌಲ್ಯದ ಇಕ್ವಿಟಿ ಷೇರುಗಳನ್ನು ತಮ್ಮ ಮಾಜಿ ಶಾಲಾ ಶಿಕ್ಷಕರೊಬ್ಬರಿಗೆ ಗುರುದಕ್ಷಿಣೆ ರೂಪದಲ್ಲಿ ನೀಡಿ ಗಮನ ಸೆಳೆದಿದ್ದರು.

Leave A Reply