ಹಿಜಾಬ್ ಪ್ರಕರಣ : ಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿಯ ತಂದೆಯ ಹೋಟೆಲ್ ಮೇಲೆ ದಾಳಿ| ಸಹೋದರನಿಗೆ ಹಲ್ಲೆ| ಮಲ್ಪೆ ಪೊಲೀಸರಿಂದ ತನಿಖೆ
ಮಲ್ಪೆ : ಹಿಜಾಬ್ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯೊಬ್ಬಳ ತಂದೆಯ ಹೋಟೆಲಿಗೆ ಕಲ್ಲು ತೂರಾಟ ನಡೆಸಿ, ಸಹೋದರನಿಗೆ ಹಲ್ಲೆಗೈದಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ಹೈದರ್ ಆಲಿ ಎಂಬುವರ ಬಿಸ್ಮಿಲ್ಲಾ ಹೋಟೆಲ್ ಮಲ್ಪೆ ಪೇಟೆಯಲ್ಲಿದೆ. ಅಲ್ಲಿಗೆ ಆಗಮಿಸಿದ 70-100 ಮಂದಿ ದುಷ್ಕರ್ಮಿಗಳು ಹೋಟೆಲ್ ಮೇಲೆ ಕಲ್ಲು ತೂರಾಟ ಮಾಡಿದೆ. ಹೋಟೆಲಿನ ಗಾಜುಗಳು ಪುಡಿ ಪುಡಿಯಾಗಿದ್ದು ಅಪರ ಹಾನಿ ಸಂಭವಿಸಿದೆ. ಬಳಿಕ ದುಷ್ಕರ್ಮಿಗಳು ಹೋಟೆಲ್ ನಲ್ಲಿ ಇದ್ದ ಅವರ ಮಗ ಸೈಫ್ ( 20) ಎಂಬುವವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಗೆ ಒಳಗಾಗಿರುವ ಸೈಫ್ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿದ್ದಾರೆ.