ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ: 12 ಆರೋಪಿಗಳು ವಶಕ್ಕೆ- ಅರಗ ಜ್ಞಾನೇಂದ್ರ

ಶಿವಮೊಗ್ಗ : ಬಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣದಲ್ಲಿ ಇಲ್ಲಿಯವರೆಗೆ ಒಟ್ಟು 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.

ಒಟ್ಟು 12 ಜನ ಆರೋಪಿಗಳ ಪೈಕಿ ಮೂವರು ಆರೋಪಿಗಳನ್ನು ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಹರ್ಷನ ಹತ್ಯೆಯಲ್ಲಿ ಭಾಗಿಯಾಗಿದ್ದ ಎಲ್ಲಾ 12 ಆರೋಪಿಗಳನ್ನು ಸೆರೆಹಿಡಿಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ‌.

ಈ ಸಂಬಂಧ ಸೋಮವಾರ ಶಿವಮೊಗ್ಗದ ಜೆ ಪಿ ನಗರ ನಿವಾಸಿ ಸೈಯದ್ ನದೀಮ್ ( 20) ಮತ್ತು ಶಿವಮೊಗ್ಗದ ಬುದ್ಧಾನಗರ ನಿವಾಸಿ ಕಾಸಿಫ್ ( 30) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಶಿವಮೊಗ್ಗದಿಂದ ಬೆಂಗಳೂರಿಗೆ ರೈಲು ಮೂಲಕ ಪರಾರಿಯಾಗಿದ್ದ ಇತರೆ ಮೂವರು ಆರೋಪಿಗಳನ್ನು ಇಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ಹಲವು ದಿನಗಳಿಂದ ಹರ್ಷನ ಚಲನವಲನ ಗಮನಿಸುತ್ತಿದ್ದರು. ಹರ್ಷ ಒಂಟಿಯಾಗಿ ಸಿಕ್ಕಾಗ ಇರಿದು ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಘಟನೆ ನಡೆದ ಭಾನುವಾರ ಬೆಳಗ್ಗೆಯಿಂದಲೇ ಹರ್ಷನನ್ನು ಓರ್ವ ಹಿಂಬಾಲಿಸುತ್ತಿದ್ದ. ಹರ್ಷನ ಚಲನವಲನಗಳ ಮೇಲೆ ಬೆಳಗ್ಗಿನಿಂದಲೇ ನಿಗಾ ಇಟ್ಟಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹರ್ಷನ ಕೊಲೆಗೆ ಮೂರು ದಿನಗಳಿಂದ ಸ್ಕೆಚ್ ಹಾಕಿದ್ದ 7 ಆರೋಪಿಗಳು ಹತ್ಯೆಗೈದು ಪರಾರಿಯಾಗಿದ್ದರು. ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದರು. ಆದರೆ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

Leave A Reply

Your email address will not be published.