ಬಜರಂಗದಳ ಕಾರ್ಯಕರ್ತ ಹರ್ಷನ ಕಗ್ಗೊಲೆಯನ್ನು ವ್ಯಾಪಕವಾಗಿ ಖಂಡಿಸಿದ ರಾಮ್ ಸೇನೆ !! | ಸರ್ಕಾರದ ವಿರುದ್ಧ ತೀವ್ರವಾಗಿ ಹರಿಹಾಯ್ದ ಜಿಲ್ಲಾಧ್ಯಕ್ಷ ಕಿರಣ್ ಅಮೀನ್ | ಎಸ್ ಡಿಪಿಐ, ಪಿಎಫ್ಐ ಬ್ಯಾನ್ ಮಾಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
ಇತ್ತೀಚಿಗೆ ಶಿವಮೊಗ್ಗದಲ್ಲಿ ನಡೆದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯನ್ನು ರಾಮ್ ಸೇನೆ, ದಕ್ಷಿಣ ಕನ್ನಡ ಜಿಲ್ಲೆ ವ್ಯಾಪಕವಾಗಿ ಖಂಡಿಸಿದ್ದು, ಜಿಲ್ಲಾಧ್ಯಕ್ಷರಾದ ಕಿರಣ್ ಅಮೀನ್ ಉರ್ವಸ್ಟೋರ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಈವತ್ತಿನ ದಿನದಲ್ಲಿ ಬಿಜೆಪಿ ಸರಕಾರ ಅಧಿಕಾರಲ್ಲಿ ಇದೆ ಅನ್ನೋದಾದ್ರೆ ಅದು ಹಿಂದೂ ಸಂಘಟನೆಯ ಕಾರ್ಯಕರ್ತರು ಹರಿಸಿದ ರಕ್ತದಿಂದ ವಿನಃ ಯಾವುದೇ ಒಬ್ಬ ರಾಜಕೀಯ ಮುಖಂಡನ ಶ್ರಮದಿಂದ ಅಲ್ಲ. ನಿಮ್ಮನ್ನು ಗೆಲ್ಲಿಸಿ ಅಧಿಕಾರ ತಂದು ಕೊಟ್ಟ ನಮ್ಮ ಕಾರ್ಯಕರ್ತರು ಒಬ್ಬೊಬ್ಬರಾಗಿ ಬೀದಿ ಹೆಣ ಆಗ್ತಾ ಇದ್ದಾರೆ. ಮೊನ್ನೆ ಪರೇಶ್ ಮೆಸ್ತಾ ನೆನ್ನೆ ದೀಪಕ್ ರಾವ್, ಪ್ರಶಾಂತ್ ಪೂಜಾರಿ ಇವತ್ತು ಹರ್ಷ ನಾಳೆ ಇನ್ಯಾರೋ… ಅಲ್ಲ ಸ್ವಾಮಿ ನೀವುಗಳು ಅಧಿಕಾರದಲ್ಲಿ ಇದ್ದುಕೊಂಡು ಮಾಡಿದ್ದಾದ್ರೂ ಏನು ಎಂದು ಪ್ರಶ್ನಿಸಿದ್ದಾರೆ.
ಅದೆಷ್ಟೋ ವರ್ಷಗಳಿಂದ ಪಿಎಫ್ಐ ಎಂಬ ಉಗ್ರ ಸಂಘಟನೆಯನ್ನು ನಿಷೇಧ ಮಾಡಿ ಅಂತ ಮನವಿ ಕೊಟ್ವಿ, ಪ್ರತಿಭಟನೆ ಮಾಡಿದ್ವಿ, ಹೋರಾಟ ಮಾಡಿದ್ವಿ ಎಲ್ಲಾ ಕಲ್ಲಿನ ಮೇಲೆ ನೀರು ಹೊಯ್ದ ಹಾಗಾಯಿತು. ನಮ್ಮದೇ ಸರಕಾರ ಇರೋವಾಗ ನಿಷೇಧ ಮಾಡೋದಿಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕು ನಿಮ್ಗೆ? ಅಲ್ಲ ಇನ್ನೂ ಅದೆಷ್ಟು ಹಿಂದೂ ಕಾರ್ಯಕರ್ತರ ಹೆಣ ಬೀಳಬೇಕು ಹೇಳಿ. ತಾಂಟ್ರೆ ಬಾ ಅಂತ ಹೇಳಿದವನನ್ನು ಬಂದಿಸೋ ತಾಕತ್ತು ಇಲ್ಲ ನಿಮ್ಗೆ, ಅದೇ ಹಿಂದೂ ಕಾರ್ಯಕರ್ತರು ಕಸಾಯಿಖಾನೆಗೆ ಹೋಗೋ ಗೋ ರಕ್ಷಣೆ ಮಾಡಿದ್ರೆ, ಲವ್ ಜಿಹಾದ್ ಅನ್ನೋ ಬಲೆಯಿಂದ ಹಿಂದೂ ಸಹೋದರಿಯರ ರಕ್ಷಣೆ ಮಾಡೋಕೆ ಹೋದ್ರೆ ಸುಮೊಟೊ ಅನ್ನೋ ಅಸ್ತ್ರ ಬಳಸಿ ಎಫ್ಐಆರ್ ದಾಖಲಿಸಿ ಜೈಲಿಗೆ ಅಟ್ಟುತ್ತೀರ ಎಂದು ಗುಡುಗಿದ್ದಾರೆ.
ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಆಗಿರೋದು ಸತ್ಯ ಅನ್ನೋದಾದ್ರೆ, ಭಾರತ ಹಿಂದೂ ರಾಷ್ಟ್ರ ಅನ್ನೋದು ಕೂಡ ಅಷ್ಟೇ ಸತ್ಯ. ಇಲ್ಲಿ ದೇಶ ಧರ್ಮದ ರಕ್ಷಣೆಗೆ, ಗೋ ಮಾತೆ, ಹಿಂದೂ ಸಹೋದರಿಯರ ರಕ್ಷಣೆಗೆ ನಿಲ್ಲೋ ಹಿಂದೂ ಯುವಕರನ್ನು ದಮನಿಸುವ ಕಾರ್ಯ ನಡೀತಿರಬೇಕಾದ್ರೆ, ನೀವುಗಳು ನಿಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಂಡು ಆರಾಮವಾಗಿದೀರಾ ಅಲ್ವಾ. ಶಿವಮೊಗ್ಗದ ಹಿಂದೂ ಕಾರ್ಯಕರ್ತನ ಬಲಿದಾನ ಇಡೀ ಹಿಂದೂ ಸಮಾಜಕ್ಕೆ ದುಃಖದ ವಿಷಯ. ಹಾಗೆ ಅಧಿಕಾರದಲ್ಲಿರುವ ರಾಜಕೀಯ ಪಕ್ಷಕ್ಕೆ ನಾಚಿಕೆಕೇಡಿನ ಸಂಗತಿ. ನೆತ್ತರನ್ನು ಹರಿಸಿ ಬಲಿದಾನಗೈದ ಹಿಂದೂ ಸಹೋದರರ ಬಗ್ಗೆ ಸರಕಾರಕ್ಕೆ ಕಿಂಚಿತ್ತೂ ಅನುಕಂಪ ಅನ್ನೋದು ಇದ್ರೆ ಆದಷ್ಟು ಶೀಘ್ರದಲ್ಲಿ ಎಸ್ ಡಿಪಿಐ, ಪಿಎಫ್ಐ ಅನ್ನೋ ಉಗ್ರ ಸಂಘಟನೆಯನ್ನು ಇಡೀ ಭಾರತದಲ್ಲೇ ನಿಷೇಧಗೊಳಿಸಿ ಎಂದು ರಾಮ್ ಸೇನಾ ಕರ್ನಾಟಕ ಸಂಘಟನೆಯು ಘನ ಸರಕಾರವನ್ನು ಆಗ್ರಹಿಸುತ್ತದೆ ಎಂದರು.
ಎಲ್ಲಾ ಸಮಯದಲ್ಲೂ ಶಾಂತಿ ಮಂತ್ರ ಪಠಿಸುತ್ತ ಸುಮ್ಮನೆ ಕೂರಲು ನಾವೇನು ಗಾಂಧಿ ಅನುಯಾಯಿಗಳು ಅಲ್ಲ. ನಾವು ಛತ್ರಪತಿ ಶಿವಾಜಿ ಮಹಾರಾಜರ ಹಿಂಬಾಲಕರು. ಹಿಂದೂ ಸಮಾಜವು ಬೀದಿಗೆ ಇಳಿದು ಉಗ್ರ ಹೋರಾಟವನ್ನು ಮಾಡುವ ಮುಂಚೆ ಮತಾಂಧ ಶಕ್ತಿಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ.