ಕರ್ಮ ಇಸ್ ಬ್ಯಾಕ್ !! | ನಾಯಿಗೆ ಒದೆಯಲು ಕಾಲು ಎತ್ತಿದ ವ್ಯಕ್ತಿಯಿಂದ ತಕ್ಷಣ ಎಸ್ಕೇಪ್ ಆದ ನಾಯಿ | ನಿಯಂತ್ರಣ ಸಿಗದೇ ನೆಲಕ್ಕೆ ದಬಕ್ಕನೆ ಬಿದ್ದ ವ್ಯಕ್ತಿಯ ವೀಡಿಯೋ ವೈರಲ್

ಎಷ್ಟೋ ಜನರು “ಕರ್ಮ” ಎಂಬ ಕಾನ್ಸೆಪ್ಟ್ ನಂಬುತ್ತಾರೆ. ನಾವು ಒಬ್ಬರಿಗೆ ಕೇಡು ಬಯಸಲು ಹೋದರೆ ಅದು ನಮಗೆ ಹಿಂತಿರುಗುತ್ತದೆ ಎಂಬ ನಂಬಿಕೆ ಇಂದು ನಿನ್ನೆಯದಲ್ಲ. ಇದಕ್ಕೆ ಉತ್ತಮ ಉದಾಹರಣೆ ಈ ಘಟನೆ.

 

ಕರ್ಮಕ್ಕೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ, ವ್ಯಕ್ತಿಯೊಬ್ಬ ನಾಯಿ ತನ್ನ ಗಾಡಿ ಪಕ್ಕ ನಿಂತಿದೆ ಎಂದು ಕೋಪದಿಂದ ಬರುತ್ತಾನೆ. ಬಂದ ತಕ್ಷಣ ನಾಯಿಯನ್ನು ಒದೆಯಲು ಕಾಲು ಎತ್ತುತ್ತಾನೆ. ಕೂಡಲೇ ನಾಯಿ ಅಲ್ಲಿಂದ ಓಡಿ ಹೋಗುತ್ತದೆ. ನಿಯಂತ್ರಣ ಸಿಗದೇ ಆ ವ್ಯಕ್ತಿ ನೆಲದ ಮೇಲೆ ಬೀಳುತ್ತಾನೆ.

https://twitter.com/Natureholic2/status/1494825736313573378?s=20&t=3hfkO1MlcI-4wuXS88MUvQ

ಟ್ವಿಟ್ಟರ್ ನಲ್ಲಿ ನೇಚರ್ಹೋಲಿಕ್ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಇದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಈ ವೀಡಿಯೋ ಶೇರ್ ಮಾಡಿದ ಅವರು, ‘ಪರ್ಫೆಕ್ಟ್ ಕರ್ಮಾ’ ಎಂದು ಬರೆದು ನಗುವಿನ ಎಮೋಜಿ ಹಾಕಿ ಪೋಸ್ಟ್ ಮಾಡಿದ್ದಾರೆ. ವೀಡಿಯೋವನ್ನು ಫೆ.19 ರಂದು ಹಂಚಿಕೊಂಡಿದ್ದು, ನೆಟ್ಟಿಗರು ವೀಡಿಯೋ ನೋಡಿ ಅವನಿಗೆ ಈ ರೀತಿ ಆಗಲೇ ಬೇಕು. ಅವನಿಗೆ ಸರಿಯಾಗಿ ಆಗಿದೆ ಎಂದು ಕಮೆಂಟ್ ಮಾಡಿದ್ದಾರೆ.

ಪ್ರಸ್ತುತ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಲಕ್ಷಗಟ್ಟಲೇ ಜನರು ವೀಡಿಯೋವನ್ನು ವೀಕ್ಷಿಸಿದ್ದು, ಶೇರ್ ಮಾಡುತ್ತಿದ್ದಾರೆ. ವೀಡಿಯೋ ನೋಡಿದವರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Leave A Reply

Your email address will not be published.