ನಟ ಚೇತನ್ ಕಾಣೆಯಾಗಿದ್ದಾರೆ – ಪತ್ನಿ ಆರೋಪ

ಸಾಮಾಜಿಕ ಕಾರ್ಯಕರ್ತ ಮತ್ತು ನಟ ಚೇತನ್ ಅಹಿಂಸಾ ಕಾಣೆಯಾಗಿದ್ದಾರೆ ಎನ್ನಲಾಗಿದೆ. ನಟ ಚೇತನ್ ಹೆಂಡತಿ ಮೇಘನಾ ಖುದ್ದು ಫೇಸ್ ಬುಕ್ ಲೈವ್ ಬಂದು ಶೇಷಾದ್ರಿಪುರಂ ಪೊಲೀಸರು ನನ್ನ ಗಂಡನನ್ನು ಬಂಧಿಸಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ.

 

ಮನೆಯಲ್ಲಿದ್ದ ಚೇತನ್ ಅವರನ್ನು ಏಕಾಏಕಿ ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದು ನಟ ಚೇತನ್ ಪತ್ನಿ ಮೇಘಾ ಫೇಸ್ಬುಕ್ ಲೈವ್ ನಲ್ಲಿ ಹೇಳಿಕೊಂಡಿದ್ದಾರೆ. ನಾನು ಮನೆಯೆಲ್ಲಾ ಹುಡುಕಾಡಿದೆ. ಚೇತನ್ ಎಲ್ಲಿ ಎಂದು ಅಲ್ಲಿದ್ದವರನ್ನು ಕೇಳಿದಾಗ ಪೊಲೀಸ್ ನವರು ಕರೆದುಕೊಂಡು ಹೋದರು ಎಂದು ಹೇಳಿದರು. ನಾನು ಶೇಷಾದ್ರಿಪುರಂ ಪೊಲೀಸ್ ಠಾಣೆಯನ್ನು ಸಂಪರ್ಕ ಮಾಡಿದೆ. ಅವರಿಂದ ಸಮರ್ಪಕವಾಗಿ ಉತ್ತರ ಸಿಗುತ್ತಿಲ್ಲ. ಚೇತನ್ ಮತ್ತು ಅಂಗರಕ್ಷಕರ ಫೋನ್ ಕರೆ ಕೂಡಾ ಸಿಗುತ್ತಿಲ್ಲ ಎಂದು ಅವಲತ್ತುಕೊಂಡಿದ್ದಾರೆ

Leave A Reply

Your email address will not be published.