ಹೊಟ್ಟೆನೋವೆಂದು ಆಸ್ಪತ್ರೆಗೆ ಹೋದಾಗ ವ್ಯಕ್ತಿಯ ಹೊಟ್ಟೆ ಯಲ್ಲಿತ್ತು ಗಾಜಿನ ಗ್ಲಾಸ್| ದಿಗ್ಭ್ರಮೆಗೊಂಡ ಡಾಕ್ಟರ್| ಅಷ್ಟಕ್ಕೂ ಚಹಾ ಗ್ಲಾಸ್ ಹೊಟ್ಟೆಯೊಳಗೆ ಹೋದದ್ಹೇಗೆ?
55 ವರ್ಷದ ವ್ಯಕ್ತಿಯೋರ್ವ ಹೊಟ್ಟೆನೋವು ಮತ್ತು ಮಲಬದ್ಧತೆಯೆಂದು ಆಸ್ಪತ್ರೆಗೆ ದಾಖಲಾಗಲು ಬಂದಾಗ, ಸ್ಕ್ಯಾನಿಂಗ್ ಮಾಡಿದಾಗ ವೈದ್ಯರೇ ಶಾಕ್ ಆಗಿರುವ ಘಟನೆಯೊಂದು ಬಿಹಾರದ ಪುಜಾಫರ್ ಪುರದ ಮಾದಿಪುರ ಪ್ರದೇಶದಲ್ಲಿ ನಡೆದಿದೆ. ಕಾರಣ ಏನೆಂದರೆ ವ್ಯಕ್ತಿಯ ಹೊಟ್ಟೆಯಲ್ಲಿದೆ ಗಾಜಿನ ಗ್ಲಾಸ್!
ವ್ಯಕ್ತಿ ವೈಶಾಲಿ ಜಿಲ್ಲೆಯ ಮಹುವಾದ ನಿವಾಸಿಯಾಗಿದ್ದಾರೆ. ವೈದ್ಯರಿಗೆ ಅಲ್ಟ್ರಾಸೌಂಡ್ ಮತ್ತು ಎಕ್ಸ್ ರೇ ಮಾಡಿದಾಗ ಕರುಳಿನಲ್ಲಿ ಈ ಒಂದು ವಸ್ತು ಕಂಡಿದೆ. ನೋಡಿದಾಗ ಅದು ಗಾಜಿನ ಟಂಬ್ಲರ್. ಇದನ್ನು ನೋಡಿ ಖುದ್ದು ವೈದ್ಯರೇ ಆಶ್ಚರ್ಯಚಕಿತರಾಗಿದ್ದಾರೆ. ಅನಂತರ ಡಾಕ್ಟರ್ ಅವರು ಶಸ್ತ್ರಚಿಕಿತ್ಸೆ ಮಾಡಿ ಗಾಜಿನ ಟಂಬ್ಲರ್ ತೆಗೆದಿದ್ದಾರೆ. ಆದರೆ ವಿಶೇಷ ಏನೆಂದರೆ ಈ ಗ್ಲಾಸ್ ಹೊಟ್ಟೆಯೊಳಗೆ ಹೋಗಿದ್ದು ಹೇಗೆ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ. ಈ ಬಗ್ಗೆ ಆ ವ್ಯಕ್ತಿಯಲ್ಲಿ ಕೇಳಿದಾಗ, ಆತ ತಾನು ಚಾ ಕುಡಿಯುವಾಗ ಗಾಜಿನ ಟಂಬ್ಲರ್ ಕೂಡಾ ನುಂಗಿದೆನೆಂದು ಹೇಳುತ್ತಾನೆ. ಆದರೆ ಇದನ್ನು ನಂಬುವುದು ಕಷ್ಟ. ಯಾವ ವ್ಯಕ್ತಿ ಕೂಡಾ ಈ ರೀತಿ ಮಾಡಲು ಅಸಾಧ್ಯ.
ಗಾಜಿನ ಟಂಬ್ಲರ್ ಈ ಭಾಗದಲ್ಲಿ ಸೇರಿಕೊಳ್ಳಲು ಇರುವ ಒಂದೇ ಜಾಗವೆಂದರೆ ಅದು ಗುದದ್ವಾರ ಎಂದು ವೈದ್ಯರು ಹೇಳುತ್ತಾರೆ. ಮನುಷ್ಯನ ದೇಹ ರಚನೆಯಲ್ಲಿ ಈ ಜಾಗ ಬಿಟ್ಟು ಬೇರೆ ಯಾವ ಜಾಗದಿಂದನೂ ಈ ವಸ್ತು ಹೊಟ್ಟೆಯ ಕರುಳಿನ ಮೂಲಕ ಹೋಗಲು ಸಾಧ್ಯವಿಲ್ಲ. ಆದರೆ ಈ ಬಗ್ಗೆ ರೋಗಿಯಲ್ಲಿ ಹೆಚ್ಚು ಕೇಳಿದರೆ ಆತನ ಖಾಸಗಿತನಕ್ಕೆ ಧಕ್ಕೆ ಬರುತ್ತದೆ ಎಂದು ಹಾಗೂ ನಾವು ರೋಗಿಯ ಗೌಪ್ಯತೆ ಕಾಪಾಡಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ ವೈದ್ಯರು.
ಆರಂಭದಲ್ಲಿ ಎಂಡೋಸ್ಕೋಪಿಕ್ ವಿಧಾನದ ಮೂಲಕ ಗುದನಾಳದಿಂದ ಗಾಜನ್ನು ಹೊರತೆಗೆಯಲು ಪ್ರಯತ್ನಮಾಡಲಾಯಿತು. ಆದರೆ ಅದು ಸಾಧ್ಯವಾಗಲಿಲ್ಲ. ಆದ್ದರಿಂದ ಹೊಟ್ಟೆ ಕೊಯ್ದು ಕರುಳಿನ ಭಾಗವನ್ನು ಛೇದಿಸಿ ಟಂಬ್ಲರ್ ಹೊರತೆಗೆಯಲಾಗಿದೆ.
ರೋಗಿಯು ಸದ್ಯ ಆರೋಗ್ಯವಾಗಿದ್ದು. ಆದರೆ ಚೇತರಿಸಿಕೊಳ್ಳಲು ತುಂಬಾ ಸಮಯ ಹಿಡಿಯ ಬಹುದು ಎಂದಿದ್ದಾರೆ ಡಾಕ್ಟರ್.