ಸುರತ್ಕಲ್ ಟೋಲ್ ಗೇಟ್ ಪ್ರಕರಣ : ಆಸಿಫ್ ಆಪತ್ಭಾಂಧವ ಪೊಲೀಸ್ ವಶದಿಂದ ಬಿಡುಗಡೆ
ಮಂಗಳೂರು : ಎನ್ ಐಟಿಕೆ ಟೋಲ್ ಗೇಟ್ ವಿರುದ್ಧ ಕಳೆದ 15 ದಿನಗಳಿಂದ ಅಹೋರಾತ್ರಿ ಧರಣಿ ಕುಳಿತಿದ್ದ ಸಾಮಾಜಿಕ ಕಾರ್ಯಕರ್ತ ಆಸಿಫ್ ಅಪದ್ಭಾಂಧವ ಹಾಗೂ ಸ್ಥಳದಲ್ಲಿದ್ದ ಇತರ ಮೂವರನ್ನು ಸುರತ್ಕಲ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದು , ನಂತರ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕೆಲವು ದಿನಗಳ ಹಿಂದೆ ತಡರಾತ್ರಿ ಮಂಗಳಮುಖಿಯರು ಅವಾಚ್ಯ ಶಬ್ದಗಳಿಂದ ಬೈದು ಆಸಿಫ್ ಮೇಲೆ ಹಲ್ಲೆ ನಡೆಸಲು ಬಂದಿದ್ದರು. ಆಸಿಫ್ ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ 6 ಮಂದಿಯ ಬಂಧನ ಕೂಡಾ ಆಗಿತ್ತು. ಈ ಮಧ್ಯೆ ಮಂಗಳಮುಖಿಯರು ಆಸೀಫ್ ರ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಗೆ ಹೋಗಿ ಪ್ರತಿದೂರು ನೀಡಿದ್ದರು.
ಇಂದು ಪ್ರತಿಭಟನೆ ನಿರತರಾಗಿದ್ದ ಆಸಿಫ್ ಆಪತ್ಭಾಂಧವ ಅಶೀರ್, ಶಾಹಿದ್ ಹಾಗೂ ಸಂತೋಷ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ಸ್ಥಳದಲ್ಲಿದ್ದ ವಾಹನ ಮತ್ತಿತ್ತರ ವಸ್ತುಗಳನ್ನು ಪೊಲೀಸರು ಮುಟ್ಟಗೋಲು ಹಾಕಿದ್ದಾರೆ.
ಅನಂತರ, ಟೋಲ್ ಗೇಟ್ ಅಧಿಕೃತವಾಗಿದೆ. ಈ ಬಗ್ಗೆ ಅಕ್ರಮವೆಂದು ಹೇಳಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಲಾಗಿತ್ತು. ಸ್ಥಳದಲ್ಲಿ ಸಂಚಾರಕ್ಕೆ ತೊಡಕಾಗುತ್ತಿದೆ ಎಂದು ಹೇಳಿದ್ದರು. ಈ ಕಾರಣದಿಂದ ದೂರು ದಾಖಲಾಗಿದ್ದು, ವಿಚಾರಣೆಗೆ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಕಮೀಷನರ್ ಶಶಿಕುಮಾರ್ ತಿಳಿಸಿದ್ದಾರೆ.