ಮಂದಿರ, ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಸುವವರ ವಿರುದ್ಧ ಕಠಿಣ ಕ್ರಮ-ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಎಚ್ಚರಿಕೆ
ಬೆಂಗಳೂರು: ಮಂದಿರ, ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಎಚ್ಚರಿಕೆ ನೀಡಿದ್ದಾರೆ.
ನಗರದ ಜನತೆಯ ಅನುಮಾನಗಳಿಗೆ, ಪ್ರಶ್ನೆಗಳಿಗಾಗಿ ನಡೆದ ಟ್ವಿಟರ್ ಲೈವ್ ಸೆಶನ್’ನಲ್ಲಿ ಮಾತನಾಡುತ್ತ ಈ ಬಗ್ಗೆ ತಿಳಿಸಿದ್ದಾರೆ.ಇದೇ ವೇಳೆ ಅವರು ಮಾತನಾಡಿ, ಮಲ್ಲೇಶ್ವರದ ಮಸೀದಿಯೊಂದರಲ್ಲಿ ಪ್ರತಿ ನಿತ್ಯ ಕೇಳಿ ಬರುತ್ತಿರುವ ಅಜಾನ್ ಶಬ್ದಕ್ಕೆ ಸಂಬಂಧಪಟ್ಟಂತೆ ನಾಗರೀಕರೊಬ್ಬರು ಕಮಲ್ ಪಂತ್‌ಗೆ ದೂರು ನೀಡಿದ ವೇಳೆಯಲ್ಲಿ ಅವರು ಪ್ರತಿಕ್ರಿಯೆ ನೀಡಿ. ಡೆಸಿಬಲ್‌ನ ಮಿತಿಯನ್ನು ಮೀರಿ ಶಬ್ದ ಮಾಲಿನ್ಯ ಮಾಡಿದ್ರೆ ಅಂತಹವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು, ಮಂದಿರ, ಮಸೀದಿಗಳ ಧ್ವನಿವರ್ಧಕಗಳನ್ನು ಕಾನೂನು ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡುವಂತೆ ಸೂಚನೆ ನೀಡಲಾಗುವುದು ಅಂತ ಹೇಳಿದರು.
ಇದೇ ವೇಳೆ ಹಾಫ್ ಹೆಲ್ಮೆಟ್ ಮತ್ತು ಬಿಐಎಸ್ ಮಾರ್ಕ್ ಇರುವ ಹೆಲ್ಮೆಟ್‌ಗಳ ಬಗ್ಗೆ ಜನತೆಗೆ ಇರುವ ಗೊಂದಲವನ್ನು ಕೂಡ ಬಗೆ ಹರಿಸಿದ್ದು, ಐಎಸ್‌ಐ ಮಾರ್ಕಿನ ಫುಲ್ ಹೆಲ್ಮೆಟ್ ಕಡ್ಡಾಯದ ಕುರಿತು ಜನತೆಗೆ ಮಾಹಿತಿ ನೀಡಲಾಗುತ್ತಿದೆ. ಈ ನಡುವೆ ಐಎಸ್‌ಐ ಮಾರ್ಕ್ ಹೊಂದಿರುವ ಹೆಲ್ಮೆಟ್ ಅನ್ನು ಹಾಕಿಕೊಂಡು ವಾಹನ ಸವಾರರು ತಮ್ಮ ವಾಹನವನ್ನು ಚಲಾವಣೆ ಮಾಡಬೇಕು ಅಂತ ಹೇಳಿದರು.