ಇಂಜಿನಿಯರ್ ಪದವೀಧರರಿಗೆ ಉದ್ಯೋಗವಕಾಶ|ರಾಷ್ಟ್ರೀಯ ಜಲ ವಿದ್ಯುತ್ ಮಂಡಳಿಯಲ್ಲಿ ಒಟ್ಟು 133 ಹುದ್ದೆಗಳಿಗೆ ಅರ್ಜಿ ಆಹ್ವಾನ |1.20 ಲಕ್ಷ ರೂ.ವರೆಗೆ ವೇತನ
ಮಿನಿರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ಎನ್ಎಚ್ಪಿಸಿ ಎಂದೇ ಖ್ಯಾತಗೊಂಡಿರುವ ನ್ಯಾಷನಲ್ ಹೈಡ್ರೋ ಪವರ್ ಕಾಪೋರ್ರೇಷನ್ ಲಿಮಿಟೆಡ್ನ (ರಾಷ್ಟ್ರೀಯ ಜಲ ವಿದ್ಯುತ್ ಮಂಡಳಿ) ಹರಿಯಾಣ ಘಟಕದಿಂದ ವಿವಿಧ ಹುದ್ದೆಗಳಿಗೆ ಉತ್ತಮ ವೇತನದೊಂದಿಗೆ ಆನ್ಲೈನ್ ಅರ್ಜಿಆಹ್ವಾನಿಸಲಾಗಿದೆ.
ಆಯ್ಕೆಯಾದ ಅಭ್ಯಥಿರ್ಗಳನ್ನು ದೇಶ ಅಥವಾ ವಿದೇಶದಲ್ಲಿರುವ ಎನ್ಎಚ್ಪಿಸಿಯ ಜಂಟಿ ಉದ್ಯಮ/ ಯೋಜನೆ/ ವಿದ್ಯುತ್ ಕೇಂದ್ರ/ ಶಾಖೆಗಳಿಗೆ ನೇಮಕ ಮಾಡಬಹುದಾಗಿದೆ.
ಒಟ್ಟು ಹುದ್ದೆಗಳು: 133
ಹುದ್ದೆ ವಿವರ
- ಜೂನಿಯರ್ ಇಂಜಿನಿಯರ್- 133
- ಸಿವಿಲ್-68
- ಎಲೆಕ್ಟ್ರಿಕಲ್-34
- ಮೆಕಾನಿಕಲ್ -31
ವಿದ್ಯಾರ್ಹತೆ:
ಜೂ.ಇಂಜಿನಿಯರ್ ಹುದ್ದೆಗೆ ಸಿವಿಲ್, ಎಲೆಕ್ಟ್ರಿಕಲ್, ಮೆಕಾನಿಕಲ್ನಲ್ಲಿ ಡಿಪ್ಲೊಮಾ ಮಾಡಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಪೂರ್ಣಾವಧಿಯಲ್ಲಿ ಡಿಪ್ಲೊಮಾ ಅಧ್ಯಯನ ಮಾಡದೇ ಬಿಇ, ಬಿ.ಟೆಕ್ ಮಾಡಿರುವ ಅಭ್ಯಥಿರ್ಗಳಿಗೆ ಅವಕಾಶ ಇಲ್ಲ ಎಂದು ತಿಳಿಸಲಾಗಿದೆ.
ವಯೋಮಿತಿ:
ಗರಿಷ್ಠ 30 ವರ್ಷ ವಯೋಮಿತಿ ನಿಗದಿಯಾಗಿದ್ದು, ಮೀಸಲಾತಿ ಕೋರುವ ಅಭ್ಯಥಿರ್ಗಳಿಗೆ ವಯೋಸಡಿಲಿಕೆ ಇದೆ.
ವೇತನ:
ಮಾಸಿಕ 29,600- 1,19,500 ರೂ. ವೇತನ ಜತೆ ಸಂಸ್ಥೆಯ ನಿಯಮದನ್ವಯ ಡಿಎ, ಮನೆ ಬಾಡಿಗೆ ಭತ್ಯೆ, ವೈದ್ಯಕಿಯ ಸೌಲಭ್ಯ, ಪಿಎ, ಪೆನ್ಶನ್, ಗ್ರಾಚುಟಿ, ಕೆೆಟೇರಿಯನ್ ಭತ್ಯೆ, ಕಾರ್ಯಕ್ಷಮತೆ ಸಂಬಂಧಿತ ವೇತನ ಹಾಗೂ ಇತರ ಸೌಲಭ್ಯಗಳನ್ನು ನೀಡಲಾಗುವುದು.
ಅರ್ಜಿಶುಲ್ಕ:
ಎಸ್ಸಿ, ಎಸ್ಟಿ, ಅಂಗವಿಕಲ, ಮಾಜಿ ಸೈನಿಕ ಅಭ್ಯಥಿರ್ಗಳನ್ನು ಹೊರತುಪಡಿಸಿ ಉಳಿದ ಅಭ್ಯಥಿರ್ಗಳು 295 ರೂ. ಅರ್ಜಿಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸತಕ್ಕದ್ದು.
ಆಯ್ಕೆ ಪ್ರಕ್ರಿಯೆ:
ಹಿಂದಿ ಹಾಗೂ ಇಂಗ್ಲಿಷ್ನಲ್ಲಿ ಕಂಪ್ಯೂಟರ್ ಆಧಾರಿತ ಆನ್ಲೈನ್ ಪರೀಕ್ಷೆ ನಡೆಸಿ ಅಭ್ಯಥಿರ್ಗಳ ಆಯ್ಕೆ ನಡೆಸಲಾಗುವುದು. ಬೆಂಗಳೂರು ಸೇರಿ 22 ನಗರಗಳಲ್ಲಿ ಪರೀಕ್ಷಾ ಕೇಂದ್ರ ಇರಲಿದ್ದು, ಅಭ್ಯಥಿರ್ಗಳು ಅರ್ಜಿಸಲ್ಲಿಕೆ ಸಮಯದಲ್ಲಿ ತಮ್ಮ ಆಯ್ಕೆಯ 3 ಪರೀಕ್ಷಾ ಕೇಂದ್ರದ ಹೆಸರು ನಮೂದಿಸಲು ಸೂಚಿಸಲಾಗಿದೆ. ತಪ್ಪು ಉತ್ತರಗಳಿಗೆ 0.25 ಋಣಾತ್ಮಕ ಅಂಕ ಇರುತ್ತದೆ.
ಅಧಿಸೂಚನೆಗೆ: https://bit.ly/3s6Olm2
ಮಾಹಿತಿಗೆ: http://nhpcindia.com