ಮಕ್ಕಳ ಮುಂದೆ ಬೆತ್ತಲೆಯಾಗಿಯೇ ವಾಸಿಸುವ ತಾಯಿ!!! ಉತ್ತಮ ಪೋಷಕರಾಗಲು ಮಕ್ಕಳ ಮುಂದೆ ಇದೆಂಥಾ ಪ್ರಯೋಗ?
ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಮತ್ತು ಉತ್ತಮ ಪೋಷಕರಾಗಬೇಕು ಎಂದು ಎಲ್ಲಾ ತಂದೆ ತಾಯಂದಿರು ತಮ್ಮ ಕೈಯಲ್ಲಿ ಸಾಧ್ಯವಾದಷ್ಟನ್ನೂ ಮಾಡುತ್ತಾರೆ. ಆದರೆ ಯಾವ ತಂದೆ ತಾಯಿನೂ ಪರಿಪೂರ್ಣ ಅಲ್ಲ. ಕೆಲವು ತಂದೆ ತಾಯಿಯಂದಿರು ತಮ್ಮ ಮಕ್ಕಳು ಒಳ್ಳೆ ಹಾದಿಯಲ್ಲಿ ನಡೆಯಲಿ ಎಂದು ಕೆಲವೊಂದು ಪ್ರಯೋಗಗಳನ್ನು ಮಾಡುತ್ತಾರೆ. ಆದರೆ ಈ ಪ್ರಯೋಗಗಳಿಗೆ ಯಾವುದೇ ತರ್ಕ ಇರುವುದಿಲ್ಲ. ಅಂತದ್ದೇ ಒಂದು ವಿಚಿತ್ರ ಕೃತ್ಯ ಪೇಜ್ ವಿಟ್ನಿ ಎಂಬ ಮಹಿಳೆಯ ವಿಷಯದಲ್ಲಿ ಆಗ್ತಾ ಇದೆ. ಈಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಟೀಕಿಸುತ್ತಿದ್ದಾರೆ. ಇದಕ್ಕೆ ಕಾರಣವಿದೆ. ಈಕೆ ತನ್ನ ಮಕ್ಕಳ ಮುಂದೆ ಬೆತ್ತಲಾಗಿಯೇ ಇರುತ್ತಾಳಂತೆ. ಈ ಬಗ್ಗೆ ಇತ್ತೀಚೆಗೆ ಟಿಕ್ ಟಾಕ್ ನಲ್ಲಿ ಹೇಳಿಕೊಂಡಿದ್ದಾಳೆ. ಇದನ್ನು ತಿಳಿದೇ ಎಲ್ಲರೂ ಟೀಕಿಸಲು ಪ್ರಾರಂಭ ಮಾಡಿದ್ದಾರೆ.
ರಿಯಲ್ ಟೈಂ ಬಗ್ಗೆ ಈ ವೀಡಿಯೋದಲ್ಲಿ ಮಾಹಿತಿಯನ್ನು ಈಕೆ ಹಂಚಿಕೊಂಡಿದ್ದಾಳೆ. ನನ್ನ ಇಬ್ಬರು ಮಲ ಮಕ್ಕಳ ಮುಂದೆ ನಾನು ಬಟ್ಟೆ ಇಲ್ಲದೆ ವಾಸಿಸುತ್ತಿದ್ದೇನೆ. ಇಬ್ಬರೂ ಗಂಡು ಮಕ್ಕಳಾಗಿದ್ದು ದೊಡ್ಡವನಿಗೆ 3 ವರ್ಷ, ಕಿರಿಯವನಿಗೆ ಒಂದು ವರ್ಷ ಎಂದು ಹೇಳಿದ್ದಾಳೆ. ಈ ಇಬ್ಬರು ಮಕ್ಕಳ ಮುಂದೆ ಆಕೆ ಬಟ್ಟೆ ತೊಡುವ ಸಂದರ್ಭ ಕಡಿಮೆ. ಈ ಬಗ್ಗೆ ಈಕೆಯನ್ನು ಟ್ರೋಲ್ ಮಾಡಲು ಪ್ರಾರಂಭ ಮಾಡಿದವರಿಗೆ ಆಕೆ ಮಕ್ಕಳು ಇನ್ನೂ ಚಿಕ್ಕವರು ಎಂಬ ಉತ್ತರ ಕೊಟ್ಟಿದ್ದಾಳೆ. ಮನುಷ್ಯನ ದೇಹದ ಬಗ್ಗೆ ಅವರಿಗೆ ಇನ್ನೂ ತಿಳುವಳಿಕೆ ಇಲ್ಲ. ದೊಡ್ಡವರು ನೋಡುವ ರೀತಿಯಲ್ಲಿ ಮಕ್ಕಳು ನೋಡುವುದಿಲ್ಲ. ಬಟ್ಟೆ ಬಗ್ಗೆ ಅವರಿಗೆ ಏನೂ ತಿಳಿದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಬಟ್ಟೆಯಿಲ್ಲದೆ ಮಕ್ಕಳ ಮುಂದೆ ಬದುಕಬಹುದು ಎಂದು ಈಕೆಯ ಮಾತು.
ಇನ್ನೂ ಮುಂದುವರಿದು, ನಾನು ಮಕ್ಕಳಿಗೆ ಐದು ವರ್ಷ ತುಂಬಿದಾಗ ಬಟ್ಟೆ ಧರಿಸಲು ಪ್ರಾರಂಭ ಮಾಡುತ್ತೇನೆ. ಆಗ ಮಕ್ಕಳು ಎಲ್ಲದರ ಬಗ್ಗೆ ಗಮನ ಹರಿಸಲು ಪ್ರಾರಂಭ ಮಾಡುತ್ತಾರೆ. ಆವಾಗ ನಾನು ಬಟ್ಟೆ ತೊಡುತ್ತೇನೆ ಎಂದು ಹೇಳಿದ್ದಾಳೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಈ ಮಹಿಳೆಯನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಇದು ತಪ್ಪು, ಮಕ್ಕಳ ಮುಂದೆ ತಾಯಿ ಈ ರೀತಿ ಮಾಡಬಾರದು ಎಂದು ಪೋಷಕರು ಹೇಳಿದ್ದಾರೆ.