ಕೇವಲ 12,199 ರೂಪಾಯಿಗೆ ಮನೆಗೆ ಕೊಂಡೊಯ್ಯಿರಿ ಹೊಸ ಕಾರು !! | ಮಾರುತಿ ಸುಜುಕಿ ತನ್ನ ಗ್ರಾಹಕರಿಗಾಗಿ ಪರಿಚಯಿಸಿದೆ ಹೊಸ ಯೋಜನೆ
ಜೀವನದಲ್ಲಿ ಎಲ್ಲರಿಗೂ ತಮ್ಮದೇ ಆದ ಸ್ವಂತ ಮನೆ, ಕಾರು ಇರಬೇಕೆಂಬ ಕನಸಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾರುಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್ ಬೆಲೆಯು ಹೆಚ್ಚಿರುವುದರಿಂದ ಕಾರು ಕೊಳ್ಳುವುದು ಸ್ವಲ್ಪ ಕಷ್ಟದ ಸಂಗತಿ ಸರಿ. ಸ್ವಂತವಲ್ಲದಿದ್ದರೂ ಇದೀಗ ಬಾಡಿಗೆ ಕಾರು ಖರೀದಿಸಲು ನಿಮಗೊಂದು ವೇದಿಕೆ ಸಿದ್ಧವಾಗಿದೆ. ಅಂತಹ ಯೋಜನೆಯೊಂದನ್ನು ಮಾರುತಿ ಸುಜುಕಿ ತನ್ನ ಗ್ರಾಹಕರಿಗಾಗಿ ಪರಿಚಯಿಸಿದೆ.
ಹೌದು. ಕಾರು ಬಾಡಿಗೆ ಮತ್ತು ಚಂದಾದಾರಿಕೆ ಕಾರ್ಯಗಳಿಗಾಗಿ ಮಹೀಂದ್ರಾ ಫೈನಾನ್ಸ್‌ನ ಕ್ವಿಕ್‌ಲಿಡ್ಜ್‌ನೊಂದಿಗೆ ಪಾಲುದಾರಿಕೆ ಹೊಂದಿರುವುದಾಗಿ ಮಾರುತಿ ಸುಜುಕಿ ಘೋಷಿಸಿದೆ. ಮಾರುತಿ ಸುಜುಕಿಯು ಜುಲೈ 2020 ರಲ್ಲಿ ಮೊದಲ ಬಾರಿಗೆ ಚಂದಾದಾರಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಇದರಲ್ಲಿ ಗ್ರಾಹಕರಿಗೆ ಕಾರುಗಳನ್ನು ಬಾಡಿಗೆಗೆ ನೀಡುವುದನ್ನು ಆರಂಭಿಸಲಾಯಿತು.
ಪ್ರಸ್ತುತ, ಕಂಪನಿಯು ದೆಹಲಿ-ಎನ್‌ಸಿಆರ್, ಬೆಂಗಳೂರು , ಹೈದರಾಬಾದ್, ಪುಣೆ, ಮುಂಬೈ, ಚೆನ್ನೈ, ಅಹಮದಾಬಾದ್, ಜೈಪುರ, ಇಂದೋರ್, ಮಂಗಳೂರು, ಮೈಸೂರು ಮತ್ತು ಕೋಲ್ಕತ್ತಾ ಸೇರಿದಂತೆ ದೇಶದ 20 ನಗರಗಳಲ್ಲಿ ಕಾರನ್ನು ಗ್ರಾಹಕರಿಗೆ ಬಾಡಿಗೆ ನೀಡುವ ಸೌಲಭ್ಯವನ್ನು ಒದಗಿಸುತ್ತಿದೆ.
ಈ ಚಂದಾದಾರಿಕೆ ಕಾರ್ಯಕ್ರಮದ ಅಡಿಯಲ್ಲಿ, ಗ್ರಾಹಕರಿಗೆ ವಿವಿಧ ಅವಧಿಯ ಯೋಜನೆಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಎಲ್ಲಾ ಮೊತ್ತಗಳನ್ನು ಸೇರಿಸಿ ಮಾಸಿಕ ಬಾಡಿಗೆಯನ್ನು ನಿಗದಿಪಡಿಸಲಾಗುತ್ತದೆ. ಮಾಸಿಕ ಬಾಡಿಗೆಯು ವಾಹನದ ಬಳಕೆಯ ಶುಲ್ಕಗಳು, ನೋಂದಣಿ ಶುಲ್ಕಗಳು, ನಿರ್ವಹಣೆ, ವಿಮೆ ಮತ್ತು ರೋಡ್ ಸೈಡ್ ಅಸಿಸ್ಟೆನ್ಸ್ ಜೊತೆಗೆ ವಾಹನದ ಬಳಕೆಗೆ ಸಂಬಂಧಿಸಿದ ಇತರ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿದೆ. ಇದಲ್ಲದೆ, ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಿಳಿ ಮತ್ತು ಕಪ್ಪು ನಂಬರ್ ಪ್ಲೇಟ್‌ಗಳನ್ನು ಆಯ್ಕೆ ಮಾಡಬಹುದು. ದೆಹಲಿಯಲ್ಲಿ ಈ ಚಂದಾದಾರಿಕೆ ಯೋಜನೆಯ ಆರಂಭಿಕ ಮಾಸಿಕ ದರವು 12,199 ರೂಪಾಯಿ ಆಗಿದೆ. ಇನ್ನು ಇದಕ್ಕಾಗಿ ಗ್ರಾಹಕರು ಯಾವುದೇ ಪ್ರತ್ಯೇಕ ಡೌನ್‌ಪೇಮೆಂಟ್ ಮಾಡಬೇಕಾಗಿಲ್ಲ.
ಗ್ರಾಹಕರು ಆಯ್ಕೆ ಮಾಡಿದ ಕಾರಿನ ಚಂದಾದಾರಿಕೆ ಅವಧಿಯು ಕೊನೆಗೊಳ್ಳುತ್ತಿರುವಾಗ, ಗ್ರಾಹಕರು ಹೊಸ ಕಾರನ್ನು ಆಯ್ಕೆ ಮಾಡುವ ಅಥವಾ ಅಸ್ತಿತ್ವದಲ್ಲಿರುವ ಬಳಸಿದ ಕಾರನ್ನು ಖರೀದಿಸುವ ಆಯ್ಕೆಯನ್ನು ಕೂಡಾ ಹೊಂದಿರುತ್ತಾರೆ. ಈ ಸೇವೆಯೊಳಗೆ, ಚಂದಾದಾರರು ಯಾವಾಗ ಬೇಕಾದರೂ ಈ ಚಂದಾದಾರಿಕೆ ಸೌಲಭ್ಯವನ್ನು ಕೊನೆಗೊಳಿಸಬಹುದು. ಕ್ವಿಕ್‌ಲಿಡ್ಜ್‌ನ ಹೊರತಾಗಿ, ಗ್ರಾಹಕರು ಮಾರುತಿ ಸುಜುಕಿ ಕಾರುಗಳನ್ನು ಇತರ ಮೂರು ಆಯ್ಕೆಗಳ ಮೂಲಕ ಆಯ್ಕೆ ಮಾಡಬಹುದು. ಕಂಪನಿ Oryx, Miles ಮತ್ತು ALD ಜೊತೆಗೆ ಕೂಡಾ ಪಾಲುದಾರಿಕೆಯನ್ನು ಹೊಂದಿದೆ.