ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನ ಜನಪ್ರಿಯ ಜೋಡಿಹಕ್ಕಿ !! | ಪ್ರತಿಜ್ಞೆ ವಿನಿಮಯದ ಮೂಲಕ ವಿವಾಹವಾದ ಫರ್ಹಾನ್ ಅಖ್ತರ್, ಶಿಬಾನಿ ದಾಂಡೇಕರ್

Share the Article

ಬಾಲಿವುಡ್ ನ ಜೋಡಿಹಕ್ಕಿಯೊಂದು ಇದೀಗ ಹಸೆಮಣೆಯೇರಿದೆ. ನಟ, ನಿರ್ದೇಶಕ ಫರ್ಹಾನ್‌ ಅಖ್ತರ್‌ ಮತ್ತು ನಟಿ,ಗಾಯಕಿ ಶಿಬಾನಿ ದಾಂಡೇಕರ್‌ ಅವರು ಮನೆಯವರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಎಲ್ಲರಂತೆ ಸಾಂಪ್ರದಾಯಿಕವಾಗಿ ಮರಾಠಿ ಮತ್ತು ಮುಸ್ಲಿಂ ಪದ್ಧತಿಯಂತೆ ಹಸೆಮಣೆ ಏರದೆ, ಪ್ರತಿಜ್ಞೆ ವಿನಿಮಯದ ಮೂಲಕ ದಂಪತಿಗಳು ಪರಸ್ಪರರ ಧಾರ್ಮಿಕ ಹಿನ್ನಲೆ ಮತ್ತು ನಂಬಿಕೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಮಾಡಿದ್ದಾರೆ.

ಇನ್ನು ಮುಂಬೈನಲ್ಲಿರುವ ಅಖ್ತರ್ ಮನೆಯಲ್ಲೇ ಮದುವೆ ಸಮಾರಂಭ ನೆರವೇರಿದ್ದು, ಈ ಕಾರ್ಯಕ್ರಮದಲ್ಲಿ ರಿಯಾ ಚಕ್ರವರ್ತಿ ಮತ್ತು ಅಮೃತಾ ಅರೋರಾ ಸೇರಿದಂತೆ ಬಾಲಿವುಡ್‍ನ ಅನೇಕ ತಾರೆಯರು ಭಾಗಿಯಾಗಿದ್ದರು.

ಅಲ್ಲದೆ ಸಿಂಬಾ ಚಿತ್ರದ ಆಂಖ್ ಮೇರಿ ಹಾಡು, ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದ ಮೆಹೆಂದಿ ಲಗಾ ಕೆ ರಖನಾ ಹಾಡಿಗೆ ಅನುಷಾ ದಾಂಡೇಕರ್ ಮತ್ತು ರಿಯಾ ಚಕ್ರವರ್ತಿ ಸೇರಿದಂತೆ ಎಲ್ಲರೂ ಡ್ಯಾನ್ಸ್ ಮಾಡಿರುವ ವೀಡಿಯೋ ವೈರಲ್ ಆಗಿದೆ.

ನಟ, ನಿರ್ದೇಶಕ ಫರ್ಹಾನ್ ಅಖ್ತರ್ ಗೆ ಇದು ಎರಡನೇ ಮದುವೆ. 2000ರಲ್ಲಿ ಫರಾನ್, ಫರ್ಹಾನ್ ಅಧುನಾ ಬಬಾನಿ ಜೊತೆಗೆ ಮದುವೆ ಆಗಿದ್ದರು. ನಂತರ ಅವರು 2017ರಲ್ಲಿ ವಿಚ್ಛೇದನ ಪಡೆದು ದೂರ ಆಗಿದ್ದಾರೆ.
ಫರ್ಹಾನ್‌ 2018 ರಿಂದ ಶಿಬಾನಿ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದರು. ಈ ವಿಚಾರದ ಕುರಿತು ಹಲವಾರು ಗಾಸಿಪ್‌ಗಳು ಹರಿದಾಡಿತ್ತು, ಕಳೆದ ಕೆಲವು ದಿನಗಳ ಹಿಂದೆ ತಮ್ಮ ಪ್ರೀತಿಯ ವಿಷಯವನ್ನು ಮಾಧ್ಯಮದ ಮುಂದೆ ಹೇಳಿದ್ದರು. ಇದೀಗ ಮನೆಯವರ ಮತ್ತು ಆತ್ಮೀಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

https://www.instagram.com/p/CaJ0_ASKhk7/?utm_source=ig_web_copy_link

ಇನ್ನು ಕೊರೋನಾ ಕಾರಣದಿಂದ ಮದುವೆ ಕಾರ್ಯಕ್ರಮಕ್ಕೆ ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರಷ್ಟೇ ಆಮಂತ್ರಣ ನೀಡಲಾಗಿತ್ತು. ಸದ್ಯ ಈ ಜೋಡಿಗೆ ಆತ್ಮೀಯರು, ಬಾಲಿವುಡ್‌ ಸ್ಟಾರ್‌ಗಳು, ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭ ಹಾರೈಸುತ್ತಿದ್ದಾರೆ.

Leave A Reply