ಮದುವೆಯ ಖುಷಿಯಲ್ಲಿ ತೇಲಾಡುತ್ತಿದ್ದವರು ಮಸಣ ಸೇರಿದರು !! | ಚಾಲಕನ ಅಜಾಗರೂಕತೆಯಿಂದ ವರ ಸೇರಿದಂತೆ 9 ಮಂದಿ ನೀರುಪಾಲು

ಮದುವೆ ಮನೆಗೆ ದಿಬ್ಬಣ ಹೋಗುತ್ತಿದ್ದ ಕಾರೊಂದು ನದಿಗೆ ಉರುಳಿ ಬಿದ್ದ ಪರಿಣಾಮವಾಗಿ ವರ ಸೇರಿದಂತೆ 9 ಮಂದಿ ಸಾವನ್ನಪ್ಪಿದ ದುರಂತ ಘಟನೆ ರಾಜಸ್ಥಾನದ ಉಜ್ಜಯಿನಿ ಸಮೀಪ ನಡೆದಿದೆ.

 

ಮದುವೆಗೆಂದು 9 ಪ್ರಯಾಣಿಕರು ಕಾರಿನಲ್ಲಿ ಕೋಟಾದಿಂದ ಉಜ್ಜಯಿನಿಗೆ ಹೋಗುತ್ತಿದ್ದರು. ಇನ್ನೇನು ಕೆಲವೇ ಗಂಟೆಯಲ್ಲಿ ಮದುವೆ ಎಂದು ಇಡೀ ಕುಟುಂಬವೇ ಸಂಭ್ರಮದಲ್ಲಿ ತೇಲಾಡುತ್ತಿತ್ತು. ಆದರೆ ಆ ವಿಧಿಯಾಟ ಬೇರೆಯಿತ್ತು. ಮದ್ಯಪಾನ ಮಾಡಿ ಚಾಲಕನು ಕಾರನ್ನು ಚಲಾಯಿಸುತ್ತಿದ್ದ ಕಾರಣ ಕಾರು ನಿಯಂತ್ರಣ ತಪ್ಪಿ ಕೋಟಾದ ಚಂಬಲ್ ನದಿಗೆ ಬಿದ್ದಿದೆ. ಇದರಿಂದಾಗಿ ನದಿಯಲ್ಲೇ 9 ಮಂದಿ ಮೃತಪಟ್ಟಿದ್ದಾರೆ.

ಮುಂಜಾನೆ ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸರು ಮತ್ತು ಜಿಲ್ಲಾಡಳಿತ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದೆ. ಮೃತದೇಹಗಳನ್ನು ಮೇಲೆಕ್ಕಿತ್ತಿ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕ್ರೇನ್ ಸಹಾಯದಿಂದ ಕಾರನ್ನು ಹೊರತೆಗೆಯಲಾಗಿದೆ.

ಈ ಕುರಿತು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿ ಅಗಲಿದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

Leave A Reply

Your email address will not be published.