ಅಶ್ಲೀಲ ಫೋಟೋ ಹಾಗೂ ವೀಡಿಯೋವನ್ನು ಹೆಣ್ಮಕ್ಕಳಿಗೆ ಕಳುಹಿಸಿ ಖುಷಿ ಪಡ್ತಿದ್ದ ವಿಕೃತ ಕಾಮಿ ಅರೆಸ್ಟ್ | ಈತನ ಕಿರುಕುಳದಿಂದ ನೊಂದವರು ಅಷ್ಟಿಷ್ಟಲ್ಲ

ಈತ ವಿಚಿತ್ರ ಕಾಮುಕ. ಜೆಸಿಪಿ ಚಾಲಕನಾಗಿ ಕೆಲಸ ಮಾಡುವ ಈತ ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಮಹಿಳೆಯರ ಖಾತೆಗಳನ್ನು ಹುಡುಕಿ ಫ್ರೆಂಡ್ ಶಿಪ್ ಸಂದೇಶ ಕಳುಹಿಸುವ ತೀಟೆ ಬೆಳೆಸಿಕೊಂಡಿದ್ದ. ಅನಂತರ ಅಲ್ಲಿಂದ ಏನಾದರೂ ಸಂದೇಶ ಬಂದರೆ ಸಾಕು ಅವರಿಗೆ ವಾಟ್ಸ ಕಾಲ್ ಮಾಡುತ್ತಿದ್ದ. ವಾಟ್ಸಪ್ ಮತ್ತು ಮೆಸೆಂಜರ್ ನಲ್ಲಿ ಅಶ್ಲೀಲ ಫೋಟೋ ಮತ್ತು ವೀಡಿಯೋಗಳನ್ನು ಕಳುಹಿಸುತ್ತಿದ್ದ. ಈ ರೀತಿಯಲ್ಲಿ ವಿಕೃತಿ ಮೆರೆಯುತ್ತಿದ್ದ. ಕಳೆದ 3 ತಿಂಗಳಿನಿಂದ ಬಿಳೆಕಳ್ಳಿ ಮಹಿಳೆಯೊಬ್ಬರಿಗೆ‌ ಹರೀಶ್ ವಾಟ್ಸಪ್ ಮೂಲಕ ಹಗಲು ರಾತ್ರಿಯೆನ್ನದೆ ಕಾಲ್ ಮಾಡುತ್ತಿದ್ದ. ಕರೆ ಸ್ವೀಕರಿಸದಿದ್ದರೆ ಅಶ್ಲೀಲ ಫೋಟೋ ಕಳುಹಿಸಿ ಕಿರುಕುಳ ನೀಡುತ್ತಿದ್ದ. ಕಡೆಗೆ ಈತನ ಈ ಉಪದ್ರ ತಾಳಲಾರದೆ ಆ ಮಹಿಳೆ ತನ್ನ ಗಂಡನಿಗೆ ವಿಷಯ ತಿಳಿಸಿದ್ದಾಳೆ. ನಂತರ ಮಹಿಳೆಯ ಪತಿ ಫೆ.16 ರಂದು ದೂರನ್ನು ದಾಖಲಿಸಿದ್ದಾರೆ.

 

ಪ್ರಕರಣ ದಾಖಲಿಸಿಕೊಂಡ ಎಸಿಪಿ ಸುಧೀರ್ ಎಂ ಹೆಗಡೆ ಮತ್ತು ಇನ್ಸ್ ಪೆಕ್ಟರ್ ಎಸ್ ಟಿ ಯೋಗೇಶ್ ನೇತೃತ್ವದ ತಂಡ ಆರೋಪಿ ಮೊಬೈಲ್ ನಂಬರ್‌ನ ಸಿಡಿಆರ್ ಮಾಹಿತಿಯನ್ನು ಆಧರಿಸಿ ಬಂಧಿಸಿದ್ದಾರೆ. ಈತ ಇದೇ ರೀತಿ‌ 10 ಕ್ಕೂ ಹೆಚ್ಚು ಮಹಿಳೆಯರಿಗೆ ಕಿರುಕುಳ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಈತ ಈ ರೀತಿ ಅಶ್ಲೀಲ ಫೋಟೋ ಕಳುಹಿಸಿ ವಿಕೃತ ಖುಷಿ ಅನುಭವಿಸುತ್ತಿದ್ದ ಹಾಗೆಯೇ ಸಂತ್ರಸ್ತ ಮಹಿಳೆಯರು ಯಾರೂ ಈತನಿಗೆ ಪರಿಚಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Leave A Reply

Your email address will not be published.