ಸ್ವಂತ ಉದ್ಯಮ ಪ್ರಾರಂಭಿಸಲು ಇಲ್ಲಿದೆ ಸುವರ್ಣಾವಕಾಶ !!| ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಉಚಿತ ಮಾರ್ಗದರ್ಶನ ಕಾರ್ಯಕ್ರಮ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ವತಿಯಿಂದ ಸಂಕಲ್ಪ ಯೋಜನೆಯಡಿಯಲ್ಲಿ ಪ್ರತಿಭಾನ್ವಿತರಿಗೆ ಕಿರು ಉದ್ಯಮ ಪ್ರಾರಂಭಿಸಲು ಅಗತ್ಯವಿರುವ ಸೂಕ್ತ ಮಾರ್ಗದರ್ಶನ ಹಾಗೂ ಉತ್ತೇಜನ ಕಾರ್ಯಕ್ರಮವನ್ನು ಕರ್ನಾಟಕ ಕೌಶಲ್ಯಅಭಿವೃದ್ಧಿ ನಿಗಮವು ಮೈಸೂರಿನ ಸ್ಫೂರ್ತಿ ಪರ್ಫಾರ್ಮನ್ ಸಲ್ಯೂಷನ್ಸ್ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದೆ.

 

ಹೌದು. ಕಿರು ಉದ್ಯಮ ಪ್ರಾರಂಭಿಸಲು ತಳಮಟ್ಟದ ಕಿರು ಉದ್ಯಮಿಗಳಿಗೆ ವಿವಿಧ ಕೌಶಲ್ಯಗಳನ್ನು ಕಲಿಯಲು ಮತ್ತು ವ್ಯವಹಾರ ಜ್ಞಾನವನ್ನು ಪಡೆಯಲು ಸಹಾಯ ಮಾಡುವುದು ಸರ್ಕಾರದ ಈ ವಿನೂತನ ಕಾರ್ಯಕ್ರಮದ ಉದ್ದೇಶವಾಗಿದೆ.

ಕಿರು ಉದ್ಯಮಿಗಳಿಗೆ ಬೇಕಾಗುವ ಜ್ಞಾನ, ಕೌಶಲ್ಯ ಮತ್ತು ವ್ಯವಹಾರ ಜ್ಞಾನವನ್ನು ಪಡೆಯಲು ಅಗತ್ಯವಿರುವ ತರಬೇತಿ, ಮಾರ್ಗದರ್ಶನ ಮತ್ತು ಸಂಬಂಧಪಟ್ಟ ಸಂಸ್ಥೆಗಳಲ್ಲಿ ನೋಂದಣಿ ಮಾಡಿಸಲು ಬೇಕಾಗುವ ಸಲಹೆಗಳನ್ನು ಹಾಗೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಅನುಭವವಿರುವ ಪರಿಣಿತರು ಮತ್ತು ಮಾರ್ಗದರ್ಶಕರು ಉಚಿತವಾಗಿ ಮಾರ್ಗದರ್ಶನ ನೀಡಿ ಕಿರು ಉದ್ಯಮಿಗಳು ಯಶಸ್ವಿ ಉದ್ಯಮಿಗಳಾಗಲು ಸಹಕರಿಸುತ್ತಾರೆ.

ಈ ಕಿರು ಉದ್ಯಮಶೀಲತೆ ಕಾರ್ಯಕ್ರಮವು ತಳಮಟ್ಟದ ಕಿರು ಉದ್ಯಮಿಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಮತ್ತು ಮಹಿಳೆಯರಿಗೆ ವಿಶೇಷ ಗಮನವನ್ನು ನೀಡುವ ಕಾರ್ಯಕ್ರಮವಾಗಿದೆ. ಉದ್ಯಮಶೀಲತೆಯನ್ನು ಪ್ರಾರಂಭಿಸುವ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಎದುರಾಗುವ ಹಲವಾರು ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ.

ಈ ಕಾರ್ಯಕ್ರಮದಡಿಯಲ್ಲಿ ಉದ್ಯಮ ಪ್ರಾರಂಭಿಸಲು ಸರ್ಕಾರದಿಂದ ಯಾವುದೇ ರೀತಿಯ ಸಹಾಯಧನ ಇರುವುದಿಲ್ಲ. ಕಾರ್ಯಕ್ರಮದಲ್ಲಿ ನೋಂದಣಿ ಮಾಡಿಕೊಂಡು ಭಾಗವಹಿಸಲು ಯಾವುದೇ ರೀತಿಯಾದ ಶುಲ್ಕವಿರುವುದಿಲ್ಲ.

ಈ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಿಕೊಳ್ಳಲು ಹಾಗೂ ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ: 9741501631 ಹಾಗೂ ವೆಬ್‍ಸೈಟ್ www.kaushalkar.com/nep/ ಅಥವಾ ಇ-ಮೇಲ್: nepksdc@gmail.com ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

1 Comment
  1. invitle says

    Screening for Kidney Cancer Developed the world s first blood test for kidney cancer coupons for cialis 20 mg 32 The reported annual incidence rates for FSGS is 5 cases per million population in whites, compared with 24 cases per million population in Blacks

Leave A Reply

Your email address will not be published.