ಕಡಬ:ಮಧ್ಯರಾತ್ರಿ ಪೇಟೆಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡಿದ ವ್ಯಕ್ತಿಯನ್ನು ಅಟ್ಟಾಡಿಸಿದ ಕಡಬ ಪೊಲೀಸರು!! ಎಸ್ಐ ರುಕ್ಮ ನಾಯ್ಕ್ ನೇತೃತ್ವದ ಪೊಲೀಸರ ಹದ್ದಿನ ಕಣ್ಣಿನಲ್ಲಿ ಠಾಣಾ ವ್ಯಾಪ್ತಿ

ಕಡಬ:ಮಧ್ಯರಾತ್ರಿ ಹೆದ್ದಾರಿ ಬದಿಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ನೈಟ್ ಪಾಳಿಯಲ್ಲಿದ್ದ ಪೊಲೀಸರು ಅಟ್ಟಾಡಿಸಿದ ಘಟನೆಯೊಂದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿ ಬೆಳಕಿಗೆ ಬಂದ ಘಟನೆ ಕಡಬ ಠಾಣಾ ವ್ಯಾಪ್ತಿಯ ಪೆರಾಬೆ ಎಂಬಲ್ಲಿ ನಡೆದಿದೆ.

 

ಕಡಬ ಠಾಣಾ ಎಸ್ಐ ರುಕ್ಮ ನಾಯ್ಕ್ ನೇತೃತ್ವದ ಪೊಲೀಸರ ತಂಡವು ರಾತ್ರಿ ಗಸ್ತಿನಲ್ಲಿದ್ದಾಗ ಠಾಣಾ ವ್ಯಾಪ್ತಿಯ ಕುಂತೂರು ಪೇಟೆಯಲ್ಲಿ ಮಧ್ಯರಾತ್ರಿ ವ್ಯಕ್ತಿಯೊಬ್ಬ ಅತ್ತಿಂದಿತ್ತ ಓಡಾಟ ನಡೆಸುತ್ತಿರುವುದು ಕಂಡು ಬಂದಿದೆ.ಕೂಡಲೇ ವಾಹನದಿಂದ ಇಳಿದು ಆತನ ವಿಚಾರಿಸಲು ಮುಂದಾದಾಗ ಪೊಲೀಸರನ್ನು ಕಂಡು ಎಸ್ಕೇಪ್ ಆಗುತ್ತಿರುವ ದೃಶ್ಯ ಹಾಗೂ ಪೊಲೀಸರು ಆತನನ್ನು ಬೆನ್ನಟ್ಟುವ ದೃಶ್ಯಗಳು ಅಲ್ಲಿಯೇ ಪಕ್ಕದಲ್ಲಿದ್ದ ಸಿಸಿ ಕ್ಯಾಮೆರಾ ವೊಂದರಲ್ಲಿ ಸೆರೆಯಾಗಿದೆ.

ಫೆಬ್ರವರಿ 18 ರ ರಾತ್ರಿ ಈ ಘಟನೆ ನಡೆದಿದ್ದು, ಪೊಲೀಸರನ್ನು ಕಂಡು ಓಡಿದ ವ್ಯಕ್ತಿ ಕತ್ತಲೆಯಲ್ಲಿ ಕಣ್ಮರೆಯಾಗಿ ಯಾರೆಂದು ಪತ್ತೆ ಮಾಡಲು ಅಸಾಧ್ಯವಾಯಿತು. ಸದ್ಯ ಕಡಬ ಪೊಲೀಸರ ಹದ್ದಿನ ಕಣ್ಣು ಠಾಣಾ ವ್ಯಾಪ್ತಿಯ ಎಲ್ಲಾ ಪ್ರದೇಶಗಳಲ್ಲೂ ಇದ್ದು, ಮನೆ ಕಳ್ಳತನ,ದರೋಡೆ,ಕೊಲೆ ಯಂತಹ ಭೀಕರ ಪ್ರಕರಣಗಳನ್ನು ಮಟ್ಟ ಹಾಕಲು ಕಡಬ ಪೊಲೀಸರು ಕೈಗೊಳ್ಳುತ್ತಿರುವ ಮುಂಜಾಗ್ರತ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Leave A Reply

Your email address will not be published.