ಆತ ದೇಶ ಕಾಯುವ ರಕ್ಷಣಾ ತಂಡದಲ್ಲಿದ್ದ ಮಾಜಿ ಐಪಿ ಎಸ್ ಅಧಿಕಾರಿ | ಆದರೆ ಆತ ಮಾಡಿದ್ದು ಮಾತ್ರ ದೇಶದ್ರೋಹದ ಕೆಲಸ| ಅದೇನಂತೀರಾ ? ಇಲ್ಲಿದೆ ಫುಲ್ ಡಿಟೇಲ್ಸ್
ಆತ ದೇಶ ಕಾಯುವ ಯೋಧ. ಆದರೆ ಆತ ಮಾಡಿದ್ದು ಮಾತ್ರ ದೇಶದ್ರೋಹದ ಕೆಲಸ. ರಾಷ್ಟ್ರೀಯ ತನಿಖಾ ದಳ ( NIA) ಈಗ ಆತನನ್ನು ಬಂಧಿಸಿದೆ. ಅಷ್ಟಕ್ಕೂ ಆತ ಮಾಡಿದ ದೇಶದ್ರೋಹದ ಕೆಲಸ ಯಾವುದು ? ಎನ್ ಐಎ ತನಿಖೆ ವೇಳೆ ಸಿಕ್ಕಿದ ಮಾಹಿತಿ ಏನು ? ಇಲ್ಲಿದೆ ಸಂಪೂರ್ಣ ವರದಿ.
ದೇಶವನ್ನೇ ರಕ್ಷಿಸಬೇಕಾಗಿದ್ದ ತಂಡದಲ್ಲಿದ್ದ ಆತ ಅದೇ ಕೆಲಸದಲ್ಲಿ ನಿವೃತ್ತಿ ಹೊಂದಿದವ.
ದೇಶದ ರಹಸ್ಯ ಮಾಹಿತಿ ಸೋರಿಕೆ ಮಾಡಿ, ದೇಶದ್ರೋಹ ಮಾಡಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಯು ತನ್ನ ಮಾಜಿ ಪೊಲೀಸ್ ವರಿಷ್ಠಾಧಿಕಾರಿ ಪಿ ಅರವಿಂದ್ ದಿಗ್ವಿಜಯ್ ನೇಗಿಯನ್ನು ನವದೆಹಲಿಯಲ್ಲಿ ಬಂಧಿಸಿದೆ. ಈತ ಲಷ್ಕರ್ ಎ ತೊಯ್ಬಾದ ಉಗ್ರರಿಗೆ ದೇಶದ ಗೌಪ್ಯ ದಾಖಲೆಗಳನ್ನು ಹಂಚಿಕೊಂಡ ಆರೋಪ ಎದುರಿಸುತ್ತಿದ್ದಾನೆ.
ಈತನ ಕಾರ್ಯಗಳು, ಚಲನವಲನದ ಬಗ್ಗೆ ಗುಪ್ತಚರ ಸಂಸ್ಥೆಯಿಂದ ಎನ್ ಐಎ ಗೆ ಮಾಹಿತಿ ಲಭ್ಯವಾಗಿತ್ತು. ಅದರ ಪ್ರಕಾರದಂತೆ ದೇಶದ ಭದ್ರತೆಗೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳು ಪರ್ವೆಜ್ ಮೂಲಕ ಭೂಗತ ಕೆಲಸಗಾರನನ್ನು ತಲುಪಿದೆ. ಕಳೆದ ವರ್ಷ ಶಿಮ್ಲಾದಲ್ಲಿನ ನೇಗಿ ನಿವಾಸವನ್ನು ಶೋಧಿಸಿದಾಗ ಈ ಆರೋಪ ಸಾಬೀತಾಗಿತ್ತು.
ಈ ದಿಗ್ವಿಜಯ್ ನೇಗಿ ಮಾಜಿ ಐಪಿಎಸ್ ಅಧಿಕಾರಿ. ಈ ಹಿಂದೆ ಎನ್ ಐಎನಲ್ಲೇ ಕೆಲಸ ಮಾಡಿದ್ದ ಎನ್ನಲಾಗಿದೆ. ಈ ತಂಡದ ಪ್ರಮುಖ ಅಧಿಕಾರಿಯೂ ಆಗಿದ್ದ.
ಈತ ಭಯೋತ್ಪಾದಕ ಸಂಘಟನೆ ಎಲ್ ಇಟಿ ಗೆ ಸೇರಲು ಯುವಕರನ್ನು ಪ್ರೇರೇಪಿಸುವ ಮತ್ತು ಅವರನ್ನು ನೇಮಕ ಮಾಡಿಕೊಳ್ಳುತ್ತಿರುವ ಕೇಸ್ ಗೆ ಸಂಬಂಧಪಟ್ಟಂತೆ ಎನ್ ಐಎ ಜಮ್ಮು ಕಾಶ್ಮೀರದ ಮೂರು ಸ್ಥಳಗಲ್ಲಿ ಶೋಧ ಕಾರ್ಯ ನಡೆಸಿದೆ.
ಶೋಧ ಕಾರ್ಯ ನಡೆಸಿದ ಎನ್ ಐಎ ಅಧಿಕಾರಿಗಳು ಹಲವು ಡಿಜಿಟಲ್ ಡಿವೈಸ್ ಗಳನ್ನು ಜಪ್ತಿ ಮಾಡಿದ್ದಾರೆ. ತನಿಖೆ ಇನ್ನು ಕೂಡಾ ಮುಂದುವರಿಯಲಿದ್ದು ಸ್ಪೋಟಕ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.
ಲಷ್ಕರ್ ಇ ತೋಯ್ಬಾದ ಅಂಗ ಸಂಸ್ಥೆ ದಿ ರೆಸಿಸ್ಟನ್ಸ್ ಫ್ರಂಟ್ ನ ಕಮಾಂಡರ್ ಗಳಾದ ಸಜ್ಜದ್ ಗುಲ್, ಸಲೀಂ ರೆಹಮಾನಿ, ಆಲಿಯಾಸ್ ಅಬುಸಾದ್ ಮತ್ತು ಸೈಫುಲ್ಲಾ ಸಾಜಿದ್ ಸೇರಿ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಯುವಕರನ್ನು ಸೆಳೆಯುವ ಅವರನ್ನು ಉಗ್ರಸಂಘಟನೆಗೆ ಸೇರಲು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಎನ್ ಐ ಎ ಅಧಿಕಾರಿಗಳು ಹೇಳಿದ್ದಾರೆ.