ರೈಲು ಪ್ರಯಾಣಿಕರೇ ಗಮನಿಸಿ: ರೈಲ್ವೆ ಇಲಾಖೆ ಲಗೇಜ್ ಕೊಂಡೊಯ್ಯಲು ಮಾಡಿದೆ ಹೊಸ ರೂಲ್ಸ್| ನಿಯಮ ತಪ್ಪಿದರೆ ಆರು ಪಟ್ಟು ದಂಡ ಗ್ಯಾರಂಟಿ
ನೀವು ರೈಲಿನಲ್ಲಿ ಪ್ರಯಾಣಿಸುವವರಾದರೆ ನಿಮಗೆ ಈ ಮಾಹಿತಿಯ ಅಗತ್ಯತೆ ಕಾಣಬಹುದು. ಭಾರತದಲ್ಲಿ ಬಹುತೇಕ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಇನ್ನು ಮುಂದೆ ರೈಲಿನಲ್ಲಿ ಎಷ್ಟು ಲಗೇಜ್ ಕೊಂಡೊಯ್ಯಬಹುದು ಎಂಬುದನ್ನು ಇಲಾಖೆ ಸೂಚಿಸಿದೆ. ಸೂಚಿಸಿದುದಕ್ಕಿಂತ ಹೆಚ್ಚಿನ ಸಾಮಾನುಗಳನ್ನು ಒಯ್ಯುತ್ತಿದ್ದರೆ ನೀವು ಆರು ಪಟ್ಟು ಹೆಚ್ಚು ದಂಡವನ್ನು ಪಾವತಿಸಬೇಕಾಗುತ್ತದೆ.
ಅಗತ್ಯಕ್ಕೆ ಮೀರಿ ಸರಕುಗಳನ್ನು ಸಾಗಿಸಿದರೆ ಅನೇಕ ರೀತಿಯ ಸಮಸ್ಯೆಗಳನ್ನೆದುರಿಸಬಹುದು. ಅಂದರೆ ನೀವು ಒಂದು ನಿರ್ದಿಷ್ಟ ಮಿತಿಯವರೆಗೆ ಮಾತ್ರ ಸರಕು ಕೊಂಡೊಯ್ಯಬಹುದು. ರೈಲ್ವೆ ನಿಯಮದ ಪ್ರಕಾರ ಕೆಲವು ಸರಕುಗಳನ್ನು ಸಾಗಿಸುವುದನ್ನು ನಿಷೇಧಿಸಲಾಗಿದೆ. ಈ ಸರಕುಗಳನ್ನು ಕೊಂಡೊಯ್ದರೆ ನೀವು ರೈಲಿನಲ್ಲಿ ದಂಡದ ಜೊತೆಗೆ ಜೈಲಿಗೆ ಕೂಡ ಹೋಗಬಹುದು.
ಈ ನಿಯಮದ ಪ್ರಕಾರ ಪ್ರಯಾಣಿಕರು ಗರಿಷ್ಟ 50 ಕೆಜಿ ಸಾಮಾನುಗಳನ್ನು ಮಾತ್ರ ಸಾಗಿಸಬಹುದು. ಅದಕ್ಕಿಂತ ಹೆಚ್ಚಿನ ಸಾಮಾನುಗಳನ್ನು ಸಾಗಿಸಿದರೆ ಅದಕ್ಕೆ ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಎಸಿ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ 70 ಕೆಜಿಯವರೆಗೆ ಸಾಮಾನುಗಳನ್ನು ಕೊಂಡೊಯ್ಯಬಹುದು. ಅದೇ ಸಮಯಯ ಸ್ಲೀಪರ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮೊಂದಿಗೆ ಕೇವಲ 40 ಕಿಲೋ ಸಾಮಾನುಗಳನ್ನು ಮಾತ್ರ ಸಾಗಿಸಬಹುದು. ಅದಕ್ಕಿಂತ ಹೆಚ್ಚಿನ ಸಾಮಾನುಗಳನ್ನು ಸಾಗಿಸಿದರೆ ಅದಕ್ಕೆ ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ರೈಲ್ವೆ ನಿಯಮದ ಪ್ರಕಾರ ಪ್ರಯಾಣಿಕರು ಸ್ಫೋಟಕಗಳನ್ನು, ಉರಿಯುವ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ಒಂದು ವೇಳೆ ಕೊಂಡೊಯ್ದರೆ ಭಾರೀ ಪ್ರಮಾಣದ ದಂಡವನ್ನು ಪಾವತಿಸಬೇಕಾಗುತ್ತದೆ. ಇಷ್ಟು ಮಾತ್ರವಲ್ಲದೇ 3 ವರ್ಷಗಳವರೆಗೆ ಜೈಲಿಗೆ ಹೋಗುವ ಸಾಧ್ಯತೆ ಇದೆ.