ಹಿಜಾಬ್ ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಕಾಲೇಜಿನ 12 ವಿದ್ಯಾರ್ಥಿನಿಯರ ವಿರುದ್ಧ ಎಫ್ ಐಆರ್ ದಾಖಲು

ತುಮಕೂರು :ಹಿಜಾಬ್, ಕೇಸರಿ ವಾದ-ವಿವಾದ ರಾಜ್ಯ ಸರ್ಕಾರದ ಆದೇಶ ಬಂದರೂ ಹೋರಾಟ ನಿಂತಿಲ್ಲ.ಧಾರ್ಮಿಕ ಸಂಕೇತದ ಉಡುಪುಗಳನ್ನು ಧರಿಸುವಂತಿಲ್ಲ ಎಂಬ ನಿಯಮವಿದ್ದರೂ ಹಿಜಾಬ್ ಧರಿಸಿಯೇ ಶಾಲಾ-ಕಾಲೇಜುಗಳಿಗೆ ಪ್ರವೇಶುಸುತ್ತಿದ್ದಾರೆ.ಇದೀಗ ಹಿಜಾಬ್ ಗಾಗಿ ಪ್ರತಿಭಟನೆ ನಡೆಸಿದ 12 ವಿದ್ಯಾರ್ಥಿನಿಯರ ವಿರುದ್ದ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ತುಮಕೂರಿನ ಎಂಪ್ರೆಸ್ ಕಾಲೇಜಿನ 12 ವಿದ್ಯಾರ್ಥಿನಿಯರು ಹಿಜಾಬ್ ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಆರೋಪದಲ್ಲಿ ಎಫ್ ಐಆರ್ ದಾಖಲಾಗಿದೆ.

ಹಿಜಾಬ್ ಧರಿಸಿಕೊಂಡೇ ಕಾಲೇಜಿಗೆ ಹೋಗುವುದಾಗಿ ಪಟ್ಟು ಹಿಡಿದು ಗುರುವಾರ ಗುಂಪು ಕಟ್ಟಿಕೊಂಡು ಕಾಲೇಜಿನ ಎದುರು ವಿದ್ಯಾರ್ಥಿನಿಯರು ಪ್ರತಿಭಟಿಸಿದ್ದರು.ಶಾಲಾ ಕಾಲೇಜು ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಯಲಿದ್ದು, ಗುಂಪು ಸೇರಿ ಪ್ರತಿಭಟಿಸದಂತೆ ಪೊಲೀಸರು ಎಚ್ಚರಿಸಿದ್ದರು.ಆದರೂ ಹಿಜಾಬ್ ಗಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಇದೀಗ ಎಫ್ ಐ ಆರ್ ದಾಖಲಿಸಲಾಗಿದೆ.

Leave A Reply

Your email address will not be published.