ಇಬ್ಬರು ಅಮ್ಮಂದಿರ ಫೇಸ್ಬುಕ್ ಲವ್ : ಸಲಿಂಗ ಕಾಮದ ಮೋಹಕ್ಕೆ ಬಿದ್ದ ಮದುವೆಯಾದ ಯುವತಿಯರು| ಕೊನೆಗೆ ಏನಾಯ್ತು ?

ಸಾಮಾಜಿಕ ಜಾಲತಾಣಗಳ ಮೂಲಕ ಜನರ ಪರಿಚಯ ಆಗುವುದು, ಸ್ನೇಹ ಬೆಳೆಸುವುದು ಇದು ಈಗಿನ ಕಾಲದಲ್ಲಿ ಸಾಮಾನ್ಯವಾಗಿದೆ. ಆದರೆ ಈಗ ನಾವು ಇಲ್ಲಿ ಹೇಳಲಿಕ್ಕೆ ಹೊರಟಿರೋ ಒಂದು ಘಟನೆ ಕೊಂಚ ಭಿನ್ನವಾಗಿದೆ. ಕಾರಣ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಮೂಲಕ ಪರಿಚಯಗೊಂಡ ಇಬ್ಬರು ಯುವತಿಯರು ವಿವಾಹಿತರು. ಅಷ್ಟು ಮಾತ್ರವಲ್ಲ ಮಕ್ಕಳನ್ನು ಹೊಂದಿದವರು. ಹಲವು ವರ್ಷಗಳ ಕಾಲ ಗಂಡನೊಟ್ಟಿಗೆ ಸುಖ ಸಂಸಾರ ಮಾಡುತ್ತಿದ್ದ ವಿವಾಹಿತ ಮಹಿಳೆಯರಿಬ್ಬರು ಇದೀಗ ಪರಸ್ಪರ ಪ್ರೀತಿಸಿ ಸಹಬಾಳ್ವೆ ನಡೆಸಲು ಮುಂದಾಗಿದ್ದಾರೆ.

 

ಶಿಮ್ಲಾದ ಮಹಿಳೆಗೆ ಫೇಸ್ಬುಕ್ ಮೂಲಕ ಭೋಪಾಲ್ ಮಹಿಳೆಯೊಬ್ಬರ ಪರಿಚಯವಾಗಿದೆ. ಬಿಡುವಿನ ಸಮಯದಲ್ಲಿ ಇವರಿಬ್ಬರು ಚಾಟಿಂಗ್ ಮಾಡುತ್ತಿದ್ದರು. ನಂತರ ಭೇಟಿಯಾಗುತ್ತಾರೆ. ಭೇಟಿಯಾಗಿ ಜೊತೆಗೆ ಸ್ವಲ್ಪ ದಿನ ಕಳೆದಿದ್ದಾರೆ. ನಂತರ ಏನಾಯಿತೋ‌ ಗೊತ್ತಿಲ್ಲ ಇಬ್ಬರ ಮಧ್ಯೆ ಪ್ರೀತಿ ಪ್ರಾರಂಭವಾಗಿದೆ. ಈಗ ಗಾಜಿಯಾಬಾದ್ ನಲ್ಲಿ ಇಬ್ಬರು ಕೂಡಾ ಮದುವೆ ಕುಟುಂಬದವರಿಗೆ ಶಾಕ್ ನೀಡಿದ್ದಾರೆ.

ಗಂಡ ಮಕ್ಕಳಿದ್ದರೂ ಮದುವೆಯಾದ ಮಹಿಳೆಯರು ಶಿಮ್ಲ ಮೂಲದ ಮಹಿಳೆಗೆ ಇಬ್ಬರು ಮಕ್ಕಳಿದ್ದರೆ, ಭೋಪಾಲ್ ಮೂಲದ ಮಹಿಳೆ ಒಂದು ಮಗುವಿನ ತಾಯಿ. ಶಿಮ್ಲಾದ ಮಹಿಳೆ ಗಂಡನನ್ನು ತೊರೆದಿದ್ದರೆ, ಭೋಪಾಲ್ ಮಹಿಳೆ ಕೂಡಾ ಪತಿಯಿಂದ ದೂರವಾಗಿ ಏಕಾಂಗಿ ಜೀವನ ನಡೆಸುತ್ತಿದ್ದಾರೆ.

ಇಬ್ಬರು ವಿವಾಹಿತರ ‌ನಡುವೆ ಹುಟ್ಟಿದ ಪ್ರೇಮ ಕಾವ್ಯ. ಇಬ್ಬರು ಸಲಿಂಗ ಯುವತಿಯರ ನಡುವೆ ಈ ಅನುರಾಗ ಮೂಡಿದ್ದರೆ ಅದಕ್ಕೆ ಕಾನೂನು ಕೂಡಾ ಅವಕಾಶ ನೀಡುತ್ತದೆ.

ಕೆಲವು ದಿನಗಳ ಹಿಂದೆ ಭೋಪಾಲ್ ನ ಮಹಿಳೆ ಕಾಣೆಯಾಗಿದ್ದಾಳೆ ಎಂದು ತಿಳಿದ ಕೆಲ ಸಂಘಟನೆಗಳು ಪೊಲೀಸರನ್ನು ಸಂಪರ್ಕಿಸಿದ್ದವು. ಕಾಣೆಯಾದ ಮಹಿಳೆ ಭೋಪಾಲ್ ನ ನಿಶಾತ್ ಪುರದಲ್ಲಿ ವಾಸಿಸಲು ಆರಂಭಿಸಿದ್ದಾಳೆ ಎಂದು ಶಿಮ್ಲಾ ಪೊಲೀಸರಿಗೆ ತಿಳಿಯಿತು.

ನಂತರ ಪೊಲೀಸರು ಇಬ್ಬರು ಮಹಿಳೆಯರಿಗೆ ಕೌನ್ಸಿಲಿಂಗ್ ಮಾಡಿದ್ದಾರೆ. ಈ ವೇಳೆ ಮಾತನಾಡಿರುವ ಇಬ್ಬರು ಮಹಿಳೆಯರು ನಮಗೆ ಯಾವುದೇ ಒತ್ತಡ ಇಲ್ಲ. ನಾವು ಸ್ವ ಇಚ್ಛೆಯಿಂದ ಒಟ್ಟಿಗೇ ಜೀವಿಸುತ್ತಿದ್ದೇವೆ. ನಮಗೆ ಯಾವುದೇ ಒತ್ತಡ ಇಲ್ಲ. ಕಳೆದ 45 ದಿನಗಳಿಂದ ನಾವು ಜೊತೆಯಲ್ಲಿದ್ದೇವೆ ಎಂದು ಹೇಳಿದ್ದಾರೆ. ಇಲ್ಲಿ ಶಿಮ್ಲಾದ ಮಹಿಳೆ ಕೌನ್ಸಿಲಿಂಗ್ ಪಡೆದ ಬಳಿಕ ತನ್ನ ಗಂಡನ ಜೊತೆ ಇರುವುದಾಗಿ ಹೇಳಿದ್ದಾಳೆ.

ಈ ಪ್ರಕರಣದಲ್ಲಿ ಯಾರ ತಪ್ಪು ಕೂಡಾ ಇಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿನೀತ್ ಕಪೂರ್ ಹೇಳಿದ್ದಾರೆ. ಹಾಗಾಗಿ ಯಾರ ಮೇಲೂ ಕೇಸು ದಾಖಲಿಸಿಲ್ಲ ಎಂದು ಹೇಳಿದ್ದಾರೆ.

Leave A Reply

Your email address will not be published.