ಹಿಜಾಬ್ ವಿವಾದ : ” ಶಿಕ್ಷಣಕ್ಕಿಂತ ಹಿಜಾಬ್ ಮುಖ್ಯ” ಎನ್ನುವವರ ಅಜ್ಜಂದಿರು ಭಾರತದ ಬದಲು ಪಾಕಿಸ್ತಾನವನ್ನೇ ಆಯ್ಕೆ ಮಾಡಿ ಹೋಗಬಹುದಿತ್ತಲ್ವಾ!!!

Share the Article

ನವದೆಹಲಿ : ಹಿಜಾಬ್ ವಿವಾದ ರಾಷ್ಟ್ರಾದ್ಯಂತ ಹರಡಿದೆ. ಈ ವಿವಾದದ ಬಗ್ಗೆ ಹಲವಾರು ಕಡೆಯಿಂದ ಹಲವು ಹೇಳಿಕೆಗಳು ಬರುತ್ತಲೇ ಇದೆ. ಹೈಕೋರ್ಟ್ ಶಾಲಾ ಕಾಲೇಜಿನಲ್ಲಿ ಧಾರ್ಮಿಕ ಆಚರಣೆ ಸಲ್ಲದು ಮುಂದಿನ ತೀರ್ಪು ಬರುವವರೆಗೂ ಅಂತಾ ಹೇಳಿದರೂ ಕಾನೂನಿನ ಮಾತಿಗೂ ಬೆಲೆ ಕೊಡದೇ ಹಿಜಾಬ್ ಧರಿಸಿಯೇ ವಿದ್ಯಾರ್ಥಿಗಳು ಶಾಲಾ‌ ಕಾಲೇಜಿಗೆ ಬರ್ತಾ ಇದ್ದಾರೆ.

Vಇವೆಲ್ಲದರ ನಡುವೆ ನಮಗೆ ಶಿಕ್ಷಣಗಿಂತ ಹಿಜಾಬ್ ಮುಖ್ಯ ಎಂದು ಕೆಲವು ವಿದ್ಯಾರ್ಥಿನಿಯರು, ಪ್ರಾಣ ಬಿಡುತ್ತೇವೆ ಹೊರತು ಧರ್ಮ ಬಿಡಲ್ಲ ಎಂದು ವಾದ ಮಾಡುತ್ತಾ ಇದ್ದಾರೆ. ಈ ಮಾತಿಗೆ ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ‘ ಮೊದಲು ಹಿಜಾಬ್ ನಂತರ ಓದು’ ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಹೇಳುತ್ತಿರುವುದನ್ನು ಕೇಳಿದ್ದೇನೆ. ಹೀಗೆ ಘೋಷಣೆ ಕೂಗುತ್ತಾ ತರಗತಿಗಳನ್ನು ಬಹಿಷ್ಕರಿಸುವವರನ್ನು ನೋಡಿದ ನಂತರ ನನಗೊಂದು ಪ್ರಶ್ನೆ ಮೂಡುತ್ತಿದೆ. ಅದೇನೆಂದರೆ ಓದಿಗಿಂತ ಹಿಜಾಬ್ ಮುಖ್ಯ ಆಗಿದ್ದರೆ, ಇವರ ಅಜ್ಜಂದಿರು ಪಾಕಿಸ್ತಾನಕ್ಕೆ ಹೋಗುವುದಕ್ಕಿಂತ ಭಾರತದಲ್ಲೇ ಉಳಿಯುವ ಆಯ್ಕೆ ಯಾಕೆ ಮಾಡಿದರು ಎನ್ನುವುದೇ ಅಚ್ಚರಿಯ ಸಂಗತಿ. ಒಂದು ವೇಳೆ ಅವರು ಭಾರತದ ಬದಲು ಪಾಕಿಸ್ತಾನವನ್ನೇ ಆಯ್ಕೆ ಮಾಡಿದ್ದರೆ, ಸುಲಭವಾಗಿ ಹಿಜಾಬೇ ಮೊದಲು ಆಗುತ್ತಿತ್ತಲ್ಲ” ಎಂದು ಬರೆದಿದ್ದಾರೆ.

Leave A Reply