ಭಾರತೀಯ ಕರಾವಳಿ ಭದ್ರತಾಪಡೆಯಲ್ಲಿ ಭರ್ಜರಿ ಉದ್ಯೋಗವಕಾಶ| ವಿವಿಧ ಸಹಾಯಕ ಕಮಾಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ| ಅರ್ಜಿ ಸಲ್ಲಿಸಲು ಫೆ.28 ಕೊನೆಯ ದಿನಾಂಕ
ಭಾರತೀಯ ಕರಾವಳಿ ಭದ್ರತಾಪಡೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 65 ಸಹಾಯಕ ಕಮಾಂಡೆಂಟ್ ಹುದ್ದೆಗಳು ಖಾಲಿ ಇದೆ. ಫೆ.18 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ. ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನಾಂಕವಾಗಿದೆ.
ಹುದ್ದೆಗಳ ವಿವರ : ಜನರಲ್ ಡ್ಯೂಟಿ / CPL: 50 ಹುದ್ದೆಗಳು
ಟೆಕ್ ( ಇಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್) : 15 ಹುದ್ದೆಗಳು
ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಗಣಿತ, ಭೌತಶಾಸ್ತ್ರ, ಇಂಜಿನಿಯರಿಂಗ್ ನಲ್ಲಿ ನೇವಲ್ ಆರ್ಕಿಟೆಕ್ಚರ್, ಮೆಕ್ಯಾನಿಕಲ್, ಮೆರಿನ್ ಆಟೋಮೋಟಿವ್ , ಲೋಹಶಾಸ್ತ್ರ ಏರೋಸ್ಪೇಸ್ ಕಲಿತಿರಬೇಕು.
ಅರ್ಜಿ ಶುಲ್ಕ : ಅಭ್ಯರ್ಥಿಗಳು ರೂ.250/- ಅರ್ಜಿ ಶುಲ್ಕ ಪಾವತಿಸಬೇಕು.ಎಸ್ಸಿ/ ಎಸ್ಟಿ ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮುಖಾಂತರವೇ ಅರ್ಜಿ ಶುಲ್ಕ ಪಾವತಿಸಬೇಕು.
ವಯೋಮಿತಿ : ಭಾರತೀಯ ಕರಾವಳಿ ಭದ್ರತಾಪಡೆಯಲ್ಲಿ ಸಹಾಯಕ ಕಮಾಂಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಜನರಲ್ ಡ್ಯೂಟಿ/CPL ಹುದ್ದೆಗಾದರೆ ಜುಲೈ 1, 1998 ರಿಂದ ಜೂನ್ 30, 2004ರ ಒಳಗೆ ಜನಿಸಿರಬೇಕು. ಅನಂತರ ಉಳಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಜುಲೈ 1, 1998 ರಿಂದ ಜೂನ್ 30, 2002 ರ ಒಳಗೆ ಜನಿಸಿರಬೇಕು.
ಆಯ್ಕೆ ಪ್ರಕ್ರಿಯೆ : ಅಖಿಲ ಭಾರತ ಅರ್ಹತೆಯ ಆದೇಶವನ್ನು ಆಧರಿಸಿ, ಐದು ಹಂತಗಳಲ್ಲಿ ಪರೀಕ್ಷೆ ನಡೆಸಿ ಅಭ್ಯರ್ಥಿಯ ಕಾರ್ಯಕ್ಷಮತೆಯನ್ನು ಆಧರಿಸಿ ಅಭ್ಯರ್ಥಿಯ ಆಯ್ಕೆ ನಡೆಯಲಿದೆ. ಯಾವುದೇ ಅರ್ಜಿದಾರರು ನೇಮಕಾತಿಗೆ ಅರ್ಹರಾಗಲು 1 ರಿಂದV ವರೆಗಿನ ಪರೀಕ್ಷೆಯ ಎಲ್ಲಾ ಹಂತಗಳಲ್ಲಿ ಅರ್ಹತೆ ಪಡೆಯುವುದು ಕಡ್ಡಾಯ.
ಆಸಕ್ತ ಅಭ್ಯರ್ಥಿಗಳು ಕೇವಲ ಒಂದು ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಚಿತ್ರಗ್ರಹಿಕೆ, ಚರ್ಚೆ ಪರೀಕ್ಷೆ, ದಾಖಲೆ ಪರಿಶೀಲನೆ, ಸಂದರ್ಶನ, ವೈದ್ಯಕೀಯ ಪರೀಕ್ಷೆ, ಕಂಪ್ಯೂಟರ್ ಆಧಾರಿತ ಪರೀಕ್ಷೆ ಈ ಪ್ರಕ್ರಿಯೆಯಲ್ಲಿ ಇದೆ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ