ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಆರು ವರ್ಷದ ಬಾಲಕಿ ಮನೆಯ ನೆಲಮಾಳಿಗೆಯ ಕತ್ತಲೆ ಕೋಣೆಯಲ್ಲಿ ಪತ್ತೆ !! | ಇದರ ಹಿಂದಿರುವ ಕಾರಣ ಮಾತ್ರ ನಿಗೂಢ

ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ಆರು ವರ್ಷದ ಬಾಲಕಿಯೋರ್ವಳು ಮೆಟ್ಟಿಲುಗಳ ಕೆಳಗಿರುವ ಕತ್ತಲೆ ಕೋಣೆಯಲ್ಲಿ ಪತ್ತೆಯಾಗಿರುವ ಅಚ್ಚರಿ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ.

6 ವರ್ಷದ ಬಾಲಕಿಯನ್ನು ಕಿಂಬರ್ಲಿ ಮತ್ತು ಕಿರ್ಕ್ ಎಂಬವರು ನೋಡಿಕೊಳ್ಳುತ್ತಿದ್ದರು. ಆದರೆ ಅವರನ್ನು ಕಳೆದುಕೊಂಡ ನಂತರ ಬಾಲಕಿ ತಮ್ಮ ಪೋಷಕರ ಜೊತೆಗೆ ಇದ್ದಳು. ಆದರೆ 2019ರಲ್ಲಿ ಇದ್ದಕ್ಕಿದ್ದಂತೆ ಬಾಲಕಿ ಕಾಣೆಯಾಗಿದ್ದು, ಪೋಷಕರೇ ಈ ಬಗ್ಗೆ ದೂರು ಕೊಟ್ಟಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಬಾಲಕಿ ಮೊದಲು ಕಣ್ಮರೆಯಾದ ಸ್ಥಳದಿಂದ 150 ಮೈಲುಗಳಷ್ಟು(240 ಕಿ.ಮೀ) ಹುಡುಕಾಡಿದ್ದರು. ನ್ಯೂಯಾರ್ಕ್ ನ ಸ್ಪೆನ್ಸರ್ ಪಟ್ಟಣದಲ್ಲಿರುವ ಬಾಲಕಿ ಮನೆಯಲ್ಲಿಯೂ ತೀವ್ರ ಹುಡುಕಾಟ ನಡೆಸಿದ್ದರು. ಆದರೆ ಬಾಲಕಿ ಬಗ್ಗೆ ಸಣ್ಣ ಸುಳಿವು ಸಹ ಪೊಲೀಸರಿಗೆ ತಿಳಿಯಲಿಲ್ಲ.

ಪೊಲೀಸರಿಗೆ ಮನೆಯವರ ಮೇಲೆಯೇ ಅನುಮಾನ ಹೆಚ್ಚಾಗಿದ್ದು, ಮನೆಯಲ್ಲಿದ್ದ ಸ್ಟೆಪ್ ಬೋರ್ಡ್ ಗಳನ್ನು ತೆಗೆದು ನೋಡಿದಾಗ ಅಲ್ಲಿ ನೆಲಮಾಳಿಗೆ ಇರುವುದು ತಿಳಿದುಬಂದಿದೆ. ನಂತರ ಅವರು ಕೆಳಗೆ ಹೋಗಿ ನೋಡಿದಾಗ ಅಪಹರಣಕ್ಕೊಳಗಾದ ಬಾಲಕಿಯನ್ನು ನೀರು ತುಂಬಿಕೊಂಡಿದ್ದ ಕತ್ತಲೆ ಕೋಣೆಯಲ್ಲಿ ಬಂಧಿಸಲಾಗಿತ್ತು ಎಂಬುದು ತಿಳಿದುಬಂದಿದೆ.

ಪೊಲೀಸ್ ಮುಖ್ಯಸ್ಥ ಜೋಸೆಫ್ ಈ ಕುರಿತು ಮಾತನಾಡಿದ್ದು, ಬಾಲಕಿಯ ಅಪಹರಣಕಾರರು ಆಕೆಯನ್ನು ಇಷ್ಟು ದಿನ ಹೇಗೆ ಅಡಗಿಸಿಟ್ಟಿದ್ದರು ಎಂಬುದೇ ದಿಗ್ಭ್ರಮೆಯಾಗಿದೆ. ನಾವು ಮನೆಯನ್ನು ಹಲವು ಬಾರಿ ತನಿಖೆ ಮಾಡಿದ್ದೆವು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ತಂದೆ ಸೇರಿದಂತೆ ಅವರ ಮನೆಯವರು ಎರಡು ವರ್ಷಗಳ ಕಾಲ ಬಾಲಕಿ ಎಲ್ಲಿದ್ದಾಳೆ ಎಂಬ ಸುಳಿವನ್ನು ಯಾರಿಗೂ ನೀಡಿರಲಿಲ್ಲ. ಯಾವಾಗಲೂ ಅವರು ನಮಗೆ ತಮ್ಮ ಮಗಳು ಎಲ್ಲಿದ್ದಾಳೆಂದು ತಿಳಿದಿಲ್ಲ ಎಂದು ಸುಳ್ಳು ಹೇಳಿತ್ತಿದ್ದರು. ಬಾಲಕಿ ಆರೋಗ್ಯವಾಗಿದ್ದಾಳೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಪ್ರಸ್ತುತ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಬಾಲಕಿಯ ಪೋಷಕರ ಮೇಲೆಯೇ ಆರೋಪ ಕೇಳಿಬರುತ್ತಿದ್ದು, ಅವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.