ಮಹಿಳೆಯ ತೂಕಕ್ಕಿಂತಲೂ ಹೆಚ್ಚು ತೂಕದ ಗೆಡ್ಡೆ ಆಕೆಯ ಹೊಟ್ಟೆಯಲ್ಲಿ !! | 18 ವರ್ಷದಿಂದ ಹೊಟ್ಟೆಯಲ್ಲಿ ಹೊತ್ತುಕೊಂಡ ಭಾರ ಕಳೆದುಕೊಂಡು ಕೊನೆಗೂ ನಿಟ್ಟುಸಿರು ಬಿಟ್ಟ ಮಹಿಳೆ

8 ಜನ ವೈದ್ಯರ ತಂಡವೊಂದು 56 ವರ್ಷದ ಮಹಿಳೆಯೊಬ್ಬಳ ಹೊಟ್ಟೆಯಿಂದ ಬರೋಬ್ಬರಿ 47 ಕೆಜಿ ತೂಕದ ಗೆಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದ ಘಟನೆ ಗುಜರಾತಿನ ಅಹಮದಾಬಾದ್ ನಲ್ಲಿರುವ ಅಪೊಲೋ ಆಸ್ಪತ್ರೆಯಲ್ಲಿ ನಡೆದಿದೆ.

 

ಮಹಿಳೆಯು ಸುಮಾರು 18 ವರ್ಷಗಳಿಂದ ಗೆಡ್ಡೆಯನ್ನು ತನ್ನ ಹೊಟ್ಟೆಯಲ್ಲಿ ಹೊತ್ತುಕೊಂಡು ಭಾರೀ ಶ್ರಮ ಪಟ್ಟಿದ್ದಳು. ಆದರೆ ಕೆಲ ತಿಂಗಳುಗಳಿಂದ ಹೊಟ್ಟೆ ತುಂಬಾ ಭಾರವಾಗಿ ನಡೆದಾಡುವುದು ಕೂಡ ಕಷ್ಟವಾಗಿತ್ತು. ಹೀಗಾಗಿ ಸದಾ ಬೆಡ್ ಮೇಲೆಯೇ ಮಲಗಿರುತ್ತಿದ್ದಳು. ಕೊನೆಗೆ ಉಸಿರಾಟಕ್ಕೂ ತೊಂದರೆಯಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವುದೇ ಸರಿ ಅಂದುಕೊಂಡು ಅಹಮದಾಬಾದ್‌ನ ಅಪೊಲೋ ಆಸ್ಪತ್ರೆಗೆ ಮಹಿಳೆ ದಾಖಲಾದಳು.

ಚೀಫ್ ಗ್ಯಾಸ್ಟೋಎಂಟರಾಲಜಿಸ್ಟ್ ನೇತೃತ್ವದ ನಾಲ್ವರು ನುರಿತ ವೈದ್ಯರನ್ನೊಳಗೊಂಡ ವೈದ್ಯಕೀಯ ತಂಡವು ಸರ್ಜರಿಯನ್ನು ಯಶಸ್ವಿಗೊಳಿಸಿದೆ. ಅಂಗಾಂಶಗಳ ಸುತ್ತ ಬೆಳೆದಿದ್ದ ಹೆಚ್ಚುವರಿ ಚರ್ಮವನ್ನು ತೆಗೆಯುವ ಮೂಲಕ ಸುಮಾರು 47 ಕೆಜಿ ಭಾರವನ್ನು ಕಡಿಮೆ ಮಾಡಲಾಗಿದೆ. ಸುಮಾರು 18 ವರ್ಷಗಳಿಂದ ಭಾರವನ್ನು ಹೊತ್ತುಕೊಂಡು ಬಳಲಿದ್ದ ಮಹಿಳೆ ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಶಸ್ತ್ರಚಿಕಿತ್ಸೆಗೂ ಮುನ್ನ ರೋಗಿಯು ತೂಕವನ್ನು ನೋಡಿರಲಿಲ್ಲ. ಆದರೆ, ಪ್ರಸ್ತುತ ಆಕೆಯ ತೂಕ 49 ಕೆಜಿ ಇದೆ. 56 ವರ್ಷದ ಮಹಿಳೆಯ ದೇಹದಿಂದ 47 ಕೆಜಿ ತೂಕದ ಗೆಡ್ಡೆಯನ್ನು ತೆಗೆಯಲಾಗಿದೆ. ಫೆಬ್ರವರಿ 15 ರಂದು ಅಹಮದಾಬಾದ್‌ನ ಅಪೋಲೋ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ನಡೆದಿದೆ.

ತೆಗೆದ ಗೆಡ್ಡೆಯು ಮಹಿಳೆಯ ತೂಕಕ್ಕಿಂತ ಹೆಚ್ಚಿತ್ತು. ಗೆಡ್ಡೆ ನಿರಂತರ ಬೆಳೆಯುವುದರಿಂದ ಆಂತರಿಕ ಅಂಗಗಳ ಸ್ಥಾನಗಳನ್ನು ಬದಲಾಯಿಸಲು ಕಾರಣವಾಗುತ್ತದೆ. ಹೊಟ್ಟೆಗೆ ಅಂಟಿಕೊಂಡಿರುವ ಗೆಡ್ಡೆಯ ಒತ್ತಡದಿಂದ ಹೃದಯ, ಶ್ವಾಸಕೋಶ, ಕಿಡ್ನಿ, ಮೂತ್ರಕೋಶದ ಭಾಗಗಳು ಬಾಧಿಸುತ್ತವೆ ವೈದ್ಯರೊಬ್ಬರು ತಿಳಿಸಿದ್ದಾರೆ.

Leave A Reply

Your email address will not be published.