ಸಾರ್ವಜನಿಕರೇ ಗಮನಿಸಿ : ಸಬ್ ರಿಜಿಸ್ಟ್ರಾರ್ ಆಫೀಸ್ ಸಮಯದಲ್ಲಿ ಬದಲಾವಣೆ | ಇನ್ನು ಮುಂದೆ ಬೆಳಗ್ಗೆ 9 ರಿಂದ ಸಂಜೆ 7 ರವರೆಗೂ ಕಚೇರಿ ಓಪನ್| ರಾಜ್ಯ ಸರಕಾರದಿಂದ ಆದೇಶ
ಬೆಂಗಳೂರು : ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸಬ್ ರಿಜಿಸ್ಟ್ರಾರ್ ಕಚೇರಿ ಕರ್ತವ್ಯದ ಸಮಯವನ್ನು ಬೆಳಿಗ್ಗೆ 9 ರಿಂದ ರಾತ್ರಿ 7 ಗಂಟೆಯವರೆಗೂ ವಿಸ್ತರಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಕರ್ನಾಟಕ ನೋಂದಣಿ ನಿಯಮ 1965 ರ ನಿಯಮ 4 ಅನ್ವಯ ಬೆಳಗ್ಗೆ 9 ರಿಂದ 7 ಗಂಟೆಯವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ. ನೋಂದಣಿ ಉಪ ಮಹಾಪರಿವೀಕ್ಷಕರು ಮಂಗಳವಾರ ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾಉಪನೋಂದಣಿ ಕಚೇರಿ ಕರ್ತವ್ಯದ ಸಮಯ ಪರಿಷ್ಕರಣೆ ಮಾಡಲಾಗಿದ್ದು, ಈ ಸಂಬಂಧ ಎಲ್ಲಾ ಉಪ ನೋಂದಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಇದುವರೆಗೂ ನೋಂದಣಿ ಮತ್ತು ಮುದಾಂಕ ಕಚೇರಿ ಸಮಯ ಬೆಳಿಗ್ಗೆ 10 ರಿಂದ ಸಂಜೆ 5.50 ರ ವರೆಗೆ ಮಾತ್ರ ಇತ್ತು. ಇದೀಗ ಸಾರ್ವಜನಿಕ ಹಿತದೃಷ್ಟಿಯಿಂದ ಕಚೇರಿ ಸಮಯವನ್ನು ವಿಸ್ತರಿಸಲಾಗಿದೆ.