ಪೇಟಿಎಂ ನಿಂದ ಸಣ್ಣ ವ್ಯಾಪಾರಸ್ಥರಿಗೆ 5 ಲಕ್ಷದವರೆಗೆ ಸಾಲ ಸೌಲಭ್ಯ !! | ಯಾವುದೇ ರೀತಿಯ ಗ್ಯಾರಂಟಿ ನೀಡದೆ ಸಾಲ ಪಡೆಯಲು ಹೀಗೆ ಮಾಡಿ
ಸಾಲ ಎಂದಾಕ್ಷಣ ನೆನಪಾಗುವುದು ಬ್ಯಾಂಕುಗಳು. ಬ್ಯಾಂಕ್‌ನಿಂದ ಸಾಲ ಪಡೆಯುವುದು ಹಿಂದಿಗಿಂತ ಈಗಿನ ದಿನಗಳಲ್ಲಿ ತುಂಬಾ ಸುಲಭವಾಗಿದೆ. ಆದರೆ ಇದಕ್ಕಾಗಿ ನಿಮ್ಮ CIBIL ಸ್ಕೋರ್ ಉತ್ತಮವಾಗಿರುವುದು ಅವಶ್ಯಕ. ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ಸಾಲಗಳಿಗೆ ಡಿಜಿಟಲ್ ಪಾವತಿ ವೇದಿಕೆಯಿಂದ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಗೂಗಲ್ ಪೇ ನಂತರ ಇದೀಗ ಪೇಟಿಎಂ ಸಣ್ಣ ಉದ್ಯಮಿಗಳಿಗೆ ಉತ್ತಮ ಸಾಲ ಸೌಲಭ್ಯವನ್ನು ತಂದಿದೆ.
ಹೌದು. ಸಣ್ಣ ವ್ಯಾಪಾರಿಗಳಿಗಾಗಿ ಪೇಟಿಎಂನಿಂದ 5 ಲಕ್ಷದವರೆಗಿನ ಸಾಲದ ಉತ್ತಮ ಕೊಡುಗೆಯನ್ನು ಪರಿಚಯಿಸಲಾಗಿದೆ. ನೀವು ಈ ಸಾಲವನ್ನು ತೆಗೆದುಕೊಳ್ಳಲು ಬಯಸಿದರೆ ಇದಕ್ಕಾಗಿ ನೀವು ಯಾವುದೇ ರೀತಿಯ ಗ್ಯಾರಂಟಿ ನೀಡಬೇಕಾಗಿಲ್ಲ. ಇದರ ಹೊರತಾಗಿ ನೀವು ಇದನ್ನು ದೈನಂದಿನ ಆಧಾರದ ಮೇಲೆ EMI ಆಗಿ ಪಾವತಿಸಬಹುದು.
ಗ್ರಾಹಕರಿಗೆ ಈ ಸೌಲಭ್ಯವನ್ನು ಒದಗಿಸಲು ಪೇಟಿಯಂ ವಾಣಿಜ್ಯ ಬ್ಯಾಂಕುಗಳು ಮತ್ತು NBFC ಗಳೊಂದಿಗೆ ಪಾಲುದಾರಿಕೆ ಹೊಂದಿದೆ. ನೀವು ಸಾಲವನ್ನು ಪಡೆಯಲು ಬಯಸಿದರೆ ವ್ಯಾಪಾರಕ್ಕಾಗಿ ಪೇಟಿಎಂ ಅಪ್ಲಿಕೇಶನ್‌ನಲ್ಲಿ ‘ಮರ್ಚೆಂಟ್ ಲೆಂಡಿಂಗ್ ಪ್ರೋಗ್ರಾಂ’ಗೆ ಹೋಗಬೇಕು. ಪೇಟಿಎಂ ದೈನಂದಿನ ವಹಿವಾಟಿನ ಆಧಾರದ ಮೇಲೆ ವ್ಯಾಪಾರಿಯ ಕ್ರೆಡಿಟ್ ಅರ್ಹತೆಯನ್ನು ಪರಿಶೀಲಿಸುತ್ತದೆ.
ಈ ಸಾಲದ ಅಪ್ಲಿಕೇಶನ್ ಸಂಪೂರ್ಣವಾಗಿ ಡಿಜಿಟಲ್ ಆಗಿರುತ್ತದೆ. ಇದರಲ್ಲಿ ಯಾವುದೇ ರೀತಿಯ ದಾಖಲೆಗಳನ್ನು ಒದಗಿಸುವ ಅಗತ್ಯವಿರುವುದಿಲ್ಲ. ಪೇಟಿಯಂನೊಂದಿಗೆ ವ್ಯಾಪಾರಿಯ ದೈನಂದಿನ ಇತ್ಯರ್ಥದ ಮೂಲಕ ಸಾಲ ಮರುಪಾವತಿಯನ್ನು ದೈನಂದಿನ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತದೆ. ಒಬ್ಬರು ಅವಧಿಗೆ ಮುನ್ನವೇ ಸಾಲವನ್ನು ಕ್ಲೋಸ್ ಮಾಡಲು ಬಯಸಿದರೆ, ಅದರ ಮೇಲೆ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ.
ಈ ಮೂಲಕ ನೀವು ಸಾಲ ಪಡೆಯಬಹುದು
*ವ್ಯಾಪಾರಕ್ಕಾಗಿ ಪೇಟಿಎಂ ಅಪ್ಲಿಕೇಶನ್‌ನ ಹೋಮ್ ಸ್ಕ್ರೀನ್‌ನಲ್ಲಿರುವ ‘ಬಿಸಿನೆಸ್ ಲೋನ್’ ಐಕಾನ್ ಮೇಲೆ ಟ್ಯಾಪ್ ಮಾಡುವ ಮೂಲಕ ಲಭ್ಯವಿರುವ ಕೊಡುಗೆಗಳನ್ನು ಪರಿಶೀಲಿಸಿ.
*ಅಗತ್ಯಕ್ಕೆ ಅನುಗುಣವಾಗಿ ನೀವು ಸಾಲದ ಮೊತ್ತವನ್ನು ಕಡಿಮೆ ಮಾಡಬಹುದು.
*ಮೊತ್ತವನ್ನು ಆಯ್ಕೆ ಮಾಡಿದ ನಂತರ ನೀವು ವಿತರಣಾ ಮೊತ್ತ, ಪಾವತಿಸಬೇಕಾದ ಒಟ್ಟು ಮೊತ್ತ, ದೈನಂದಿನ ಕಂತು ಇತ್ಯಾದಿಗಳ ಮಾಹಿತಿಯನ್ನು ನೋಡಬಹುದು.
*ಇಲ್ಲಿ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿದ ನಂತರ, ‘Get Started’ ಮೇಲೆ ಟ್ಯಾಪ್ ಮಾಡಿ. ಸಾಲದ ಅರ್ಜಿಯನ್ನು ಪೂರ್ಣಗೊಳಿಸಲು CKYC ಯೊಂದಿಗೆ ನಿಮ್ಮ KYC ಡೇಟಾವನ್ನು ಸಲ್ಲಿಸಿ.
*ಪಾನ್, ಹುಟ್ಟಿದ ದಿನಾಂಕ ಮತ್ತು ಇ-ಮೇಲ್ ಮುಂತಾದವುಗಳಂತಹ ಮಾಹಿತಿಯನ್ನು ಇಲ್ಲಿ ನಮೂದಿಸಿ.
*KYC ಪರಿಶೀಲನೆಯ ನಂತರ ನಿಮ್ಮ ಸಾಲದ ಅರ್ಜಿಯನ್ನು ಸಲ್ಲಿಸಿ. ಸಾಲದ ಅನುಮೋದನೆ ಪಡೆದ ನಂತರ ಹಣವನ್ನು ನಿಮ್ಮ ಖಾತೆಗೆ ಕಳುಹಿಸಲಾಗುತ್ತದೆ.