ಅಪ್ರಾಪ್ತ ಬಾಲಕಿಯೊಂದಿಗೆ ಪ್ರೀತಿ-ಲೈಂಗಿಕ ಸಂಪರ್ಕ!! ಮನಸ್ತಾಪ ಉಂಟಾಗಿ ದೂರವಾಗಿದ್ದ ಜೋಡಿಯು ಮತ್ತೆ ಒಂದಾಗುವ ದಿನ ಹತ್ತಿರವಾದಾಗ ಬಯಲಾಯಿತು ಸತ್ಯ!!

ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪದಡಿ ಯುವಕನೋರ್ವನನ್ನು ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

 

ಘಟನೆಯು ಕೊಲ್ಲಂ ಜಿಲ್ಲೆಯ ಕಡೈಕಲ್ ಎಂಬಲ್ಲಿಂದ ವರದಿಯಾಗಿದ್ದು,ಆರೋಪಿ ಯುವಕನನ್ನು ಧನಿಲ್ ಎಂದು ಗುರುತಿಸಲಾಗಿದೆ.

ಘಟನೆ ವಿವರ: ಆರೋಪಿ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದ. ಇದೇ ಪ್ರೀತಿಯು ಸಲುಗೆಯಿಂದ ಬೆಳೆದಿದ್ದು, ಆರೋಪಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ಕ್ರಿಯೆಯನ್ನೂ ನಡೆಸಿದ್ದ. ಇದಾದ ಬಳಿಕ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಮಾತು ಬಿಟ್ಟಿದ್ದರು.

ಇದಾದ ಬಳಿಕ ಒಂದು ದಿನ ಆಕೆಯನ್ನು ಆರೋಪಿ ತನ್ನ ಬೈಕಿನಲ್ಲಿ ಕುಳ್ಳಿರಿಸಿಕೊಂಡು ಶಾಲೆಗೆ ಬಿಡಲೆಂದು ಹೋಗುತ್ತಿದ್ದ ವೇಳೆ ಬಾಲಕಿಯ ಮೊಬೈಲ್ ಕೈಯಿಂದ ಜಾರಿ ಬೀಳುವುದನ್ನು ತಪ್ಪಿಸಲು ಹೋಗಿ ಬಾಲಕಿ ಬೈಕಿನಿಂದ ಕೆಳಕ್ಕೆ ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಪರೀಕ್ಷಿಸಿದ ವೈದ್ಯರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ತಿಳಿಸಿದ್ದಾರೆ.

ಈ ಬಗ್ಗೆ ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನವಾಗಿದೆ.

Leave A Reply

Your email address will not be published.