ಬಿಜೆಪಿ ಕಾರ್ಯಕರ್ತನ ಕೊಲೆ| ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹೊರಬರುವಾಗ ಚಾಕುವಿನಿಂದ ಇರಿದು ಕೊಲೆ ಮಾಡಿದ ದುಷ್ಕರ್ಮಿಗಳು| ಪೊಲೀಸರಿಂದ ಇಬ್ಬರ ಬಂಧನ

ಭಾರತೀಯ ಜನತಾ ಪಾರ್ಟಿ ಪಕ್ಷದ ಕಾರ್ಯಕರ್ತನೊಬ್ಬನ ಮೇಲೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಹಳೆ ದ್ವೇಷದ ಹಿನ್ನಲೆ ಕೇರಳದ ಆಲಪ್ಪುಳ ಜಿಲ್ಲೆಯ ಹರಿಪಾಡ್ ನಲ್ಲಿ ಈ ಘಟನೆ ನಡೆದಿದೆ.

 

ಮೃತ ಯುವಕನನ್ನು ಹರಿಪಾದ್ ನ ಕುಮಾರಪುರಂ ಬಳಿಯ ವರ್ಯಂಕೋಡ್ವಿದ ಶರತ್ ಚಂದ್ರನ್ ( 26) ಎಂದು ಗುರುತಿಸಲಾಗಿದೆ.

11.30 ರ ಸುಮಾರಿಗೆ ಅಂದರೆ ಬುಧವಾರ ರಾತ್ರಿ ಚಂದ್ರನ್ ದೇವಸ್ಥಾನದಿಂದ ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

ಈ ಸಂಬಂಧ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಹಿಂದೆ ಪುಥನ್ಕರಿಯಲ್ ದೇವಿ ದೇವಸ್ಥಾನದಲ್ಲಿ ಶರತ್ ನೊಂದಿಗೆ ವಾಗ್ವಾದ ನಡೆಸಿದ ದುಷ್ಕರ್ಮಿಗಳು, ನಿನ್ನೆ ಆತನಿಗಾಗಿ ದೇವಸ್ಥಾನದ ಬಳಿ ಕಾಯುತ್ತಿದ್ದರೆನ್ನಲಾಗಿದೆ. ಈ ವೇಳೆ ಮತ್ತೆ ಅವರ ಜೊತೆ ಜಗಳ ನಡೆದಿದೆ. ಈ ಸಂದರ್ಭದಲ್ಲಿ ಚಂದ್ರನ್ ಗೆ ಚೂರಿ ಇರಿದಿದ್ದಾರೆ. ಆ ಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತನಾಗಿದ್ದಾನೆ.

ಸುಮಾರು 7,8 ಮಂದಿ ಈ ಕೃತ್ಯದಲ್ಲಿ ಇದ್ದು, ಕೇವಲ ಇಬ್ಬರನ್ನು ಮಾತ್ರ ಗುರುತಿಸಲು ಸಾಧ್ಯವಾಗಿದೆ. ಅವರನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.