ಮೈಸೂರು: ಹೋಟೆಲ್ ಒಂದರಲ್ಲಿ ಪುರುಷರನ್ನೂ ಮೀರಿಸುವಂತೆ ಕೆಲಸ ಮಾಡುವ ಸುಂದರಿ ಯಾರು!?? ಆಕೆಯ ಕಾಣಲೆಂದೇ ಹೋಟೆಲ್ ಫುಲ್ ರಶ್
ಮೈಸೂರು ಅಂದಾಕ್ಷಣ ನೆನಪಾಗುವುದು ಅಲ್ಲಿನ ಸಾಂಸ್ಕೃತಿಕ ವೈಭವ. ಇಂತಹ ವೈಭವಗಳನ್ನು ಕಾಣುವ ನಗರವನ್ನು ಸಾಂಸ್ಕೃತಿಕ ನಗರಿ ಎಂದೇ ಕರೆಯಲಾಗಿದ್ದು, ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಬದಲಾವಣೆಯ ಬಿರುಗಾಳಿಯೇ ಎದ್ದಿದೆ.ಇಂತಹ ಬದಲಾವಣೆಯ ನಡುವೆಯೇ ಹೊಸತೊಂದು ಬದಲಾವಣೆ ಬಂದಿದ್ದು, ಸುಂದರಿಯೋರ್ವಳು ಹೋಟೆಲ್ ಒಂದರಲ್ಲಿ ಪುರುಷರನ್ನು ಮೀರಿಸುವಂತೆ ಕೆಲಸ ಮಾಡುತ್ತಿದ್ದಾಳೆ.
ಹೌದು, ಹೆಚ್ಚು ಪ್ರವಾಸಿಗಳು ಬರುವ ಸಾಂಸ್ಕೃತಿಕ ನಗರಿಯ ಹೋಟೆಲ್ ಒಂದರಲ್ಲಿ ಕಳೆದ ಕೆಲ ದಿನಗಳಿಂದ ಓರ್ವ ಚಂದದ ಲೇಡಿ ಕೆಲಸ ನಿರ್ವಹಿಸುತ್ತಿದ್ದಾಳೆ. ಆಕೆ ಬೇರೆ ಯಾರೂ ಅಲ್ಲ, ಎಲ್ಲಾ ಕೆಲಸ ಕಾರ್ಯಗಳನ್ನು ಮನುಷ್ಯನಂತೆಯೇ ಸಾರಾಗವಾಗಿ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ರೋಬೊ.
ಮೈಸೂರಿನ ಜಯಚಾಮರಾಜೇಂದ್ರ ವೃತ್ತದ ಬಳಿ ಇರುವ ಸಿದ್ದಾರ್ಥ್ ಹೋಟೆಲ್ ನಲ್ಲಿ ಈ ರೋಬೊ ಕಾಣಸಿಗಲಿದ್ದು, ಹೋಟೆಲ್ ನಲ್ಲಿ ಗ್ರಾಹಕರಿಗೆ ಬೇಕಾದ ಖಾದ್ಯಗಳನ್ನು ವಿತರಿಸುತ್ತಿದೆ. ಗ್ರಾಹಕರು ಬಂದು ಕೂತ ಬಳಿಕ ನೀರು ಕೊಟ್ಟು, ಮೆನು ಕಾರ್ಡ್ ನಲ್ಲಿದ್ದ ಬಗೆ ಬಗೆಯ ಖಾದ್ಯಗಳನ್ನು ವಿವರಿಸಿ ಬೇಕಾದ ಐಟಂ ಗಳನ್ನು ಸಪ್ಲೈ ಮಾಡುತ್ತದೆ.
ಸೆನ್ಸಾರ್ ಆಧಾರದಲ್ಲಿ ಕೆಲಸ ಮಾಡುವ ರೋಬೊ ಸುಮಾರು 10 ಕೆಜಿ ಯಷ್ಟು ತೂಕದ ವಸ್ತುಗಳನ್ನು ಹೊರುವ ಸಾಮರ್ಥ್ಯವನ್ನೂ ಹೊಂದಿದ್ದು,2.5 ಲಕ್ಷ ವೆಚ್ಚದಲ್ಲಿ ತಯಾರಿಸಲಾಗಿದೆ.ಇದೇ ಮೊದಲ ಬಾರಿಗೆ ಈ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಸುಂದರಿ ಎನ್ನುವ ಹೆಸರನ್ನಿಟ್ಟು ರೋಬೊ ವನ್ನು ಕರೆಯಲಾಗುತ್ತಿದೆ. ಸುಂದರಿ ಪದಕ್ಕೆ ನಿಜ ಅರ್ಥ ಕೊಡಲು ರೇಷ್ಮೆ ಸೀರೆ,ಮುತ್ತಿನ ಹಾರವನ್ನು ಕೊರಳಿಗೆ ಹಾಕಲಾಗಿದ್ದು,ಈಕೆಯನ್ನು ಕಂಡ ಗ್ರಾಹಕರು ಅರೆಕ್ಷಣ ಅಚ್ಚರಿಯಿಂದ-ಕುತೂಹಲದಿಂದ ತಲೆ ಮೇಲೆ ಕೈಹೊತ್ತು ಕೂರುವುದಂತು ಖಂಡಿತ.