ಕಾಸರಗೋಡು :RSS ಸಕ್ರಿಯ ಕಾರ್ಯಕರ್ತ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣು

Share the Article

ಕಾಸರಗೋಡು: RSS ಸಕ್ರಿಯ ಕಾರ್ಯಕರ್ತರೋರ್ವರು
ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಇಂದು ಮುಂಜಾನೆ ನಡೆದಿದೆ.

ಅಣಂಕೂರು ಜೆಪಿ ಕಾಲೋನಿಯ ಜ್ಯೋತಿಶ್ (35)
ಎಂಬುವವರು ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಮುಂಜಾನೆ 5 ಗಂಟೆ ಸುಮಾರಿಗೆ ಜ್ಯೋತಿಶ್ ರವರ ತಂದೆ ಮಗನ ರೂಮ್’ ಗೆ ಬಂದಾಗ ಅವರು ಪ್ಯಾನ್’ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ,ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ
ಶವಾಗಾರಕ್ಕೆ ರವಾನಿಸಲಾಗಿದ್ದು,ಸಾವಿಗೆ ನಿಖರವಾದ ಕಾರಣ ಏನೆಂದು ಪೊಲೀಸರ ತನಿಖೆ ಬಳಿಕವಷ್ಟೇ ತಿಳಿದುಬರಬೇಕಿದೆ.

Leave A Reply