ಕುಡಿದ ನಶೆಯಲ್ಲಿ 112 ಗೆ ಕರೆ ಮಾಡಿದ ವ್ಯಕ್ತಿ | ಪೊಲೀಸರು ಬಂದಾಗ ಆತ ಹೇಳಿದ್ದಾದರೂ ಏನು? ಈತ ಕೊಟ್ಟ ಕಾರಣ ಕೇಳಿದರೆ ಹೈರಾಣಾಗುವುದು ಖಂಡಿತ
ಪೊಲೀಸ್, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್ ನಂತಹ ವಿವಿಧ ಸೇವೆಗಳಿಗೆ ಒಂದೇ ತುರ್ತು ಸಹಾಯವಾಣಿ ಸಂಖ್ಯೆಯಾಗಿದೆ. ಎಮರ್ಜೆನ್ಸಿ ನಂಬರ್ 112. ಈ ಸಂಖ್ಯೆಗೆ ಬರುವಂತಹ ಅನೇಕ ಕರೆಗಳಲ್ಲಿ ಮಿಸ್ ಡಯಲ್ , ಪ್ರಾಂಕ್ ಕಾಲ್, ನಿಂದನಾ ಕರೆಗಳು ಹೆಚ್ಚಿರುತ್ತದೆ.
ಈಗ ಇದಕ್ಕೆ ಸಂಬಂಧಿಸಿದಂತೆ ಒಂದು ಘಟನೆ ಹರಿಯಾಣದ ಪಂಚಕುಲದಲ್ಲಿ ನಡೆದಿದೆ. ಇಲ್ಲೊಬ್ಬ ವ್ಯಕ್ತಿ ಮಧ್ಯರಾತ್ರಿ ಪೊಲೀಸ್ ತುರ್ತು ಸಂಖ್ಯೆ 112 ಗೆ ಕರೆ ಮಾಡಿದ್ದಾನೆ. ಅದೂ ಕೂಡಾ ಮದ್ಯದ ನಶೆಯಲ್ಲಿ. ಈತ ಕರೆ ಮಾಡಲು ಕಾರಣ ಕೇಳಿದರೆ ನೀವು ಹೈರಾಣ ಆಗುವುದು ಖಂಡಿತ. ಪೊಲೀಸರು ಬರುತ್ತಾರೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಈತ ತುರ್ತು ಸಂಖ್ಯೆಗೆ ಕರೆ ಮಾಡಿದ್ದಾನೆ.
ದಿನಗೂಲಿ ನೌಕರನಾಗಿರುವ 42 ವರ್ಷದ ನರೇಶ್ ಕುಮಾರ್ ಕಳೆದ ಶುಕ್ರವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಸಹಾಯ ಕೇಳಿದ್ದಾನೆ.
15 ನಿಮಿಷಗಳಲ್ಲಿ, ಪೊಲೀಸರು ನಿಜವಾಗಿಯೂ ಸ್ಥಳಕ್ಕೆ ಆಗಮಿಸಿ ವ್ಯಕ್ತಿಯನ್ನು ಪತ್ತೆ ಮಾಡಿದ್ದಾರೆ. ಪೊಲೀಸರು ಕರೆ ಮಾಡಿದ್ಯಾಕೆ ಎಂದು ಕಾರಣ ಕೇಳಿದಾಗ, ಆತ ಮೋರ್ನಿಯಿಂದ ಬರುವಾಗ ಸಂಜೆ ಬಸ್ ಮಿಸ್ ಆಯಿತು. ನಂತರ ನಡೆದುಕೊಂಡೇ ಮನೆ ಕಡೆ ಹೋಗಲು ನಿರ್ಧರಿಸಿದೆ. ಈ ನಡುವೆ ದಾರಿಯಲ್ಲಿ ಬಿಯರ್ ಸೇವಿಸಿ ಪೊಲೀಸರು ಬರುತ್ತಾರೋ ಇಲ್ಲವೋ ಅಥವಾ ಪರೀಕ್ಷೀಸಲು ಎಮರ್ಜೆನ್ಸಿ ಸಂಖ್ಯೆಗೆ ಕರೆ ಮಾಡಿದ್ದಾನೆ ಎಂದು ಹೇಳಿದ್ದಾನೆ.
ಆತ ಹೇಳಿದ ನಂತರ ಪೊಲೀಸ್ ಅಧಿಕಾರಿಗಳು ನಿಮಗೆ ಏನಾದರೂ ತೊಂದರೆ ಇದೆಯಾ ಎಂದು ಹಲವಾರು ಬಾರಿ ಕೇಳಿದ್ದಾರೆ. ಆದರೂ ಆತ ಅದೇ ಉತ್ತರ ನೀಡಿ, ನನಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ಒಪ್ಪಿಕೊಂಡಿದ್ದಾನೆ.
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರನ್ನು ರಂಜಿಸುತ್ತಿದೆ.