ನಟನಾ ಕ್ಷೇತ್ರದ ಬೆಳೆಯುವ ಪ್ರತಿಭೆ – ಸುಜಿತ್ ಪಳ್ಳಿ

ಬರಹ : ನೀತು ಬೆದ್ರ

ನುಡಿ ಮನಸ್ಸುಗಳ ಒಳಗೊಳಗೆ, ಸಾಧನೆಯೆಂಬ ಪತದಲ್ಲಿ ಕೇಳ ಹೊರಟು,ಹೇಳಿಸಿದಾಗ, ಅವನೊಬ್ಬನ್ನ ಸಾಧನೆ ಮನತಲುಪಿತು. ಸಿನೆಮಾ. ಗೆದ್ದವರು,ಬಿದ್ದವರು, ಸೋತವರು ,ಹೆಸರುವಾಸಿಯಾದವರು ಇದ್ದೇ ಇರುತ್ತಾರೆ. ಗೆದ್ದವರ ಜಾಡು ಹಿಡಿದಾಗ,ಅವರು ಸೋತಾಗ ಕಂಡ ಹತಾಶೆಯ ನೋಟಗಳು ಬದುಕಿನ ಪಾಠವಾಗುತ್ತೇ ಅಲ್ವಾ.
ಇಲ್ಲೊಬ್ಬರನ್ನು ಕಂಡಾಗ ಬೆಳಕಿನ ಸಹಾಯಕನಾಗಿ ಬಂದು,ಸಹ ನಿರ್ದೇಶಕನಾಗಿ, ಸಾಹಸ ನಿರ್ದೇಶಕನಾಗಿ, ನಟನಾಗಿ ಹೊರಹೊಮ್ಮತ್ತಿರುವ ಪ್ರತಿಭೆ ಸುಜಿತ್ ಪಳ್ಳಿ.

ಕಾರ್ಕಳ ತಾಳೂಕಿನ ಪಳ್ಳಿ ಗ್ರಾಮದಲ್ಲಿ ಸುಂದರ ಮತ್ತು ಶಾಂತ ದಂಪತಿಗಳ ಮಗನಾಗಿ ಜನಿಸಿದ ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪಡೆದವರು.ಬಾಲ್ಯದಿಂದಲೇ ಇವರಿಗೇ ಸಿನೆಮಾದ ಸಾಹಸ ದೃಶ್ಯಗಳೆಂದರೆ ಏನೋ ಪ್ರೀತಿ, ಆ ಆಸ್ತಕಿಯ ಜೊತೆಗೆ ಛದ್ಮವೇಶ, ಜಾನಪದ ನೃತ್ಯವನ್ನು ಮಾಡುತ್ತಾ ಬೆಳೆದವರು. ನಂತರದ ದಿನಗಳಲ್ಲಿ ಹುಲಿ ಕುಣಿತದೊಂದಿಗೆ ತನ್ನನ್ನು ತಾನು ತೊಡಗಿಸಿಕೊಂಡ ಬಳಿಕ ಸಿನೆಮಾ ಕ್ಷೇತ್ರಕ್ಕೆ ಕಾಲಿಡಬೇಕೆಂಬ ಮಹದಾಸೆಯನ್ನು ಹೊಂದಿ, ಸಿನೆಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು.

ಮನುಷ್ಯ ಜೀವನದಲ್ಲಿ ಉನ್ನತಿ ಕಾಣಬೇಕಾದರೆ ಮೂರು ಅಂಶಗಳು ಅತಿ ಮುಖ್ಯ. ಪ್ರಯತ್ನ, ಯೋಗ್ಯತೆ ಮತ್ತು ದೇವರ ಅನುಗ್ರಹ. ನಮ್ಮ ಸಾಧನೆಗೆ ನಾವು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅನೇಕ ಅಡ್ಡಿಗಳು ಎದುರಾಗಬಹುದು. ಮನಸ್ಸು ಸ್ಥಿರವಾಗಿರಬೇಕು. ದೇಹವು ಭಗವಂತ ನುಡಿಸುವ ವೀಣೆ ಎನ್ನುತ್ತದೆ ಉಪನಿಷತ್. ತಾನು ಬೆಳೆಯಬೇಕಾದರೆ ಇವೆಲ್ಲವೂ ಅವಶ್ಯಕ. ತನ್ನ ಬಗ್ಗೆ ಯಾರು ಏನನ್ನೂ ಹೇಳಿದರು ಕಿವಿಗೊಡದೆ, ಕಾಲು ಏಳೆಯುವವರ ಮಧ್ಯೆ ತಾನು ಅಂದುಕೊಂಡಿದ್ದನ್ನು ಸಾಧಿಸಬೇಕೆಂಬ ಇಂಗಿತವನ್ನು ಇಟ್ಟುಕೊಂಡ ಸುಜಿತ್, ಕಿರುಚಿತ್ರಗಳಲ್ಲಿ ಪ್ರಾರಂಭಿಸಿ ಈಗ ಕನ್ನಡ ಹಾಗೂ ತುಳು ಚಿತ್ರದಲ್ಲಿ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರೊಂದಿಗೆ ಸಾಹಸ ನಿರ್ದೇಶನವನ್ನು ತನ್ನ ಪದವಿ ವ್ಯಾಸಂಗದ ನಂತರ ಪ್ರಾರಂಭಿಸಿದ ಇವರು, ಅನೇಕ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದ್ದಾರೆ. ಹಲವಾರು ಕಲಾವಿದರಿಂದ ಸಿನೆಮಾ,ಮತ್ತು ಅಭಿನಯದ ಬಗ್ಗೆ ತಿಳಿದುಕೊಳುತ್ತಾ ಇವರು ತನ್ನ ನಟನೆಯನ್ನು ಅಭಿವ್ಯಕ್ತ ಪಡಿಸುತ್ತಿದ್ದಾರೆ ಎನ್ನಬಹುದು. ಇವರು ನಟಿಸಿದ ಮೊದಲ ಕನ್ನಡ ಸಿನೆಮಾ “ಕನಸು ಮಾರಾಟಕ್ಕಿದೆ”, ” ಗಬ್ಬರ್ ಸಿಂಗ್” ಇವರ ಮೊದಲ ತುಳು ಸಿನೆಮಾ, ಶೋಭರಾಜ್,ಡಿಟೆಕ್ಟಿವ್ ದಿವಾಕರ್ ವೆಬ್ ಸೀರಿಸ್ ನಲ್ಲೂ ಅಭಿನಯಿಸುತ್ತಿದ್ದಾರೆ. ತನಗೆ ಬಂದಂತಹ ಸಣ್ಣ ಸಣ್ಣ ಪಾತ್ರಗಳಿಗೂ ಜೀವ ತುಂಬುತ್ತಾ ದೊಡ್ಡ ಪಾತ್ರಗಳು ಇವರನ್ನು ಅರಸಿ ಬರಬಹುದು ಎಂಬ ನಿರೀಕ್ಷೆಯಲ್ಲಿ ಇದ್ದಾರೆ. ಇದಲ್ಲದೇ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಇವರು ತನ್ನನ್ನು ತಾನು ತೊಡಗಿಸಿಕೊಂಡು, ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡ ತಂಡ ಇವರದ್ದು ಹೇಳಲು ಹೆಮ್ಮೆಯನಿಸುತ್ತಿದೆ.

ತನಗೆ ಗೊತ್ತಿಲ್ಲದ ಊರಿನ ದಾರಿಯನ್ನು ಇಂಥವರೇ ತೋರಿಸಬೇಕೆಂಬ ನಿಯಮವಿರುವುದಿಲ್ಲ.ಅಂಥ ಸಮಯದಲ್ಲಿ ಯಾರು ದಾರಿ ತೋರಿಸಿದರೂ ಸರಿಯೇ, ಊರು ತಲುಪುತ್ತಾರೆ.ಅದರಂತೆ ಸತ್ಯದ ಅರಿವನ್ನು ತಿಳಿಸಿಕೊಡುವಂಥ ಗುರುವು ಎಂಥವನಿದ್ದರೇನು ? ತಾನು ನಡೆದ ಹಾದಿಯಲ್ಲಿಯೇ ಒಂದೊಂದು ಗುರುವಿನ ರೀತಿ ಮಾರ್ಗದರ್ಶನ ನೀಡಿದೆ ಎನ್ನುವ ಇವರಿಗೆ ತಂದೆ ತಾಯಿಯೇ ಸ್ಪೂರ್ತಿ. ಇವರ ಕೇಶ ವಿನ್ಯಾಸದಿಂದ ಅಭಿಮಾನಿಗಳು ಇವರನ್ನು ಗುರುತಿಸುತ್ತಾರೆ ಎನ್ನುವ ಇವರು ನಾವು ಕೆಲಸ ಮಾಡಿ ತೋರಿಸಬೇಕು ಅಷ್ಟೇ ಎನ್ನುತ್ತಾರೆ ಸುಜಿತ್. ಬೆಳೆಯುವ ಪ್ರತಿಭೆಗೆ ಇನ್ನೂ ಹತ್ತು ಹಲವು ಅವಕಾಶಗಳು ಒದಗಿ ಬರಲಿ,ದೈವ ದೇವರ ಆಶೀರ್ವಾದ ಸದಾ ಇವರ ಮೇಲಿರಲಿ ಎಂಬುವುದೇ ನನ್ನ ಆಶಯ.

Leave A Reply

Your email address will not be published.