ಪರೀಕ್ಷೆಗಿಂತ ಹಿಜಾಬ್ ಮುಖ್ಯ ಎಂದು ಪಟ್ಟು ಹಿಡಿದು ಎಕ್ಸಾಮ್ ಬರೆಯದೆ ಹೊರನಡೆದ ವಿದ್ಯಾರ್ಥಿನಿಯರು
ಶಿವಮೊಗ್ಗ:ಹಿಜಾಬ್ ವಾದ -ವಿವಾದಗಳಿಗೆ ಎಲ್ಲರಿಗೂ ಸಮಾನತೆಯಂತೆ ಹೈಕೋರ್ಟ್ ಮೌಖಿಕ ಮಧ್ಯಂತರ ಆದೇಶ ನೀಡಿದ್ದು, ಮುಂದಿನ ಆದೇಶದ ತನಕ ಯಾವುದೇ ಧಾರ್ಮಿಕ ಗುರುತು ಹೊಂದಿರುವ ಬಟ್ಟೆಗಳನ್ನು ವಿದ್ಯಾರ್ಥಿಗಳು ಧರಿಸಬಾರದು ಎಂದು ತಿಳಿಸಿತ್ತು.ಆದರೆ ಇದಕ್ಕೆ ವಿರುದ್ಧವಾಗಿ ಶಿವಮೊಗ್ಗದಲ್ಲಿ ಹಿಜಾಬ್ ತೆಗೆಯುವುದಿಲ್ಲ, ಪರೀಕ್ಷೆ ಬರೆಯುವುದಿಲ್ಲ ಎಂದು 13 ವಿದ್ಯಾರ್ಥಿನಿಯರು ಪಟ್ಟು ಹಿಡಿದ ಘಟನೆ ಇಂದು ನಡೆದಿದೆ.
ಹಿಜಾಬ್ ವಿವಾದ ಮಧ್ಯೆ ಇಂದು ಸರ್ಕಾರದ ಆದೇಶ ಪ್ರಕಾರ 9 ಮತ್ತು 10ನೇ ತರಗತಿಗೆ ಶಾಲೆ ಪುನಾರಂಭವಾಗಿದ್ದು,ಎಸ್ ಎಸ್ ಎಲ್ ಸಿ ಪೂರ್ವಭಾವಿ ಪರೀಕ್ಷೆ ನಡೆಯುತ್ತಿದೆ.ಶಿವಮೊಗ್ಗದ ಶಾಲೆಯೊಂದರಲ್ಲಿ ಸರಿ ಸುಮಾರು 13 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಯಲ್ಲಿ ನಡೆಯುತ್ತಿದ್ದ ಪ್ರಿಪ್ರೇಟರಿ ಎಕ್ಸಾಂಗೆ ಹಾಜರಾಗಿದ್ದರು, ಕೂಡಲೇ ಶಿಕ್ಷಕರು ವಿದ್ಯಾರ್ಥನಿಯರ ಗಮನಕ್ಕೆ ನ್ಯಾಯಾಲಯದ ವರದಿಯನ್ನು ತಿಳಿಸಿದ್ದಾರೆ.
ಆದರೆ ವಿದ್ಯಾರ್ಥಿನಿಯರು ಮಾತ್ರ ನಾವು ಹಿಜಾಬ್ ತೆಗೆಯುವುದಿಲ್ಲ, ನಮ್ಮ ಹೆತ್ತವರು ಹಿಜಾಬ್ ತೆಗೆಯಂದಂತೆ ಹೇಳಿದ್ದಾರೆ ಅಂತ ಹೇಳಿದ್ದಾರೆ. ಈ ನಡುವೆ ಶಾಲಾ ಅಡಳಿತ ಮಂಡಳಿ, ಹಿಜಾಬ್ ತೆಗೆದ್ರೆ ಮಾತ್ರ, ಎಕ್ಸಾಂಗೆ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಆದರೆ ವಿದ್ಯಾರ್ಥಿನಿಯರು ತರಗತಿಯೊಳಗೆ ಹಿಜಾಬ್ ತೆಗೆಯುವುದಿಲ್ಲ ಎಂದು ಎಕ್ಸಾಂಗಿಂತ ಹಿಜಾಬ್ ಮುಖ್ಯ ಪರೀಕ್ಷೆ ಬರೆಯಲು ಬಿಡದಿದ್ದರೆ ಹೋಗಿ ಹಿಜಾಬ್ ಅಂತೂ ತೆಗೆಯುವುದಿಲ್ಲ ಎಂದರು.