ರಂಗು ರಂಗಿನ ಪ್ರಪಂಚ ಬಿಟ್ಟು ಟ್ರಕ್ ಡ್ರೈವರ್ ಹುದ್ದೆ ಆಯ್ಕೆ ಮಾಡಿದ ಮಾಡೆಲ್!!!ಈಕೆಯ ಈ ಸಾಧನೆ ಇನ್ನೊಬ್ಬರಿಗೆ ಸ್ಪೂರ್ತಿ
ಈಗಿನ ಕಾಲದಲ್ಲಿ ಮಹಿಳೆಯರು ಕೂಡಾ ಗಂಡಸರಿಗೆ ಸರಿಸಮಾನರಾಗಿ ಕೆಲಸ ಮಾಡುತ್ತಾರೆ. ಕೆಲವೊಂದು ಕೆಲಸ ಮಹಿಳೆಯರ ಕೈಯಲ್ಲಿ ಮಾಡೋಕೆ ಆಗಲ್ಲ ಅಂತ ಹೇಳ್ತಿದ್ದವರೆಲ್ಲಾ ಈಗ ಮೂಗಿನ ಮೇಲೆ ಬೆರಳಿಡಬೇಕು ಅಂತಹ ಕೆಲಸಗಳನ್ನು ಮಾಡುತ್ತಾರೆ ಮಹಿಳೆಯರು. ಉದಾಹರಣೆಗೆ ಟ್ರಕ್ ಓಡಿಸುವುದು. ಈ ಕೆಲಸ ಮಾಡುವಾಗ ಮಹಿಳೆಯರು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ ಇಲ್ಲೊಬ್ಬಳು ಬೆಡಗಿ, ಸುಂದರಿ ರಂಗು ರಂಗಿನ ಜಗತ್ತಿನಲ್ಲಿ ಕ್ಯಾಟ್ ವಾಕ್ ಮಾಡ್ತಿದ್ದ ಮಾಡೆಲ್ ಒಬ್ಬಳು ಮಾಡಿದ ನಿರ್ಧಾರ ಎಲ್ಲರೂ ಆಶ್ಚರ್ಯ ಪಡುವ ಹಾಗೆ ಮಾಡಿದೆ. ಮಾಡೆಲ್ ಆಗಿದ್ದ ಈಗ ಈಕೆ ಡ್ರೈವರ್ ವೃತ್ತಿ ಆಯ್ಕೆ ಮಾಡಿಕೊಂಡಿದ್ದಾಳೆ.
ಈ ಯುವತಿಯ ಹೆಸರು ಮಿಲೀ ಎವರ್ಟ್, ವಯಸ್ಸು 22. ಮಿಸ್ ಇಂಗ್ಲೆಂಡ್ ಬ್ಯೂಟಿ ಫೈನಲಿಸ್ಟ್ ಆಗಿದ್ದ ಮಿಲೀ, ಮಿಸ್ ಲಿಂಕನ್ ಶೈರ್ ಆಗಿ ಖ್ಯಾತಿ ಪಡೆದಿದ್ದಾಳೆ.
ಬ್ರಿಟನ್ ನಲ್ಲಿ ಟ್ರಕ್ ಡ್ರೈವರ್ ಗಳ ಕೊರತೆಯಿದೆ. ಹಾಗಿರುವಾಗ ಗ್ಲಾಮರ್ ಜಗತ್ತನ್ನೇ ಬಿಟ್ಟು ಈ ವೃತ್ತಿಗೆ ಸೇರಲು ಮಿಲೀ ಮುಂದಾಗಿದ್ದಾರೆ. ಮಿಲೀ ಬಾಲ್ಯದಿಂದಲೂ ಹೊಲಗಳಲ್ಲಿ ಟ್ರ್ಯಾಕ್ಟರ್ ಓಡಿಸೋ ಆಸಕ್ತಿ ಹೊಂದಿದ್ದಳಂತೆ.
ಸಾಧಿಸುವ ಹಠ ಒಂದು ಇದ್ದರೆ ಕಷ್ಟಕರವಾದ ಕೆಲಸ ಮಾಡಬಹುದು ಎನ್ನುವುದಕ್ಕೆ ಈಕೆ ಉದಾಹರಣೆ. ಯುಕೆಯಲ್ಲಿ ಹೆವಿ ಗೂಡ್ಸ್ ವೆಹಿಕಲ್ಸ್ ಚಾಲಕರಲ್ಲಿ ಕೇವಲ ಶೇ.1 ರಿಂದ 3 ರಷ್ಟು ಮಹಿಳಾ ಚಾಲಕರು ಮಾತ್ರ ಇರುವುದು. ಮಿಲೀ ಈಗ 44 ಟನ್ ಟ್ರಕ್ ಓಡಿಸಲು ಕ್ಲಾಸ್ 1 ಮತ್ತು ಕ್ಲಾಸ್ 2 ಪರವಾನಗಿ ತರಬೇತಿ ಪಡೆಯುತ್ತಿದ್ದಾಳೆ.