ಬದುಕಿದ್ದಾಗ ನೂರಾರು ಮಂದಿಯ ಸೇವೆ ಮಾಡಿದ ನರ್ಸ್ ಹಠಾತ್ ಸಾವು| ಮಗಳ ಸಾವಿನಿಂದ ಪೋಷಕರ ದೊಡ್ಡ ನಿರ್ಧಾರ| ಸಚಿವ ಸುಧಾಕರ್ ಟ್ವೀಟ್
ನರ್ಸ್ ಒಬ್ಬಳು ತನ್ನ ಅಂಗಾಂಗ ದಾನ ಮಾಡುವ ಮೂಲಕ ಐವರ ಬಾಳಿಗೆ ಬೆಳಕಿನ ದಾರಿ ತೋರಿಸಿದ್ದಾಳೆ.
ಚಿಕ್ಕಮಗಳೂರಿನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದ ಯುವತಿಯೋರ್ವಳ ಅಂಗಾಂಗಗಳನ್ನು ಪೋಷಕರು ಆಸ್ಪತ್ರೆಗೆ ದಾನ ಮಾಡಿದ್ದಾರೆ.
ಗಾನವಿ ಶಿವಮೊಗ್ಗದ ನರ್ಸಿಂಗ್ ಹೋಮ್ ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಫೆ.8 ರಂದು ಬೆಳಿಗ್ಗೆ 3.30 ರ ಸಮಯದಲ್ಲಿ ದಿಢೀರನೆ ಕುಸಿದು ಬೀಳುತ್ತಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಫೆ.12 ರಂದು ಬ್ರೈನ್ ಡೆಡ್ ಆಗಿದೆ ಎಂದು ವೈದ್ಯರು ಹೇಳುತ್ತಾರೆ. ಈ ಸಮಯದಲ್ಲಿ ಕುಟುಂಬಸ್ಥರು ಗಾನವಿ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ನೀಡುತ್ತಾರೆ.
ಈ ಬಗ್ಗೆ ಡಾ| ಸುಧಾಕರ್ ಟ್ವೀಟ್ ಮಾಡಿದ್ದಾರೆ. ‘ ಮರಣಪೂರ್ವದಲ್ಲಿ ರೋಗಿಗಳ ಆರೈಕೆಯಲ್ಲಿ ಸೇವೆ ಸಲ್ಲಿಸಿದ್ದ ನರ್ಸ್ ಟಿ ಕೆ ಗಾನವಿ ಅವರು ಮರಣದ ನಂತರವೂ ತನ್ನ ಅಂಗಾಂಗ ದಾನ ಮಾಡಿದ್ದಾರೆ. ಈ ಮೂಲಕ ಹಲವು ಮಂದಿಗೆ ಪ್ರೇರಣೆಯಾಗಿದ್ದಾರೆ ಎಂದು ಹೇಳಿದ್ದಾರೆ.