ಸುರತ್ಕಲ್ :ಟೋಲ್ ಗೇಟ್ ಪ್ರತಿಭಟನೆ | ಆಪತ್ಭಾಂಧವ ಆಸೀಫ್ ಆರೋಗ್ಯದಲ್ಲಿ ಏರುಪೇರು!

ಮಂಗಳೂರು : ಅಪತ್ಭಾಂಧವ ಆಸೀಫ್ ಅವರು ಸುರತ್ಕಲ್ ಟೋಲ್ ಗೇಟ್ ಮುಚ್ಚುವಂತೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಇದೀಗ ಅವರ ಆರೋಗ್ಯ ಹದಗೆಟ್ಟಿದೆ ಎಂದು ವರದಿಯಾಗಿದೆ.

 

ಆಸಿಫ್ ಅವರು ತನ್ನ ದೇಹಕ್ಕೆ ಕಬ್ಬಿಣದ ಸರಪಳಿಯನ್ನು ಕಟ್ಟಿಕೊಂಡು ಫೆ.14 ರಂದು ಎರಡು ಗಂಟೆಗಳ ಕಾಲ ಕಂಬಕ್ಕೆ‌ ಕಟ್ಟಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ತೀವ್ರವಾದ ಬಿಸಿಲಿನಿಂದಾಗಿ ಈಗ ಅವರ ಆರೋಗ್ಯ ಹದಗೆಟ್ಟಿದ್ದು, ಪೊಲೀಸರು ಬಂದು ಚಿಕಿತ್ಸೆ ಪಡೆಯುವಂತೆ ಹೇಳಿದರೂ ಆಸಿಫ್ ಚಿಕಿತ್ಸೆಗೆ ಹೋಗುವುದನ್ನು ನಿರಾಕರಿಸಿದ್ದಾರೆ.

ಈ ಟೋಲ್ ಗೇಟ್ ಮುಚ್ಚುವವರೆಗೂ ನಾನು ಇಲ್ಲಿಂದ ಹೋಗುವುದಿಲ್ಲ ಎಂದಯ ಆಸಿಫ್ ದೃಢ ನಿಶ್ಚಯ ಮಾಡಿಕೊಂಡಿದ್ದಾರೆ. ಜಿಲ್ಲಾಧಿಕಾರಿ ನನ್ನ ಮನವಿ ಸ್ವೀಕರಿಸಬೇಕು. ಸಂಬಂಧಪಟ್ಟ ಎನ್ ಎಚ್ ಎಐ ಅಧಿಕಾರಿಗಳು ಟೋಲ್ ಗೇಟ್ ಮುಚ್ಚುತ್ತೇವೆ ಎಂದು ಹೇಳಿದರೆ ನಾನು ನನ್ನ ನಿರ್ಧಾರ ತಿಳಿಸುತ್ತೇನೆ ಎಂದು ಆಸಿಫ್ ಹೇಳಿದ್ದಾರೆ.

Leave A Reply

Your email address will not be published.