ಚೀನಾದ 54 ಆ್ಯಪ್ ಗಳನ್ನು ಬ್ಯಾನ್ ಮಾಡಿದ ಕೇಂದ್ರ ಸರಕಾರ!!!
ರಾಷ್ಟ್ರೀಯ ಭದ್ರತೆಗೆ ಮಾರಕವಾದ ಚೀನಾದ 54 ಆ್ಯಪ್ ಗಳನ್ನು ಕೇಂದ್ರ ಸರಕಾರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೋಮವಾರ ( ಫೆ.14 ) ಬ್ಯಾನ್ ಮಾಡಿದೆ.
ಬ್ಯೂಟಿ ಕ್ಯಾಮೆರಾ: ಸ್ವೀಟ್ ಸೆಲ್ಫಿ ಎಚ್ ಡಿ, ಬ್ಯೂಟಿ ಕ್ಯಾಮೆರಾ – ಸೆಲ್ಫಿ- ಸೆಲ್ಫಿ ಕ್ಯಾಮೆರಾ, ಈಕ್ವಲೈಜರ್ ಮತ್ತು ಬಾಸ್ ಬೂಸ್ಟರ್, ಕ್ಯಾಕ್ ಕಾರ್ಡ್ ಫಾರ್ ಸೇಲ್ಸ್ ಫೋರ್ಸ್ ಇಎನ್ ಟಿ, ಐಸೋಲ್ಯಾಂಡ್ 2: ಆ್ಯಶಸ್ ಆಫ್ ಟೈಮ್ ಲೈಟ್, ವಿವಾ ವೀಡಿಯೋ ಎಡಿಟರ್, ಟೆನ್ಸೆಂಟ್ ರಿವರ್, ಅನ್ ಮ್ಯೊಜಿ ಚೆನ್, ಆನ್ ಮ್ಯೊಜಿ ಅರೇನಾ, ಆ್ಯಪಲಾಕ್ ಮತ್ತು ಡ್ಯುಯೆಲ್ ಸ್ಪೇಸ್ ಲೈಟ್ ಸೇರಿದಂತೆ ಒಟ್ಟು 54 ಆ್ಯಪ್ ಗಳನ್ನು ಕೇಂದ್ರ ಸರಕಾರ ಬ್ಯಾನ್ ಮಾಡಿದೆ.
ಈ 54 ಆ್ಯಪ್ ಗಳಲ್ಲಿ ಈ ಹಿಂದೆ ಬ್ಯಾನ್ ಆಗಿದ್ದ ಆ್ಯಪ್ ಗಳು ಕೂಡಾ ಸೇರಿದೆ. ಏಕೆಂದರೆ ಈ ಹಿಂದೆ ಬ್ಯಾನ್ ಮಾಡಲಾಗಿದ್ದ ಆ್ಯಪ್ ಗಳನ್ನು ಹೊಸ ಹೆಸರಿನ ಮೂಲಕ ಮತ್ತೆ ಲಾಂಚ್ ಮಾಡಲಾಗಿದೆ. ಹೀಗಾಗಿ ಅಂತಹ ಆ್ಯಪ್ ಗಳು ಸೇರಿದಂತೆ 54 ಆ್ಯಪ್ ಗಳು ಬ್ಯಾನ್ ಆಗಲಿದೆ.
ಜೂನ್ 2021 ರಿಂದ ಪ್ರಖ್ಯಾತ ಆ್ಯಪ್ ಗಳಾದ ಟಿಕ್ ಟಾಕ್, ಹೆಲೋ, ಇಎಸ್ ಫೈಲ್ ಎಕ್ಸ್ ಫ್ಲೋರರ್, ಶೇರ್ ಇಟ್, ಲೈಕೀ, ಯುಸಿ ನ್ಯೂಸ್, ವೀಚಾಟ್, ಎಂಐ ಕಮ್ಯೂನಿಟಿ ಮತ್ತು ಇಎಸ್ ಫ್ ಎಕ್ಸ್ ಫ್ಲೋರರ್ ಸೇರಿದಂತೆ ಚೀನಾದ 224 ಆ್ಯಪ್ ಗಳನ್ನು ಸರಕಾರ ಬ್ಯಾನ್ ಮಾಡಿತ್ತು.