ಬೆಳ್ತಂಗಡಿ :ಧರ್ಮಸ್ಥಳ ಗ್ರಾಮದ ಶೌರ್ಯ ಎಸ್.ವಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 2022 ಗೆ ಆಯ್ಕೆ| 12 ವರ್ಷದಲ್ಲಿ 25 ಪ್ರಮಾಣಪತ್ರಗಳನ್ನು ಕರ್ನಾಟಕ ರಾಜ್ಯದಲ್ಲೇ ಪ್ರಥಮವಾಗಿದೆ ಗಳಿಸಿದ ಕೀರ್ತಿ ಈ ಬಾಲಕಿಗೆ
ಬೆಳ್ತಂಗಡಿ :ಸಾಧನೆಗೆ ವಯಸ್ಸು ಮುಖ್ಯವಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ ಈ ಪುಟ್ಟ ಜಾಣೆ.ಕನ್ಯಾಡಿ || ಸ.ಹಿ.ಪ್ರಾ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಶೌರ್ಯ ಎಸ್.ವಿ. ರವರುಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 2022 ಗೆ ಆಯ್ಕೆಯಾಗುವ ಮೂಲಕ ಊರಿಗೆ ಹೆತ್ತವರಿಗೆ ಕೀರ್ತಿ ತಂದುಕೊಟ್ಟಿದ್ದಾಳೆ.
ನ್ಯಾಷನಲ್ ಫೆಡರೇಶನ್ ಆಫ್ ಇಂಡಿಯಾದ ಮಹಾತ್ಮ ಗಾಂಧಿ ಕ್ವಿಝ್ ನಲ್ಲಿ ಭಾಗವಹಿಸಿ ಶೇ. 87 ಅಂಕ ಗಳಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 2022 ಗೆ ಆಯ್ಕೆಯಾಗಿದ್ದಾರೆ.ಶೌರ್ಯ ಎಸ್.ವಿ. ರವರು ಧರ್ಮಸ್ಥಳ ಗ್ರಾಮದ ನಾರ್ಯ ನಿವಾಸಿ ಕುಸುಮಾ ಸುರೇಶ್ ಗೌಡರವರ ಪುತ್ರಿ.
ಈಕೆ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು, ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ
25 ಪ್ರಮಾಣ ಪತ್ರಗಳನ್ನು ಪಡೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಆಯ್ಕೆಯಾಗಿದ್ದಾರೆ. 12 ವರ್ಷದ ಬಾಲಕಿ 25 ಪ್ರಮಾಣಪತ್ರಗಳನ್ನು ಗಳಿಸಿರುವುದು ಕರ್ನಾಟಕ ರಾಜ್ಯದಲ್ಲೇ ಪ್ರಥಮವಾಗಿದೆ.ಬಾಲ್ಯದಿಂದಲೇ ಚುವುಟಿ ಆಗಿರುವ ಶೌರ್ಯರಿಗೆ ಈ ಅವಾರ್ಡ್ ನಂತೆ ಇನ್ನಷ್ಟು ದೊಡ್ಡ ಪ್ರಶಸ್ತಿಗಳು ಆಕೆಯ ಪಾಲಾಗಲಿ ಎಂಬುದೇ ನಮ್ಮ ಆಶಯ.