ಆಧಾರ್ ಕಾರ್ಡ್ ಬಳಕೆದಾರರೇ ಗಮನಿಸಿ !! | ಯುಐಡಿಎಐ ನ ಈ ನಿಯಮಗಳನ್ನು ಪಾಲಿಸದಿದ್ದರೆ 1 ಕೋಟಿ ರೂ. ದಂಡ ತೆರಬೇಕಾದೀತು ಎಚ್ಚರ
ಭಾರತೀಯ ಪ್ರಜೆಗಳನ್ನು ಗುರುತಿಸಲು ಆಧಾರ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ಕಾರ್ಡ್ ಮಾಹಿತಿಯಿಂದ ಅನೇಕ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)ವು ಅನೇಕ ಸೇವೆಗಳನ್ನು ಆರಂಭಿಸಿದೆ. ಸರ್ಕಾರಿ ಮತ್ತು ಸರ್ಕಾರಿಯೇತರ ಅನೇಕ ಕೆಲಸಗಳನ್ನು ಮಾಡಿಕೊಳ್ಳಲು ಆಧಾರ್ನಲ್ಲಿ 12 ನಂಬರ್ ವೆರಿಫೈ ಅತಿ ಮುಖ್ಯವಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ.
ವೋಟರ್ ಐಡಿ, ಪಾನ್ ಕಾರ್ಡ್ ಮತ್ತು ಇತರ ಗುರುತಿನ ಮೂಲಗಳಿಗಿಂತ ಭಿನ್ನವಾಗಿ ನಿಲ್ಲುವ ಆಧಾರ್ ಹಲವಾರು ಉದ್ದೇಶಗಳನ್ನು ಪೂರೈಸುತ್ತದೆ. ಆದರೆ, ಅದೇ ಆಧಾರ್ ಕಾರ್ಡನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಕರಣಗಳನ್ನು ಕೇಳಿದ್ದೇವೆ.
ಆಧಾರ್ ದುರ್ಬಳಕೆಯಂತಹ ಸಮಸ್ಯೆಗಳನ್ನು ನಿಭಾಯಿಸಲು, UIDAI ಇತ್ತೀಚೆಗೆ ಆಧಾರ್ ನಿಯಮ ಉಲ್ಲಂಘನೆ ಅಡಿಯಲ್ಲಿ ವಂಚಕರ ಮೇಲೆ ಭಾರಿ ದಂಡವನ್ನು ವಿಧಿಸಲು ಅನುಮತಿ ನೀಡಿದೆ. ಆಧಾರ್ ಉಲ್ಲಂಘಿಸುವವರನ್ನು ವಿಚಾರಣೆಗೆ ಒಳಪಡಿಸುವ ಅಧಿಕಾರಿಗಳನ್ನು ನೇಮಿಸುವಂತೆ 2021ರ ನವೆಂಬರ್ನಲ್ಲಿ ಭಾರತ ಸರ್ಕಾರವು UIDAIಗೆ ಸೂಚನೆ ನೀಡಿತ್ತು.
ಸರ್ಕಾರವು 2021ರ ನವೆಂಬರ್ 2 ರಂದು UIDAI ನಿಯಮಗಳನ್ನು ಸೂಚಿಸಿದೆ. ಅದರ ಅಡಿಯಲ್ಲಿ ಕಾಯಿದೆ ಅಥವಾ UIDAI ನ ನಿರ್ದೇಶನಗಳನ್ನು ಅನುಸರಿಸಲು ವಿಫಲವಾದ ಯಾವುದೇ ವ್ಯಕ್ತಿ ಅಥವಾ ಘಟಕದ ವಿರುದ್ಧ ದೂರನ್ನು ದಾಖಲಿಸಲಾಗುತ್ತದೆ. UIDAI ನೇಮಿಸಿದ ಅಧಿಕಾರಿಯು ದೂರನ್ನು ನಿರ್ಣಯಿಸುವ ಜವಾಬ್ದಾರಿ ಹೊಂದಿರುತ್ತಾರೆ. ನಿಯಮ ಉಲ್ಲಂಘನೆ ಸಾಬೀತಾದಲ್ಲಿ ಅಂತಹ ಸಂಸ್ಥೆಗಳ ಮೇಲೆ 1 ಕೋಟಿ ರೂ.ವರೆಗೂ ದಂಡವನ್ನು ವಿಧಿಸಲು ಅಧಿಕಾರಿಗೆ ಅವಕಾಶವಿದೆ.
ಯುಐಡಿಎಐನ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸದ ಆಧಾರ್ ಪರಿಸರ ವ್ಯವಸ್ಥೆಯೊಂದಿಗೆ ಕೆಲಸ ಮಾಡುವ ಯಾವುದೇ ಸಂಸ್ಥೆಗೆ ದಂಡ ವಿಧಿಸಲಾಗುವುದು ಎಂದು ಸರ್ಕಾರ ಯುಐಡಿಎಐಗೆ ಸೂಚನೆ ನೀಡಿದೆ. ಯುಐಡಿಎಐ ನಿಯಮಗಳು, 2021 ಅನ್ನು ಜಾರಿಗೆ ತರುವ ಶಾಸನವನ್ನು 2019ರಲ್ಲಿ ಅಂಗೀಕರಿಸಲಾಯಿತು ಎಂಬುದು ಗಮನಿಸಬೇಕಾದ ಅಂಶವಾಗಿದೆ.
ಆಧಾರ್ ಕಾರ್ಡುದಾರರು ತಮ್ಮನ್ನು ರಕ್ಷಿಸಿಕೊಳ್ಳಲು ನಿಯಮಿತವಾಗಿ ತಮ್ಮ ಕಾರ್ಡ್ ಗಳನ್ನು ಮೌಲ್ವಿಕರಿಸಲು ಖಚಿತಪಡಿಸಿಕೊಳ್ಳಬೇಕು. ವಂಚಕ ತಮ್ಮ ಕಾರ್ಡ್ ಮಾಹಿತಿಯನ್ನು ಬಳಸಿಕೊಳ್ಳುವುದನ್ನು ತಡೆಯಲು ಕಾರ್ಡುದಾರರು ನಿಯಮಿತವಾಗಿ ತಮ್ಮ ಆಧಾರ್ ಅನ್ನು ಪರಿಶೀಲಿಸಬೇಕು ಎಂದು ಯುಐಡಿ ಹೇಳಿದೆ.